ಟೆಕ್ಲೋಕದಲ್ಲಿ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಚಾಟ್ಜಿಪಿಟಿ (ChatGPT). ನಾವು ಊಹಿಸದೇ ಇರುವ ರೀತಿಯಲ್ಲಿ, ಚಾಟ್ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ಬಳಸುವ ಬಾಟ್ಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಆವರಿಸಿಕೊಂಡುಬಿಟ್ಟಿವೆ. ಸ್ನ್ಯಾಪ್ ಕಳುಹಿಸಿ ಚಾಟ್ ಮಾಡುವ ವಿಶಿಷ್ಟ ಅಪ್ಲಿಕೇಶನ್ ಸ್ನ್ಯಾಪ್ಚಾಟ್ ಕೂಡ, ಮೈ ಎಐ ಎನ್ನುವ ಆವೃತ್ತಿಯನ್ನು ಬಳಸುತ್ತಿದೆ. ಆರಂಭದಲ್ಲಿ ಸ್ನ್ಯಾಪ್ಚಾಟ್+ ಚಂದಾದಾರರಿಗೆ ಪರೀಕ್ಷಾರ್ಥವಾಗಿ ಮೈ ಎಐ ಲಭ್ಯವಾಗುತ್ತಿದೆ. ಈ ವಾರವೇ ಹೊಸ ಅಪ್ಡೇಟ್ ಸ್ನ್ಯಾಪ್ಚಾಟ್+ ಬಳಕೆದಾರರಿಗೆ ದೊರೆಯಲಿದೆ.
ಮೈಎಐ ಅನ್ನು ಸ್ನ್ಯಾಪ್ಚಾಟ್ಗೆಂದೇ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗಿದೆ. ಅಂದರೆ, ಚಾಟ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಬದಲಿಗೆ, ಮೈ ಎಐ ಉತ್ತರ ನೀಡಲಿದೆ. ಅದಕ್ಕಾಗಿ, ಪರೀಕ್ಷಾರ್ಥ ಬಳಕೆಯ ನಂತರ, ಇತರರಿಗೆ ಹೊಸ ಫೀಚರ್ ಒದಗಿಸುವುದು ಸ್ನ್ಯಾಪ್ಚಾಟ್(SnapChat) ಉದ್ದೇಶವಾಗಿದೆ.
ಸ್ನ್ಯಾಪ್ಚಾಟ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಆಪ್ತರು, ಗೆಳೆಯರಿಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದು, ಉಡುಗೊರೆಯನ್ನು ಸೂಚಿಸುವುದು ಹಾಗೂ ಡಿನ್ನರ್ ಮಾಡುವುದಕ್ಕೆ ಸೂಕ್ತ ಸ್ಥಳದ ಸಲಹೆ, ಹೊಸ ರೆಸಿಪಿ ಬಗ್ಗೆ ಮಾಹಿತಿ.. ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಸ್ನ್ಯಾಪ್ಚಾಟ್ ಮೈ ಎಐ ಬಾಟ್ ಒದಗಿಸಲಿದೆ.
ಇದು ಆರಂಭಿಕ ಹಂತವಾಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿರುವುದರಿಂದ ಎಐ ಬಾಟ್ ಮೂಲಕ ದಾಖಲಾಗುವ ಮೈ ಎಐಯ ಸಂಭಾಷಣೆಯನ್ನು ಶೇಖರಿಸಲಾಗುತ್ತದೆ. ಜತೆಗೆ, ಎಐ ಚಾಟ್ನ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಅವುಗಳನ್ನು ವಿಮರ್ಶೆಗೊಳಪಡಿಸಬಹುದು. ಹೀಗಾಗಿ, ಮೈ ಎಐ ಚಾಟ್ ಬಾಟ್ ಜತೆಗೆ ಯಾವುದೇ ರೀತಿಯ ವೈಯಕ್ತಿಕ, ಖಾಸಗಿ ಮತ್ತು ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸ್ನ್ಯಾಪ್ಚಾಟ್ ಎಚ್ಚರಿಸಿದೆ.
Published On - 1:16 pm, Tue, 28 February 23