Samsung Galaxy F22: ಇಂದು ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಫ್​22 ಬಿಡುಗಡೆ: ಏನಿದರ ಬೆಲೆ ಮತ್ತು ವಿಶೇಷ?

| Updated By: Digi Tech Desk

Updated on: Jul 06, 2021 | 3:28 PM

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಫ್​22: ಭಾರತದಲ್ಲಿ ಇಂದು ಸ್ಯಾಮ್​ಸಂಗ್ ಎಫ್22 ಫೋನ್ ಬಿಡುಗಡೆಗೊಂಡಿದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳನ್ನು ಹೊಂದಿರುವ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸುವ ನಿರೀಕ್ಷೆ ಇದೆ.

Samsung Galaxy F22: ಇಂದು ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಫ್​22 ಬಿಡುಗಡೆ: ಏನಿದರ ಬೆಲೆ ಮತ್ತು ವಿಶೇಷ?
Sansung Galaxy f22
Follow us on

ಬಹುನಿರೀಕ್ಷಿತ, ಉತ್ತಮ ಗುಣಮಟ್ಟದ, ಮಧ್ಯಮ ಬೆಲೆಯ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಫ್​22 ಇಂದು ಭಾರತದಲ್ಲಿ ಬಿಡುಗಡೆಗೊಂಡಿದೆ. ಮೀಡಿಯಾಟೆಕ್ ಚಿಪ್​ಸೆಟ್ ಮತ್ತು ಅತ್ಯುತ್ತಮ ಗುಣಮಟ್ಟದ ಅಮೋಲ್ಡ್ ಡಿಸ್ಪ್ಲೆ ಹೊಂದಿರುವುದು ಈ ಫೋನ್​ನ ವೈಶಿಷ್ಟ್ಯ. ಇದು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿ ಭರವಸೆಯನ್ನು ಮೂಡಿಸಿದೆ. ಜುಲೈ 13ರಿಂದ ಈ ಫೋನ್ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

ಕ್ಯಾಮೆರಾ:
ಸ್ಯಾಮ್​ಸಂಗ್ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಎಫ್​22 ಫೋನ್ ಎಫ್ ಅವತರಣಿಕೆಯ ಮೊಬೈಲ್​ಗಳಲ್ಲಿ ನಾಲ್ಕನೆಯದು. ಇದು ಅತ್ಯುತ್ತಮ ಗುಣಮಟ್ಟದ ಡಿಸ್ಪ್ಲೇಯನ್ನು ಹೊಂದಿದೆ. ನಾಲ್ಕು ಮುಖ್ಯವಾದ ಕ್ಯಾಮೆರಾವನ್ನು ಒಳಗೊಂಡಿರುವ ಇದರಲ್ಲಿ ಮೂಲ ಕ್ಯಾಮೆರಾವು 48MP ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಜೊತೆಗೆ 8MP ಅಲ್ಟ್ರಾ ವೈಡ್ ಲೆನ್ಸ್, 2MP ಮ್ಯಾಕ್ರೊ ಲೆನ್ಸ್ ಹಾಗೂ 2MP ಡೆಪ್ತ್ ಸೆನ್ಸಾರ್​ ಅನ್ನು ಒಳಗೊಂಡಿದೆ. ಎದುರು ಭಾಗದ ಸೆಲ್ಫಿ ಕ್ಯಾಮೆರಾವು 13MP ಸಾಮರ್ಥ್ಯವನ್ನು ಹೊಂದಿದ್ದು ಉನ್ನತ ದರ್ಜೆಯ ಸೆಲ್ಫಿ ಚಿತ್ರಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ.

ಇತರ ವೈಶಿಷ್ಟ್ಯಗಳು:
ಎಫ್22 ಫೋನ್​ನ ಡಿಸ್​ಪ್ಲೆಯು 6.4 ಇಂಚು ದೊಡ್ಡದಿದೆ. ಇದು ಅಮೋಲ್ಡ್ ಪ್ಯಾನೆಲ್​ನೊಂದಿಗೆ 90Hz ರಿಫ್ರೆಶ್ ರೇಟ್ ಹೊಂದಿದೆ. ಈ ಫೋನ್​ನ ಅತ್ಯುತ್ತಮ ವೈಶಿಷ್ಟವೆಂದರೆ ಇದರ ಬ್ಯಾಟರಿ ಸಾಮರ್ಥ್ಯ. 6000mAh ಸಾಮರ್ಥ್ಯದ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಇದು ಒಳಗೊಂಡಿದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ 1TB ಸಾಮರ್ಥ್ಯದವರೆಗಿನ ಮೈಕ್ರೊ ಎಸ್​ಡಿ ಕಾರ್ಡ್ ಬಳಸಬಹುದಾದ ಪ್ರತ್ಯೇಕ ಸ್ಥಳವನ್ನು ಹೊಂದಿರುವುದು. ಈ ಫೋನ್ ಮೀಡಿಯಾಟೆಕ್ ಹೀಲಿಯೊ ಜಿ80 ಎಸ್​ಒಸಿ (MediaTek Helio G80 SoC) ಪ್ರೊಸೆಸರ್ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಫೇಸ್ ಅನ್​ಲಾಕ್, ಸೈಡ್ ಮೌಂಟೆಡ್ ಫಿಂಗರ್​ಪ್ರಿಂಟ್ ಮೊದಲಾದ ಆಧುನಿಕ ಆಯ್ಕೆಗಳನ್ನು ಈ ಸ್ಯಾಮ್​ಸಂಗ್ ಎಫ್22 ಒಳಗೊಂಡಿದೆ.

ದರ ಮತ್ತು ಲಭ್ಯತೆ:
ಸ್ಯಾಮ್​ಸಂಗ್ ಎಫ್​22 4ಜಿಬಿ RAM, 64 ಜಿಬಿ ಹೊಂದಿರುವ ಫೋನ್​ನ ಮಾರುಕಟ್ಟೆ ದರ 12,499ರೂ ಎಂದು ನಿಗದಿಪಡಿಸಲಾಗಿದೆ. 6ಜಿಬಿ RAM ಹಾಗೂ 128ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್​ಗೆ 14,999ರೂ ಎಂದು ದರವನ್ನು ನಿಶ್ಚಯಿಸಲಾಗಿದೆ. ಈ ಫೋನ್ ಕಪ್ಪು(Denim Black) ಮತ್ತು ನೀಲಿ(Denim Blue) ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಈ ಫೋನ್ ಜುಲೈ 13ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್​ಕಾರ್ಟ್ ಮತ್ತು ಸ್ಯಾಮ್​ಸಂಗ್ ಅಫಿಶಿಯಲ್ ಸ್ಟೋರ್​ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈಗಾಗಲೇ ಫ್ಲಿಪ್​ಕಾರ್ಟ್​ನ ಫೀಡ್​ನಲ್ಲಿ ಇದು ಕಾಣಿಸಿಕೊಂಡಿದೆ. ಮಧ್ಯಮ ದರದ ಉತ್ತಮ ಗುಣಮಟ್ಟದಈ ಫೋನ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: Apple iPhone: ಆಪಲ್​ನಿಂದ ಸೆಪ್ಟೆಂಬರ್​ನಲ್ಲಿ ಐಫೋನ್​ 13, ವಾಚ್ 7 ಸಿರೀಸ್, M1X ಮ್ಯಾಕ್​ಬುಕ್​ ಪ್ರೊ ಬಿಡುಗಡೆ ನಿರೀಕ್ಷೆ

(Samsung launches new Galaxy F22 Phone in India)