Smartphone Tips 2: ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಉಳಿತಾಯ ಮತ್ತು ವೇಗ ಹೆಚ್ಚಿಸುವುದು ಹೇಗೆ? ಇಲ್ಲಿವೆ ಕೆಲವು ಸಲಹೆ

| Updated By: Digi Tech Desk

Updated on: Aug 04, 2021 | 5:31 PM

ಸ್ಮಾರ್ಟ್​ಫೋನ್​ ಟಿಪ್ಸ್​ 2: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಹಾಗೂ ನೆಟ್‌ವರ್ಕ್ ಪ್ರಾಬ್ಲಂ ನಂಹತ ಕೆಲವು ಸಾಮಾನ್ಯ ತೊಡಕುಗಳನ್ನು ಸೆಟ್ಟಿಂಗ್‌ನಲ್ಲಿನ ಆಯ್ಕೆಗಳನ್ನು ಬದಲಾವಣೆ ಮಾಡುವ ಮೂಲಕ ಸುಲಭವಾಗಿ ಸರಿಪಡಿಸಬಹುದಾಗಿರುತ್ತದೆ.

Smartphone Tips 2: ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಉಳಿತಾಯ ಮತ್ತು ವೇಗ ಹೆಚ್ಚಿಸುವುದು ಹೇಗೆ? ಇಲ್ಲಿವೆ ಕೆಲವು ಸಲಹೆ
Internet Speed
Follow us on

ಸದ್ಯದ ಪರಿಸ್ಥಿತಿಯಲ್ಲಿ ಜನರು ಊಟ-ತಿಂಡಿ ಬೇಕಾದರೂ ಬಿಟ್ಟಿರುತ್ತಾರೆ ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್ ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ. ಮಾನವನ ಮೂಲ ಅಗತ್ಯತೆಗಳಾದ ಆಶ್ರಯ, ಊಟ, ಬಟ್ಟೆ ಜತೆಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್‌ ಸೇರಿ ಬಹಳಷ್ಟು ವರ್ಷಗಳಾಗಿವೆ. GPRSನಿಂದ 2Gಗೆ 2Gಯಿಂದ 3Gಗೆ ಇಲ್ಲಿಂದ 4G ಬಳಸುತ್ತಿದ್ದೇವೆ. ಮುಂದೆ 5G ಸರದಿ. ಇಷ್ಟೆಲ್ಲಾ ಆದರೂ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಬಾರಿ 2Gಗಿಂತ ಕಡಿಮೆ ವೇಗದಲ್ಲಿ ಇಂಟರ್‌ನೆಟ್‌ ಬಳಸಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಹಾಗೂ ನೆಟ್‌ವರ್ಕ್ ಪ್ರಾಬ್ಲಂ ನಂಹತ ಕೆಲವು ಸಾಮಾನ್ಯ ತೊಡಕುಗಳನ್ನು ಸೆಟ್ಟಿಂಗ್‌ನಲ್ಲಿನ ಆಯ್ಕೆಗಳನ್ನು ಬದಲಾವಣೆ ಮಾಡುವ ಮೂಲಕ ಸುಲಭವಾಗಿ ಸರಿಪಡಿಸಬಹುದಾಗಿರುತ್ತದೆ. ಯಾವುದೇ ಟೆಲಿಕಾಂ ಸಿಮ್‌ ಬಳಕೆ ಮಾಡಿದರ ಸಹ ಈ ಸಮಸ್ಯೆಗಳು ತಪ್ಪಿದ್ದಲ್ಲ. ಆದರೆ ಸುಲಭವಾಗಿ ಸರಿಪಡಿಸಲು ಆಯ್ಕೆಗಳು ಇವೆ.

ನಿಮ್ಮ ಮೊಬೈಲ್​ನ ಸೆಟ್ಟಿಂಗ್‌ಗಳ ಅಡಿಯಲ್ಲಿ, ಮೊಬೈಲ್ ನೆಟ್‌ವರ್ಕ್‌ಗಾಗಿ ನೀವು ವೇಗವಾದ ಆಯ್ಕೆಯನ್ನು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕು. ಅದು 3G ಅಥವಾ 4G ಇಲ್ಲದಿದ್ದರೆ, ತಕ್ಷಣ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ಹೊಸ ಮೊಬೈಲ್ ಆಗಿದ್ದರೆ ಈರೀತಿಯ ಸೆಟ್ಟಿಂಗ್ ಮಾಡಬೇಕಾಗುತ್ತದೆ. ಅಂತೆಯೆ ನಿಮ್ಮ ಸಿಮ್ ಕಾರ್ಡ್ ಸರಿಯಾದ ಸ್ಲಾಟ್‌ನಲ್ಲಿದೆ ಎಂಬುದು ನೀವು ಯಾವಾಗಲೂ ಖಚಿತಪಡಿಸಿಕೊಳ್ಳಬೇಕಾದ ಒಂದು ವಿಷಯ. ನೀವು ಸಿಮ್ 1 ರಿಂದ ಮೊಬೈಲ್ ಡೇಟಾವನ್ನು ಬಳಸುತ್ತಿದ್ದರೆ, ನಿಮ್ಮ ಸಿಮ್ 1 ಅನ್ನು ನಿಮಗೆ ವೇಗವಾಗಿ ಡೇಟಾವನ್ನು ಒದಗಿಸುವ ನೆಟ್‌ವರ್ಕ್ ಆಗಿ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನೀವು APN (ಆಕ್ಸೆಸ್ ಪಾಯಿಂಟ್ ಹೆಸರುಗಳು) ಸೆಟ್ಟಿಂಗ್‌ಗಳನ್ನು ಸಹ ಪರಿಶೀಲಿಸಬಹುದು. ನಿಮ್ಮ ಸಾಧನದ APN ಸೆಟ್ಟಿಂಗ್‌ಗಳ ಅಡಿಯಲ್ಲಿ ಈ ಕೆಳಗಿನವುಗಳನ್ನು ಆಯ್ಕೆ ಮಾಡಿ: ಆಂಡ್ರಾಯ್ಡ್ ಫೋನ್‌ನಲ್ಲಿ- www, ಹಾಗೂ ಐಫೋನ್‌ನಲ್ಲಿ IOS.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಾಗಿನ್, ಸ್ಥಳ ಮುಂತಾದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಕ್ಯಾಷೆ ಮೆಮೊರಿಯಲ್ಲಿ ಇಟ್ಟುಕೊಂಡಿರುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯಲ್ಲಿ ಅನಗತ್ಯ ಮಾಹಿತಿಯು ಸಂಗ್ರಹವಾಗಿ ಇಂಟರ್‌ನೆಟ್‌ ವೇಗವನ್ನು ಕಡಿಮೆಗೊಳಿಸುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು.

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಇಂಟರ್‌ನೆಟ್ ವೇಗ ಹೆಚ್ಚಿಸಲು ಇವು ಕೆಲವು ತಂತ್ರಗಳು ಮತ್ತು ಸಲಹೆಗಳಾಗಿವೆ ಅಷ್ಟೇ, ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಇತರ ಹಲವಾರು ಕಾರಣಗಳಿವೆ. ದೋಷಪೂರಿತ ಹಾರ್ಡ್‌ವೇರ್ ಅಥವಾ ಹೊಂದಾಣಿಕೆಯಾಗದ ಸಾಫ್ಟ್‌ವೇರ್ ಸಹ ವೇಗ ಕುಂಠಿತಕ್ಕೆ ಕಾರಣವಾಗಬಹುದು.

ಇನ್ನೂ ಇಂದಿನ ದಿನಗಳಲ್ಲಿ ಅನ್‌ಲಿಮಿಟೆಡ್ ಡಾಟಾ ಪ್ಲಾನುಗಳು ಸಾಕಷ್ಟು ದುಬಾರಿ ಆಗಿದೆ. ಮುಂದೆ ಇದರ ಬೆಲೆ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ. ಆದರೆ ಲಿಮಿಟೆಡ್ ಪ್ಲಾನ್ ಬಳಸುವ ಬಳಕೆದಾರರು ತಮ್ಮ ಡಾಟಾ ಮುಗಿಯುವ ಬಗ್ಗೆಯೇ ಚಿಂತೆಯಲ್ಲಿರುತ್ತಾರೆ. ನೀವು ಸರಳವಾಗಿ ಮೊಬೈಲ್ ಡಾಟಾ ಉಳಿಸಬಹುದು ಮತ್ತು ತಿಂಗಳವರೆಗೂ ಬರುವಂತೆ ಕಾಪಾಡಿಕೊಳ್ಳಬಹುದು. ಇಲ್ಲಿ ನಿಮ್ಮ ಆಂಡ್ರಾಯ್ಡಾ ಸ್ಮಾರ್ಟ್ ಫೋನಿನಲ್ಲಿ ಡಾಟಾ ಉಳಿಸುವ ಸರಳ ತಂತ್ರಗಳನ್ನು ನೀಡಿದ್ದೇವೆ.

ಡಾಟಾ ಹೆಚ್ಚು ಬಳಕೆಯಾಗುವುದೇ ಸ್ಮಾರ್ಟ್‌ಫೋನ್ ಗಳಲ್ಲಿ ವೆಬ್ ಬ್ರೌಸ್ ಮಾಡುವಾಗ. ಬಹಳಷ್ಟು ವೆಬ್ ತಾಣಗಳು ದೊಡ್ಡ ಜಾಹೀರಾತುಗಳನ್ನ ಹೊಂದಿರುತ್ತವೆ. ಹೀಗಾಗಿ ಬಹಳಷ್ಟು ಡಾಟಾ ತಿನ್ನುತ್ತವೆ. ಆದರೆ ನೀವು ಕ್ರೋಮ್ ಅಲ್ಲಿ ಡಾಟಾ ಕಂಪ್ರೆಶನ್ ಫೀಚರ್ ಬಳಸಿಕೊಂಡು ಈ ಹೆಚ್ಚುವರಿ ಸೋರಿಕೆಯನ್ನು ತಡೆಯಬಹುದು. ಈ ಫೀಚರ್ ಸಕ್ರಿಯಗೊಳಿಸಿದ ಮೇಲೆ ಗೂಗಲ್ ವೆಬ್ ತಾಣಗಳ ನಡುವಿನ ಡಾಟಾ ವರ್ಗಾವಣೆಯನ್ನು ನಿಭಾಯಿಸುತ್ತದೆ ಮತ್ತು ಗರಿಷ್ಠ ಉಳಿತಾಯ ಕೂಡ ಕೊಡುತ್ತದೆ. ಈ ಫೀಚರ್ ಸಕ್ರಿಯಗೊಳಿಸಲು ಕ್ರೋಮ್ ತೆರೆದು 3 ಡಾಟ್ ಮೆನುವನ್ನು ಟಾಪ್ ಮಾಡಿ. ನಂತರ ಸೆಟ್ಟಿಂಗ್ ಹೋಗಿ ಡಾಟಾ ಸೇವರ್ ಮೇಲೆ ಟಾಪ್ ಮಾಡಿ. ನಿಮ್ಮ ಆಯ್ಕೆ ಉಳಿಯುತ್ತದೆ.

ನಾವು ಬಳಸುವ ಕೆಲವು ಆ್ಯಪ್ ಗಳು ಸ್ಮಾರ್ಟ್​ಫೋನ್ ಬಳಸಿದಾಗಲೂ ಸಾಕಷ್ಟು ಡಾಟಾ ತಿನ್ನುತ್ತದೆ. ಇದಕ್ಕೆ ಕಾರಣ ನೊಟಿಫಿಕೇಶನ್ ಬರುವುದು. ಪ್ರತಿಯೊಂದು ಅಪ್​ಡೇಟ್ ಆಗುವುದು. ಆದರೆ ಎಲ್ಲಾ ಆ್ಯಪ್ ಯಾವಾಗಲೂ ಸಕ್ರಿಯವಾಗಿರಬೇಕಿಲ್ಲ. ಹೀಗಾಗಿ ನೀವು ಸುಲಭವಾಗಿ ಆರಿಸಿಕೊಂಡು ಡಾಟಾ ಬಳಕೆಯನ್ನು ಅಗತ್ಯವಿರುವ ಆ್ಯಪ್​ಗಳಿಗೆ ಸೀಮಿತ ಮಾಡಬಹುದು. ಸೆಟ್ಟಿಂಗ್ ಹೋಗಿ ಡಾಟಾ ಯೂಸೇಜ್ ಹೋಗಿ ನೀವು ಡಾಟಾ ನಿಯಂತ್ರಿಸಬೇಕಾದ ಆಪ್ ಆರಿಸಿ. ಸ್ವಿಚ್ ಟಾಗಲ್ ಮಾಡಿ ರಿಸ್ಟ್ರಿಕ್ ಆಫ್ ಬ್ಯಾಕ್ ಗ್ರೌಂಡ್ ಡಾಟಾ ಲೇಬಲನ್ನು ಆಫ್ ಮಾಡಿ.

Published On - 5:25 pm, Wed, 4 August 21