8 ಲಕ್ಷ ರೂ. ಗೆಲ್ಲುವ ಅವಕಾಶ: ಒಂದು ತಿಂಗಳು ಫೋನ್ ಇಲ್ಲದೆ ಇರಬಹುದೇ?, ಹಾಗಿದ್ರೆ ಹೆಸರು ಕೊಡಿ

|

Updated on: Jan 25, 2024 | 11:22 AM

ಐಸ್ಲ್ಯಾಂಡಿಕ್ ಬ್ರಾಂಡ್ 'ಸಿಗ್ಗಿ' ಜನರಿಗಾಗಿ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧಿಗಳು ಒಂದು ತಿಂಗಳ ಕಾಲ ತಮ್ಮ ಜೀವನದಿಂದ ಫೋನ್‌ಗಳನ್ನು ದೂರವಿಡಬೇಕಾಗುತ್ತದೆ. 10 ಅದೃಷ್ಟಶಾಲಿಗಳಿಗೆ 10 ಸಾವಿರ ಡಾಲರ್ ಅಂದರೆ ಸುಮಾರು 8.31 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

8 ಲಕ್ಷ ರೂ. ಗೆಲ್ಲುವ ಅವಕಾಶ: ಒಂದು ತಿಂಗಳು ಫೋನ್ ಇಲ್ಲದೆ ಇರಬಹುದೇ?, ಹಾಗಿದ್ರೆ ಹೆಸರು ಕೊಡಿ
Smartphone
Follow us on

ಮೊಬೈಲ್ ಫೋನ್‌ಗಳು (Mobile Phone) ನಮ್ಮ ಜೀವನದ ಅತಿ ದೊಡ್ಡ ಅಗತ್ಯಗಳಲ್ಲಿ ಒಂದಾಗಿದೆ. ಈಗ ಕರೆಗಳಿಗಾಗಿ ಮಾತ್ರ ಫೋನ್ ಅನ್ನು ಉಪಯೋಗಿಸುತ್ತಿಲ್ಲ, ಸಾಮಾಜಿಕ ಜಾಲತಾಣಗಳು, ಮನರಂಜನೆ, ದಿನನಿತ್ಯದ ಸುದ್ದಿ, ಎಲ್ಲವೂ ಫೋನ್ ಮೂಲವೇ ಪಡೆಯುತ್ತೇಔಎ. ಟಿಕೆಟ್ ಬುಕಿಂಗ್, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮುಂತಾದ ಕಾರ್ಯಗಳನ್ನು ಫೋನ್ ಮೂಲಕವೇ ಮಾಡಲಾಗುತ್ತಿದೆ. ಫೋನ್​ನೊಂದಿಗೇ ಜೀವಿಸುತ್ತಿರುವಾಗ ಒಂದು ತಿಂಗಳು ಈ ಸ್ಮಾರ್ಟ್​ಫೋನ್​ನಿಂದ ದೂರ ಇರಬಹುದೇ?. ನೀವು ಈ ಸವಾಲನ್ನು ಸ್ವೀಕರಿಸಿದರೆ ಸುಮಾರು 8 ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ.

ಐಸ್ಲ್ಯಾಂಡಿಕ್ ಬ್ರಾಂಡ್ ‘ಸಿಗ್ಗಿ’ ಜನರಿಗಾಗಿ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧಿಗಳು ಒಂದು ತಿಂಗಳ ಕಾಲ ತಮ್ಮ ಜೀವನದಿಂದ ಫೋನ್‌ಗಳನ್ನು ದೂರವಿಡಬೇಕಾಗುತ್ತದೆ. 10 ಅದೃಷ್ಟಶಾಲಿಗಳಿಗೆ 10 ಸಾವಿರ ಡಾಲರ್ ಅಂದರೆ ಸುಮಾರು 8.31 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

Power Bank Charging: ಸ್ಮಾರ್ಟ್​ಫೋನ್ ಚಾರ್ಜ್ ಮಾಡೋಕೆ ಪವರ್​ಬ್ಯಾಂಕ್ ಬಳಸ್ತೀರಾ?

ಇದನ್ನೂ ಓದಿ
ನೋಟ್ 50: ರಿಯಲ್ ಮಿಯಿಂದ ಬಂತು ಮೊಟ್ಟ ಮೊದಲ ನೋಟ್ ಸ್ಮಾರ್ಟ್​ಫೋನ್
ಭಾರತದಲ್ಲಿ ಬಿಡುಗಡೆ ಆಗಿದೆ ಒನ್​ಪ್ಲಸ್ 12, 12R ಸ್ಮಾರ್ಟ್​ಫೋನ್ಸ್: ಬೆಲೆ?
ಗೂಗಲ್ ಪೇ ಆ್ಯಪ್ ಬಳಕೆ ಮಾಡ್ತಾ ಇದ್ದೀರಾ?
ಮೊಬೈಲ್ ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ?

‘SIGGI’ ಈ ಸ್ಪರ್ಧೆಗೆ ‘ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ’ ಎಂದು ಹೆಸರಿಟ್ಟಿದೆ. ಇದರಲ್ಲಿ ಭಾಗವಹಿಸುವ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳು ಅಥವಾ ಫೋನ್‌ಗಳಿಂದ ದೂರವಿರಬೇಕು, ಅದೂ ಒಂದು ತಿಂಗಳ ಕಾಲ. ಅವರು ಇದನ್ನು ಮಾಡಲು ಸಾಧ್ಯವಾದರೆ 10 ಸಾವಿರ ಡಾಲರ್‌ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವಿರುತ್ತದೆ.

ಈ ಸ್ಪರ್ಧೆಯ ಮೂಲಕ ಜನರಿಗೆ ಸಾಮಾನ್ಯ ಪ್ರಪಂಚದೊಂದಿಗೆ ಮರುಸಂಪರ್ಕಿಸಲು ಅವಕಾಶವನ್ನು ನೀಡುತ್ತಿದೆ ಎಂದು ಕಂಪನಿ ಹೇಳಿದೆ. ಭಾಗವಹಿಸುವ ಯಾವುದೇ ಸ್ಪರ್ಧಿಯು ತನ್ನ ಫೋನ್ ಅನ್ನು ಬಾಕ್ಸ್‌ನಲ್ಲಿ ಇರಿಸಬೇಕು. ಮತ್ತು ಒಂದು ತಿಂಗಳು ಸ್ಮಾರ್ಟ್‌ಫೋನ್ ಇಲ್ಲದೆ ದಿನಗಳನ್ನು ಕಳೆಯಬೇಕಾಗುತ್ತದೆ.

ಆದಾಗ್ಯೂ, ಯಾವುದೇ ತುರ್ತು ಸಂದರ್ಭಗಳಿಗಾಗಿ ಸ್ಪರ್ಧಿಗಳಿಗೆ ಸಿಮ್ ಕಾರ್ಡ್ ಮತ್ತು ಫೋನ್ ಅನ್ನು ನೀಡಲಾಗುತ್ತದೆ. ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಇದನ್ನು ಬಳಸಬಹುದು. ”ನಾವು ಮದ್ಯದ ವ್ಯಸನವನ್ನು ಬಿಟ್ಟುಬಿಡಿ ಎಂದು ಜನರನ್ನು ಕೇಳುತ್ತಿಲ್ಲ, ಸ್ಮಾರ್ಟ್‌ಫೋನ್ ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದೇವೆ,” ಎಂದು ಕಂಪನಿ ಹೇಳಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರಿಗೆ ಜನವರಿ 31 ರವರೆಗೆ ಅವಕಾಶವಿದೆ. ಅರ್ಜಿಯನ್ನು SIGGI ನ ವೆಬ್‌ಸೈಟ್‌ನಲ್ಲಿ ನೀಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ