Samsung Galaxy F22: ಇಂದು ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್22 ಬಿಡುಗಡೆ: ಏನಿದರ ಬೆಲೆ ಮತ್ತು ವಿಶೇಷ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್22: ಭಾರತದಲ್ಲಿ ಇಂದು ಸ್ಯಾಮ್ಸಂಗ್ ಎಫ್22 ಫೋನ್ ಬಿಡುಗಡೆಗೊಂಡಿದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳನ್ನು ಹೊಂದಿರುವ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸುವ ನಿರೀಕ್ಷೆ ಇದೆ.
ಬಹುನಿರೀಕ್ಷಿತ, ಉತ್ತಮ ಗುಣಮಟ್ಟದ, ಮಧ್ಯಮ ಬೆಲೆಯ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್22 ಇಂದು ಭಾರತದಲ್ಲಿ ಬಿಡುಗಡೆಗೊಂಡಿದೆ. ಮೀಡಿಯಾಟೆಕ್ ಚಿಪ್ಸೆಟ್ ಮತ್ತು ಅತ್ಯುತ್ತಮ ಗುಣಮಟ್ಟದ ಅಮೋಲ್ಡ್ ಡಿಸ್ಪ್ಲೆ ಹೊಂದಿರುವುದು ಈ ಫೋನ್ನ ವೈಶಿಷ್ಟ್ಯ. ಇದು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿ ಭರವಸೆಯನ್ನು ಮೂಡಿಸಿದೆ. ಜುಲೈ 13ರಿಂದ ಈ ಫೋನ್ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಕ್ಯಾಮೆರಾ: ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಎಫ್22 ಫೋನ್ ಎಫ್ ಅವತರಣಿಕೆಯ ಮೊಬೈಲ್ಗಳಲ್ಲಿ ನಾಲ್ಕನೆಯದು. ಇದು ಅತ್ಯುತ್ತಮ ಗುಣಮಟ್ಟದ ಡಿಸ್ಪ್ಲೇಯನ್ನು ಹೊಂದಿದೆ. ನಾಲ್ಕು ಮುಖ್ಯವಾದ ಕ್ಯಾಮೆರಾವನ್ನು ಒಳಗೊಂಡಿರುವ ಇದರಲ್ಲಿ ಮೂಲ ಕ್ಯಾಮೆರಾವು 48MP ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಜೊತೆಗೆ 8MP ಅಲ್ಟ್ರಾ ವೈಡ್ ಲೆನ್ಸ್, 2MP ಮ್ಯಾಕ್ರೊ ಲೆನ್ಸ್ ಹಾಗೂ 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಎದುರು ಭಾಗದ ಸೆಲ್ಫಿ ಕ್ಯಾಮೆರಾವು 13MP ಸಾಮರ್ಥ್ಯವನ್ನು ಹೊಂದಿದ್ದು ಉನ್ನತ ದರ್ಜೆಯ ಸೆಲ್ಫಿ ಚಿತ್ರಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ.
ಇತರ ವೈಶಿಷ್ಟ್ಯಗಳು: ಎಫ್22 ಫೋನ್ನ ಡಿಸ್ಪ್ಲೆಯು 6.4 ಇಂಚು ದೊಡ್ಡದಿದೆ. ಇದು ಅಮೋಲ್ಡ್ ಪ್ಯಾನೆಲ್ನೊಂದಿಗೆ 90Hz ರಿಫ್ರೆಶ್ ರೇಟ್ ಹೊಂದಿದೆ. ಈ ಫೋನ್ನ ಅತ್ಯುತ್ತಮ ವೈಶಿಷ್ಟವೆಂದರೆ ಇದರ ಬ್ಯಾಟರಿ ಸಾಮರ್ಥ್ಯ. 6000mAh ಸಾಮರ್ಥ್ಯದ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಇದು ಒಳಗೊಂಡಿದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ 1TB ಸಾಮರ್ಥ್ಯದವರೆಗಿನ ಮೈಕ್ರೊ ಎಸ್ಡಿ ಕಾರ್ಡ್ ಬಳಸಬಹುದಾದ ಪ್ರತ್ಯೇಕ ಸ್ಥಳವನ್ನು ಹೊಂದಿರುವುದು. ಈ ಫೋನ್ ಮೀಡಿಯಾಟೆಕ್ ಹೀಲಿಯೊ ಜಿ80 ಎಸ್ಒಸಿ (MediaTek Helio G80 SoC) ಪ್ರೊಸೆಸರ್ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಫೇಸ್ ಅನ್ಲಾಕ್, ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಮೊದಲಾದ ಆಧುನಿಕ ಆಯ್ಕೆಗಳನ್ನು ಈ ಸ್ಯಾಮ್ಸಂಗ್ ಎಫ್22 ಒಳಗೊಂಡಿದೆ.
ದರ ಮತ್ತು ಲಭ್ಯತೆ: ಸ್ಯಾಮ್ಸಂಗ್ ಎಫ್22 4ಜಿಬಿ RAM, 64 ಜಿಬಿ ಹೊಂದಿರುವ ಫೋನ್ನ ಮಾರುಕಟ್ಟೆ ದರ 12,499ರೂ ಎಂದು ನಿಗದಿಪಡಿಸಲಾಗಿದೆ. 6ಜಿಬಿ RAM ಹಾಗೂ 128ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ಗೆ 14,999ರೂ ಎಂದು ದರವನ್ನು ನಿಶ್ಚಯಿಸಲಾಗಿದೆ. ಈ ಫೋನ್ ಕಪ್ಪು(Denim Black) ಮತ್ತು ನೀಲಿ(Denim Blue) ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಈ ಫೋನ್ ಜುಲೈ 13ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ಕಾರ್ಟ್ ಮತ್ತು ಸ್ಯಾಮ್ಸಂಗ್ ಅಫಿಶಿಯಲ್ ಸ್ಟೋರ್ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈಗಾಗಲೇ ಫ್ಲಿಪ್ಕಾರ್ಟ್ನ ಫೀಡ್ನಲ್ಲಿ ಇದು ಕಾಣಿಸಿಕೊಂಡಿದೆ. ಮಧ್ಯಮ ದರದ ಉತ್ತಮ ಗುಣಮಟ್ಟದಈ ಫೋನ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: Apple iPhone: ಆಪಲ್ನಿಂದ ಸೆಪ್ಟೆಂಬರ್ನಲ್ಲಿ ಐಫೋನ್ 13, ವಾಚ್ 7 ಸಿರೀಸ್, M1X ಮ್ಯಾಕ್ಬುಕ್ ಪ್ರೊ ಬಿಡುಗಡೆ ನಿರೀಕ್ಷೆ
(Samsung launches new Galaxy F22 Phone in India)