Tech Tips: ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್

ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು.

Tech Tips: ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್
Contact Number
Follow us
|

Updated on: Jan 25, 2024 | 2:20 PM

ನಾವು ನಮ್ಮ ಸ್ನೇಹಿತರ, ಕುಟುಂಬದವರ ಮೊಬೈಲ್ ಸಂಖ್ಯೆಗಳನ್ನು (Mobile Number) ನೆನಪಿಟ್ಟುಕೊಳ್ಳುವ ಕಾಲವೊಂದಿತ್ತು. ಆದರೆ, ಮೊಬೈಲ್ ತಂತ್ರಜ್ಞಾನವು ಮುಂದುವರೆದ ನಂತರ, ನಾವು ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಮರೆತುಬಿಟ್ಟಿದ್ದೇವೆ. ಈಗ ಜನರು ತಮ್ಮ ಫೋನ್‌ಗಳಲ್ಲಿ ಕಾಂಟೆಕ್ಟ್ ಅನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಯಾರಿಗಾದರೂ ಕರೆ ಮಾಡಬೇಕು ಎಂದಿದ್ದರೆ, ಆ ನಂಬರ್ ಅನ್ನು ಡಯಲ್ ಮಾಡುವ ಬದಲು, ಕಾಂಟೆಕ್ಟ್ ಲಿಸ್ಟ್​ಗೆ ಹೋಗಿ ಕರೆ ಮಾಡಿದರೆ ಆಯಿತು. ಆದರೆ, ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಏನು ಗತಿ?.

ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.

Google Pay Alert: ನಿಮ್ಮ ಫೋನ್​ನಲ್ಲಿ ಗೂಗಲ್ ಪೇ ಆ್ಯಪ್ ಬಳಕೆ ಮಾಡ್ತಾ ಇದ್ದೀರಾ?

ಇದನ್ನೂ ಓದಿ
Image
ಐದು ದಿನ ಬಾಕಿ: 6,000mAh ಬ್ಯಾಟರಿಯ ಈ ಬಜೆಟ್ ಫೋನ್​ಗೆ ಕಾದು ಕುಳಿತ ಜನರು
Image
8 ಲಕ್ಷ ರೂ. ಗೆಲ್ಲುವ ಅವಕಾಶ: 1 ತಿಂಗಳು ಫೋನ್ ಇಲ್ಲದೆ ಇರಬಹುದೇ?
Image
ನೋಟ್ 50: ರಿಯಲ್ ಮಿಯಿಂದ ಬಂತು ಮೊಟ್ಟ ಮೊದಲ ನೋಟ್ ಸ್ಮಾರ್ಟ್​ಫೋನ್
Image
ಭಾರತದಲ್ಲಿ ಬಿಡುಗಡೆ ಆಗಿದೆ ಒನ್​ಪ್ಲಸ್ 12, 12R ಸ್ಮಾರ್ಟ್​ಫೋನ್ಸ್: ಬೆಲೆ?
  • ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  • ಫೋನ್ ನಂಬರ್ ಸೇವ್ ಮಾಡಲು Google ID ಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.
  • ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ.
  • ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ.

ಫೋನ್ ಬ್ಯಾಕಪ್‌ನಿಂದ ಮೊಬೈಲ್ ನಂಬರ್ ಮರಳಿ ಪಡೆಯಿರಿ:

  • ನಿಮ್ಮ ಫೋನ್‌ನ ಬ್ಯಾಕಪ್ ನೀವು ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಿ.
  • ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.
  • ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ.
  • ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ.
  • ನಿಮ್ಮ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೀವು ನೋಡಬಹುದು. ನೀವು ಹೌದು ಎಂದು ಬಯಸಿದರೆ, ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಥರ್ಡ್ ಪಾರ್ಟಿ ಅಪ್ಲಿಕೇಷನ್:

ನೀವು ಗೂಗಲ್ ಖಾತೆ ಅಥವಾ ಫೋನ್ ಬ್ಯಾಕಪ್ ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಡಿಲೀಟ್ ಆದ ಕಾಂಟ್ಯಾಕ್ಟ್ ನಂಬರ್ ಗಳನ್ನೂ ಇವುಗಳ ಮೂಲಕ ಹಿಂಪಡೆಯಬಹುದು. ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಲೀಟ್ ಆದ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಕಂಡುಹಿಡಿಯುವ ಸೌಲಭ್ಯವನ್ನು ಈ ಅಪ್ಲಿಕೇಶನ್‌ಗಳು ಒದಗಿಸುತ್ತವೆ. ಥರ್ಡ್ ಪಾರ್ಟಿ ಅಪ್ಲಿಕೇಷನ್​ಗಳನ್ನು ಡೌನ್‌ಲೋಡ್ ಮಾಡುವಾಗ, ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಥರ್ಡ್ ಪಾರ್ಟಿ ಅಪ್ಲಿಕೇಷನ್ ಅಪಾಯಕಾರಿಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ