ಸಾರ್ವಜನಿಕ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಿಂದ ತನ್ನ ಕೋಟ್ಯಂತರ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಗ್ರಾಹಕರ ಅನುಭವ ಸುಧಾರಿಸುವ ಉದ್ದೇಶದಿಂದ ಮೇ 7 ರಂದು ರಾತ್ರಿ 10.15ರಿಂದ ಮೇ 8ರ ಮಧ್ಯರಾತ್ರಿ 1. 45ರ ತನಕ ಬ್ಯಾಂಕ್ನ ನಿರ್ವಹಣಾ ಕಾರ್ಯ ಇರಲಿದೆ ಎಂದು ಬ್ಯಾಂಕ್ ಹೇಳಿದೆ. ಈ ಸಮಯದಲ್ಲಿ ಎಸ್‌ಬಿಐ ಗ್ರಾಹಕರು ಐಎನ್‌ಬಿ / ಯೋನೊ / ಯೋನೊ ಲೈಟ್ / ಯುಪಿಐ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ.
ಇನ್ನು ಎಸ್‌ಬಿಐನಿಂದ ಗ್ರಾಹಕರಿಗೆ ಅನುಕೂಲದ ಸುದ್ದಿಯನ್ನೂ ನೀಡಿದೆ. ಅದೇನೆಂದರೆ, ಗ್ರಾಹಕರು ಈಗ ಅಂಚೆ ಅಥವಾ ಇ-ಮೇಲ್ ಮೂಲಕ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಡಾಕ್ಯುಮೆಂಟ್ (ಕೆವೈಸಿ ದಾಖಲೆಗಳನ್ನು) ಸಲ್ಲಿಸಬಹುದು. ಎಸ್‌ಬಿಐ ಪೋಸ್ಟ್ ಅಥವಾ ಮೇಲ್ ಮೂಲಕ ಕೆವೈಸಿ ದಾಖಲೆಗಳನ್ನು ಸ್ವೀಕರಿಸಲು ಪ್ರಾರಂಭಿಸಿರುವುದರಿಂದ ಇತರ ಬ್ಯಾಂಕುಗಳ ಗ್ರಾಹಕರಲ್ಲೂ ಭರವಸೆ ಮೂಡಿದೆ. ಈಗ ದೇಶದ ಇತರ ಸಾರ್ವಜನಿಕ ವಲಯದ ಬ್ಯಾಂಕ್ಗಳು ಸಹ ಇದನ್ನು ಮಾಡಬಹುದು ಎಂದು ನಂಬಲಾಗಿದೆ. ಇದು ಮಾತ್ರವಲ್ಲ, ಖಾಸಗಿ ವಲಯದ ಬ್ಯಾಂಕ್ಗಳು ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರಿಗೆ ಅನುಕೂಲವನ್ನು ಒದಗಿಸುತ್ತವೆ. ಆದ್ದರಿಂದ ಅವರು ಅದೇ ರೀತಿ ಮಾಡುತ್ತಾರೆಂದು ನಿರೀಕ್ಷಿಸಲಾಗಿದೆ.
ಬ್ಯಾಂಕ್ಗಳು ತಮ್ಮ ಗ್ರಾಹಕರ ರೇಟಿಂಗ್ ಅನ್ನು ರಿಸ್ಕ್ ಆಧಾರದ ಮೇಲೆ ಮಾಡುತ್ತವೆ. ಬ್ಯಾಂಕ್ನ ದೃಷ್ಟಿಯಲ್ಲಿ ಹೆಚ್ಚು ರಿಸ್ಕ್ ಇರುವಂಥ ಗ್ರಾಹಕರು ಪ್ರತಿ ಎರಡು ವರ್ಷಗಳಿಗೊಮ್ಮೆ ಕೆವೈಸಿಯನ್ನು ನವೀಕರಿಸಬೇಕಾಗುತ್ತದೆ. ಯಾವ ಗ್ರಾಹಕರ ರಿಸ್ಕ್ ಪ್ರಮಾಣ ಮಧ್ಯಮವಾಗಿರುತ್ತದೋ ಅಂಥದ್ದನ್ನು ಎಂಟು ವರ್ಷಗಳಿಗೊಮ್ಮೆ ಕೆವೈಸಿಯನ್ನು ನವೀಕರಿಸಬೇಕಾಗುತ್ತದೆ. ಅಪಾಯವು ತುಂಬಾ ಕಡಿಮೆ ಅಥವಾ ಕಡಿಮೆ ಇರುವ ಗ್ರಾಹಕರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಕೆವೈಸಿಯನ್ನು ನವೀಕರಿಸಬೇಕಾಗುತ್ತದೆ.
We request our esteemed customers to bear with us as we strive to provide a better banking experience.
#SBI #StateBankOfIndia #ImportantNotice #InternetBanking #OnlineSBI pic.twitter.com/JogglXemol— State Bank of India (@TheOfficialSBI) May 6, 2021
ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್‌ಬಿಐ
(SBI maintenance on May 7th and 8th. So, these services will not be available to customers.)
Published On - 9:03 pm, Thu, 6 May 21