Nokia G20: ನೋಕಿಯಾ ಜಿ20 ಭಾರತದಲ್ಲಿ ಬಿಡುಗಡೆ; ವೈಶಿಷ್ಟ್ಯ, ಬೆಲೆ ಮತ್ತು ವಿಶೇಷತೆಗಳೇನು?
ನೋಕಿಯಾ ಜಿ20: ನೋಕಿಯಾ ಜಿ20 ಫೋನ್ಸೆಟ್ ಎರಡು ಬಣ್ಣದಲ್ಲಿ ಸಿಗುತ್ತವೆ. ಅತ್ಯದ್ಭುತ ಬ್ಯಾಕ್ ಕ್ಯಾಮರಾ ಮತ್ತು ಸೆಲ್ಫೀ ಕ್ಯಾಮರಾದೊಂದಿಗೆ ಜನಮನ ಸೆಳೆಯುವ ನಿರೀಕ್ಷೆ ಇದೆ. ಜುಲೈ 15ರಿಂದ ನೋಕಿಯಾ ಖರೀದಿಗೆ ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುತ್ತದೆ.
ತನ್ನದೇ ಆದ ಛಾಪು ಮೂಡಿಸಿ ಯುವಜನತೆಯನ್ನು ಸೆಳೆಯುತ್ತಿರುವ ನೋಕಿಯಾ ಇದೀಗ ಹೊಸ ಮಾಡೆಲ್ ಫೋನ್ವೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ನೋಕಿಯಾ ಜಿ20 ಹ್ಯಾಂಡ್ಸೆಟ್ ಎರಡು ಬಣ್ಣದಲ್ಲಿ ಸಿಗುತ್ತವೆ. ಅತ್ಯದ್ಭುತ ಬ್ಯಾಕ್ ಕ್ಯಾಮರಾ ಮತ್ತು ಸೆಲ್ಫೀ ಕ್ಯಾಮರಾದೊಂದಿಗೆ ಜನಮನ ಸೆಳೆಯುವ ನಿರೀಕ್ಷೆ ಇದೆ. ಜುಲೈ 15ರಿಂದ ನೋಕಿಯಾ ಖರೀದಿಗೆ ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುತ್ತದೆ.
ಕೆಲವು ತಿಂಗಳ ಹಿಂದೆ ತನ್ನ ಜಿ, ಸಿ ಮತ್ತು ಎಕ್ಸ್ ಸರಣಿಯ ಮಾಡೆಲ್ ಫೋನ್ಗಳನ್ನು ಬಿಡುಗಡೆಗೊಳಿಸಿದ ನೋಕಿಯಾ ಇದೀಗ ಹೊಸ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕ್ಯಾಮರಾ ಮತ್ತು ಉತ್ತಮ ಗುಣಮಟ್ಟದ ಬ್ಯಾಟರಿ ವ್ಯವಸ್ಥೆಯು ಬಳಕೆದಾರರನ್ನು ಮೆಚ್ಚಿಸುವಂತಿದೆ ಎಂದು ನೋಕಿಯಾ ಹೇಳಿಕೊಂಡಿದೆ.
ನೋಕಿಯಾ ಜಿ20 ವೈಶಿಷ್ಟ್ಯಗಳು ಡುಯೆಲ್ ಸಿಮ್ (ನ್ಯಾನೋ) ನೋಕಿಯಾ ಜಿ20 20:09 ಅನುಪಾತದೊಂದಿಗೆ 6.5 ಇಂಚಿನ ಫೋನ್ ಆಗಿದೆ. ಜತೆಗೆ ಹೆಚ್ಡಿ+ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. 4 ಜಿಬಿ RAM ಮತ್ತು 64 ಜಿಬಿ ಮೆಮೊರಿಯನ್ನು ಹೊಂದಿದೆ. ಜತೆಗೆ ಎಸ್ಡಿ ಕಾರ್ಡ್ ಅಳವಡಿಕೆಯನ್ನೂ ನೀಡಲಾಗಿದೆ. ಒಟ್ಟು 152 ಜಿಬಿ ವರೆಗೆ ಮೆಮೊರಿ ಸಂಗ್ರಹಿಸಬಹುದು.
ನೋಕಿಯಾ ಜಿ20 ಬೆಲೆ ನೋಕಿಯಾ ಜಿ20 ಮಾಡೆಲ್ ಹ್ಯಾಂಡ್ಸೆಟ್ಗೆ 12,999 ರೂಪಾಯಿ. ನಾಳೆ ಜುಲೈ 7 ಮಧ್ಯಾಹ್ನ 12 ಗಂಟೆಗೆ ಅಮೇಜಾನ್ ಮತ್ತು ನೋಕಿಯಾ ವೆಬ್ಸೈಟ್ ಮೂಲಕ ಬುಕ್ಕಿಂಗ್ ಪ್ರಾರಂಭವಾಗಲಿದೆ. ನೋಕಿಯಾ ಜಿ20ಅನ್ನು ಅಮೇಜಾನ್ ಇಂಡಿಯಾದಲ್ಲಿ ಗುರುತಿಸಲಾಗಿದೆ. ಜುಲೈ 15 ರಿಂದ ಈ ಹೊಸ ಮಾದರಿಯ ಹ್ಯಾಂಡ್ಸೆಟ್ ಗ್ರಾಹಕರಿಗೆ ಲಭ್ಯವಾಗಲಿದೆ.
ಇದು ಒಟ್ಟು 5 ಕ್ಯಾಮರಾಗಳನ್ನು ಹೊಂದಿದೆ. ಹಿಂಭಾಗದಲ್ಲಿ 4 ಮತ್ತು ಸೆಲ್ಫಿ ಕ್ಯಾಮರಾ ಒಂದು. ಹಿಂಭಾಗದಲ್ಲಿ 48mp ಮುಖ್ಯ ಕ್ಯಾಮರಾ ಜತೆಗೆ 5mp ಮತ್ತು 2mp ಕ್ಯಾಮರಾಗಳನ್ನು ಹೊಂದಿದೆ. ಸೆಲ್ಫಿಗಾಗಿ 8mp ಕ್ಯಾಮರಾ ಅಳವಡಿಸಲಾಗಿದೆ. 5,050 mah ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.
ಇದನ್ನೂ ಓದಿ:
Samsung Galaxy F22: ಇಂದು ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್22 ಬಿಡುಗಡೆ: ಏನಿದರ ಬೆಲೆ ಮತ್ತು ವಿಶೇಷ?
Nokia new phones launch: ಎಚ್ಎಂಡಿ ಗ್ಲೋಬಲ್ನಿಂದ 10,000 ರೂ. ಒಳಗಿನ ನೋಕಿಯಾ C20 ಸ್ಮಾರ್ಟ್ಫೋನ್ ಬಿಡುಗಡೆ!
Published On - 5:57 pm, Tue, 6 July 21