Tech Tips: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆ​ಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

|

Updated on: Feb 21, 2023 | 6:59 AM

Spam Calls: ಯಾರದ್ದೋ ಇಂಪಾರ್ಟೆಂಟ್ ಕಾಲ್ ಎಂದು ಮಾಡುವ ಕೆಲಸ ಬಿಟ್ಟು ಹೋಗಿ ಫೋನ್ ಎತ್ತಿದರೆ ಅದು ಸ್ಪ್ಯಾಮ್ ಕರೆಯಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ.

Tech Tips: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆ​ಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Spam Call
Follow us on

ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ ಆಗಿದೆ. ಬಳಕೆದಾರರಿಗೆ ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ಬರುತ್ತಲೇ ಇರುತ್ತವೆ. ಯಾರದ್ದೋ ಇಂಪಾರ್ಟೆಂಟ್ ಕಾಲ್ ಎಂದು ಮಾಡುವ ಕೆಲಸ ಬಿಟ್ಟು ಹೋಗಿ ಫೋನ್ ಎತ್ತಿದರೆ ಅದು ಸ್ಪ್ಯಾಮ್ ಕರೆಯಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ (Robo Call) ದೂರ ಉಳಿಯುವುದಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೊಸ ಹೊಸ ನಂಬರ್‌ಗಳಿಂದ ಸ್ಪ್ಯಾಮ್‌ ಕರೆಗಳು ಬರುವುದು ಮತ್ತೊಂದು ತಲೆನೋವು. ಇವುಗಳನ್ನು ನಿಯಂತ್ರಿಸುವುದಕ್ಕೆ ದಾರಿ ಇಲ್ಲವೇ?. ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಇಂತಹ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು ಕೆಲವೊಂದು ಟಿಪ್ಸ್ (Tips) ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಬಳಕೆದಾರರು ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಟ್ರೂ ಕಾಲರ್‌ ಅಪ್ಲಿಕೇಶನ್‌ 320 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ ಕಂಡಿದೆ. ಟ್ರೂ ಕಾಲರ್‌ ಕಾಲರ್ ಐಡಿ ಡಿವೈಸ್‌ ಆಗಿದ್ದು, ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕರೆ ಮಾಡುವವರ ಹೆಸರನ್ನು ಸೂಚಿಸಲಿದೆ. ಅಲ್ಲದೆ ಹೆಸರು ಅಥವಾ ಸಂಖ್ಯೆಯನ್ನು ಬಳಸಿಕೊಂಡು ವೈಯಕ್ತಿಕ ಬಳಕೆದಾರರ ಪ್ರೊಫೈಲ್‌ಗಳನ್ನು ಹುಡುಕುವುದಕ್ಕೆ ಸಹಕಾರಿ ಆಗಿದೆ.

DND ನಲ್ಲಿ ನೋಂದಾಯಿಸುವ ಮೂಲಕ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಈ ಮೊಬೈಲ್-ಆಪರೇಟರ್ ನಿರ್ದಿಷ್ಟ DND (Do-Not-Disturb) ನೋಂದಣಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸಂಖ್ಯೆಯನ್ನು ನೀವು ನೋಂದಾಯಿಸಿಕೊಳ್ಳಬಹುದು, ಇದರ ಸಹಾಯದಿಂದ ನೀವು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವಲ್ಲಿ ತೀವ್ರವಾದ ಬದಲಾವಣೆಯನ್ನು ಗಮನಿಸಬಹುದು.

ಇದನ್ನೂ ಓದಿ
POCO C55: ಪೋಕೋ C55 ಬಿಡುಗಡೆಗೆ ಒಂದೇ ದಿನ ಬಾಕಿ: ಇದು ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್
WhatsApp Picture-in-Picture: ವಾಟ್ಸ್​ಆ್ಯಪ್ ವಿಡಿಯೋ ಕರೆಯಲ್ಲಿ ಬಂತು ಹೊಸ ಆಯ್ಕೆ: ಬಳಕೆದಾರರಿಂದ ಭಾರೀ ಮೆಚ್ಚುಗೆ
Meta Verified: ಹಣ ಕೊಟ್ಟು ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಬ್ಲೂ ಟಿಕ್ ಪಡೆದುಕೊಳ್ಳಿ: ಮೆಟಾದಿಂದ ಮಹತ್ವದ ಘೋಷಣೆ
Tech Tips: 68GB, 128GB ಸ್ಟೊರೇಜ್ ಸಾಮರ್ಥ್ಯವೂ ಸಾಕಾಗ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ

Tech Tips: ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್​​ಫೋನನ್ನು ಭರ್ಜರಿ ಬೆಲೆಗೆ ಮಾರಾಟ ಮಾಡಿ: ಹೇಗೆ ಗೊತ್ತೇ?

ಇನ್ನು ಗೂಗಲ್‍ನ ಹೊಚ್ಚ ಫೋನ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಫೋನ್ ಆ್ಯಪ್ ನಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ನಂತರ ಆ್ಯಪ್‍ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಸೈಲೆನ್ಸ್ ಅನ್‍ನೋನ್ ಕಾಲರ್ಸ್ ಅನ್ನು ಆಯ್ಕೆ ಆನ್ ಮಾಡಿ ಟಾಗಲ್ ಮಾಡಿ.

ಇನ್ನು ರೋಬೋಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಸೂಕ್ತವಾಗಿದೆ. ಇದು ತನ್ನ ಅಲ್ಗಾರಿದಮ್‌ ಅನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲಿದೆ. “ಆಡಿಯೋ ಫಿಂಗರ್‌ಪ್ರಿಂಟಿಂಗ್” ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ