ಬೇಸಿಗೆಯಲ್ಲಿ ಬರುವ ವಿದ್ಯುತ್ ಬಿಲ್ (Electricity Bill) ಯಾವುದೇ ವ್ಯಕ್ತಿಯನ್ನಾದರು ನಿದ್ರಾಹೀನಗೊಳಿಸುತ್ತದೆ. ಎಸಿ, ಕೂಲರ್, ಫ್ರೀಜ್ (Fridge) ಜೊತೆಗೆ ಮನೆಯಲ್ಲಿರುವ ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳಿಂದಾಗಿ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಬೇಸಿಗೆ ಸಮಯದಲ್ಲಂತು ಮನೆಯಲ್ಲಿ ಇಡೀ ದಿನ ಫ್ಯಾನ್ ಅಥವಾ ಎಸಿ (AC) ಆನ್ ಇರುವುದರಿಂದ ವಿದ್ಯುತ್ ಬಿಲ್ ಕೂಡ ಅಧಿಕ ಬರುತ್ತದೆ. ಇದು ಬಡ ಮತ್ತು ಮಧ್ಯಮ ಕುಟುಂಬಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಬಿಲ್ ಕಡಿಮೆ ಬರಬೇಕು ಎಂದಾದರೆ ಕೆಲ ಮಾರ್ಗಗಗಳಿದೆ.
ವಿದ್ಯುತ್ ಬಿಲ್ ಕಡಿಮೆ ಬರಬೇಕು ಎಂದರೆ ಮೊದಲು ನಿಮ್ಮ ಮನೆಗೆ ಸೋಲಾರ್ ಎಲ್ಇಡಿ ದೀಪಗಳನ್ನು ಅಳವಡಿಸಬೇಕು. ಈ ಲೈಟ್ ಅನ್ನು ಅಳವಡಿಸಿದ ನಂತರ, ನಿಮ್ಮ ವಿದ್ಯುತ್ ಬಿಲ್‌ನ ಟೆನ್ಷನ್ ಅರ್ಧಕ್ಕೆ ಕಡಿಮೆಯಾಗುತ್ತದೆ. ನೀವು ಸೋಲಾರ್ ಎಲ್ಇಡಿ ಲೈಟ್ ಖರೀದಿಸಲು ಬಯಸಿದರೆ, ಆನ್‌ಲೈನ್ ಮತ್ತು ಆಫ್‌ಲೈನ್ ಆಯ್ಕೆ ಇದೆ.
ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?
ನೀವು ಆನ್‌ಲೈನ್‌ನಲ್ಲಿ ಖರೀದಿಸಿದರೆ, ಈ ಲೈಟ್ಗಳ ಮೇಲೆ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಈ ಲೈಟ್ಗಳ ಮೇಲೆ ಲಭ್ಯವಿರುವ ರಿಯಾಯಿತಿಗಳ ಬಗ್ಗೆ ನಾವು ಇಲ್ಲಿದೆ.
ಹೋಮ್‌ಹಾಪ್ ಸೋಲಾರ್ ಎಲ್‌ಇಡಿ ಲೈಟ್‌ಗಳು: ಈ ಲೈಟ್‌ನ ಮೂಲ ಬೆಲೆ 2,996 ರೂ. ಆಗಿದ್ದರೂ, ನೀವು ಇದನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ 1,699 ರೂ. ಗೆ ಖರೀದಿಸಬಹುದು. ಶೇ. 43 ರಷ್ಟು ರಿಯಾಯಿತಿಯೊಂದಿಗೆ ಪಡೆದುಕೊಳ್ಳಬಹುದು. ಇದರಿಂದ ಯಾವುದೇ ವಿದ್ಯುತ್ ಬಿಲ್ ಬರುವುದಿಲ್ಲ. ಒಮ್ಮೆ ನೀವು ಇದನ್ನು 6-8 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, ಇದು 2 ದಿನಗಳ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತದೆ.
ಎಲ್ಇಡಿ ಸೋಲಾರ್ ಡೆಕ್ ಲೈಟ್ಸ್: ನೀವು ಈ ಲೈಟ್ ಅನ್ನು 1,299 ರೂ. ಗೆ 74 ಪ್ರತಿಶತ ರಿಯಾಯಿತಿಯೊಂದಿಗೆ ಪಡೆಯಬಹುದು. ಗ್ರಾಹಕರ ಅನುಕೂಲಕ್ಕಾಗಿ, ಇಎಂಐ ಆಯ್ಕೆಯೂ ಇದರಲ್ಲಿ ಲಭ್ಯವಿದೆ.
ಸೋಲಾರ್ ಲೈಟ್ಗಳನ್ನು ಕಡಿಮೆ ವಿದ್ಯುತ್ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯದೊಂದಿಗೆ ಲೈಟ್‌ಗಳು ತುರ್ತು ಸಂದರ್ಭಗಳಲ್ಲಿ ಕನಿಷ್ಠ 5 ರಿಂದ 7 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಮನೆಯಲ್ಲಿ ಎಸಿ ಇದ್ದಾಗ ವಿದ್ಯುತ್ ಬಿಲ್ ಹೆಚ್ಚಾಗಿ ಅಧಿಕ ಬರುತ್ತದೆ. ಇದಕ್ಕೆ ಅಗತ್ಯವಿದ್ದಾಗ ಮಾತ್ರ ಎಸಿಯನ್ನು ಬಳಸಿ. ಬಳಕೆಯಲ್ಲಿಲ್ಲದಿದ್ದಾಗ
ಎಸಿ ಆಫ್ ಮಾಡಿದರೆ ಒಳ್ಳೆಯದು. ಗರಿಷ್ಠ ತಾಪಮಾನ 24 ಡಿಗ್ರಿಗಳಲ್ಲಿ AC ಬಳಸಿದರೆ ಉತ್ತಮ. ಅಂತೆಯೆ ಎಸಿ ಆನ್ ಇದ್ದಾಗ ತಂಪಾದ ಗಾಳಿ ಕೋಣೆಯಿಂದ ಹೊರಹೋಗದಂತೆ ನೋಡಿಕೊಳ್ಳಿ. ಜೊತೆಗೆ ಸ್ಲೀಪ್ ಟೈಮರ್ ಬಳಸಿ ವಿಭಿನ್ನ ಎಸಿ ಮೋಡ್‌ಗಳನ್ನು ಬಳಕೆ ಮಾಡಿದರೆ ಹೆಚ್ಚಿನ ವಿದ್ಯುತ್ ಕರ್ಚಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ