Tech Tips: 68GB, 128GB ಸ್ಟೊರೇಜ್ ಸಾಮರ್ಥ್ಯವೂ ಸಾಕಾಗ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ

Smartphone Tricks: ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಕಾಗುವುದಿಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್​ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ.

Tech Tips: 68GB, 128GB ಸ್ಟೊರೇಜ್ ಸಾಮರ್ಥ್ಯವೂ ಸಾಕಾಗ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ
Smartphone Storage
Follow us
|

Updated on: Feb 20, 2023 | 6:58 AM

ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೆಚ್ಚಿನ ಸ್ಮಾರ್ಟ್​ಫೋನ್​ಗಳು (Smartphone) ಸಾಮಾನ್ಯವಾಗಿ 32GB ಯಿಂದ ಹಿಡಿದು 256GB ವರೆಗಿನ ಮೆಮೊರಿ ಹೊಂದಿರುತ್ತದೆ. ಈ ಪೈಕಿ ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಕಾಗುವುದಿಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್​ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ (Memory Card) ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್ಆ್ಯಪ್ ಇದ್ದೇ ಇರುತ್ತದೆ. ಇದರಲ್ಲಿನ ಚಾಟ್ ಆ್ಯಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಮೇಜ್‌ಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುರಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯೂ ತುಂಬಿ ಹೋಗುತ್ತದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಸ್ಪೆಸ್ (Smartphone Storage) ಅನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಅನಗತ್ಯ ಆ್ಯಪ್ ಡಿಲೀಟ್ ಮಾಡಿ: ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಬಳಸದೆ ಬಿದ್ದಿರುವ ಆ್ಯಪ್ ಗಳನ್ನು ಅನ್​ಇನ್​ಸ್ಟಾಲ್ ಮಾಡಿ. ಅಲ್ಲದೇ ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ನೀಡಿರುವ ಪ್ರೀ ಲೋಡ್ ಆ್ಯಪ್ ಗಳನ್ನು ಬಳಸದಿದ್ದರೇ ಡಿಲೀಟ್ ಮಾಡಿರಿ. ಇದರಿಂದ ಹೆಚ್ಚಿನ ಪ್ರಮಾಣದ ಜಾಗವು ಖಾಲಿಯಾಗಲಿದೆ. ಆ್ಯಪ್ ಹೆಚ್ಚಾದಾಷ್ಟು ಜಾಗವು ತುಂಬಿಕೊಳ್ಳುವುದರೊಂದಿಗೆ ಕ್ಯಾಚ್ ಹೆಚ್ಚಾಗಿ ನಿಮ್ಮ ಫೋನಿನ ವೇಗ ಕೂಡ ಕಡಿಮೆಯಾಗುತ್ತದೆ.

ಜಾಸ್ತಿ ಗೇಮ್ ಬೇಡ: ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹಿರಿಯರು ಎನ್ನದೇ ಗೇಮ್‌ಗಳನ್ನು ಆಡುವುದರಲ್ಲಿ ಬಿಜಿಯಾಗಿರುತ್ತಾರೆ. ಈ ಗೇಮ್‌ಗಳೇ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಜಾಗವನ್ನು ಕ್ರಮಿಸಿರುತ್ತವೆ. ಈ ಹಿನ್ನಲೆಯಲ್ಲಿ ಕೆಲವೇ ಕೆಲವು ಗೇಮ್‌ಗಳನ್ನು ಇಟ್ಟುಕೊಂಡು ತುಂಬದಿನಗಳಿಂದ ಆಡದಿರುವ ಗೇಮ್‌ಗಳನ್ನು ಡಿಲೀಟ್ ಮಾಡಿ. ಇದರಿಂದ ಹೆಚ್ಚಿನ ಸ್ಪೇಸ್ ಬಳಕೆಗೆ ದೊರೆಯಲಿದೆ.

ಇದನ್ನೂ ಓದಿ
Image
Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್​​ನಿಂದ ಹಿಂದೆಂದೂ ನೀಡದ ಆಫರ್
Image
Tech Tips: ನಿಮ್ಮ ಫೋನ್​ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ ನೋಡಿ
Image
World’s First Mobile Phone: ಇದುವೇ ನೋಡಿ ವಿಶ್ವದ ಮೊಟ್ಟ ಮೊದಲ ಮೊಬೈಲ್ ಫೋನ್: ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇತ್ತು?
Image
Vivo Y56 5G: ವಿವೋದಿಂದ ಮತ್ತೊಂದು ಆಕರ್ಷಕ ವಿವೋ Y56 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

Tech Tips: ವಾಟ್ಸ್ಆ್ಯಪ್​ನಲ್ಲಿ ನಂಬರ್ ಬದಲಾಯಿಸುವಾಗ ಚಾಟ್ ಡಿಲೀಟ್ ಆಗದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಮೂವಿ ನೋಡಿದ ಮೇಲೆ ಡಿಲೀಟ್ ಮಾಡಿ: ಹೌದು, ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ, ಇಲ್ಲವೇ ಶೇರ್ ಇಟ್ ಮೂಲಕ ಕಳುಹಿಸಿಕೊಂಡು ನೋಡುವ ಅಭ್ಯಾಸವು ಅಧಿಕವಾಗುತ್ತಿದೆ. ಇದರಿಂದಲೇ ಹೆಚ್ಚಿನ ಸ್ಮಾರ್ಟ್‌ಫೋನ್ ಸ್ಪೇಸ್ ಬಳಕೆಯಾಗಲಿದೆ. ಇದರಿಂದಾಗಿ ಸಿನಿಮಾ ನೋಡಿದ ಮೇಲೆ ಡಿಲೀಟ್ ಮಾಡಿ. ಹೆಚ್ಚು ಇಟ್ಟುಕೊಂಡಷ್ಟು ಜಾಗ ಕಡಿಮೆಯಾಗಲಿದೆ.

ಕ್ಯಾಚ್ ಕ್ಲಿಯರ್ ಮಾಡಿ: ನೀವು ಹೆಚ್ಚಾಗಿ ಉಪಯೋಗಿಸುತ್ತಿರುವ ಆ್ಯಪ್​ಗಳಲ್ಲಿ ಕ್ಯಾಚ್ ಗಳು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತವೆ. ಅವುಗಳನ್ನು ಕಾಲ-ಕಾಲಕ್ಕೆ ಕ್ಲಿಯರ್ ಮಾಡಿ. ಇದರಿಂದ ನಿಮ್ಮ ಫೋನಿನ ಮೆಮೊರಿಯ ಹೆಚ್ಚಾಗಲಿದೆ. ಅನಗತ್ಯ ಡೇಟಾ ಸೇವ್ ಆಗುವುದನ್ನು ತಪ್ಪಿಸಬಹುದು. ಅಲ್ಲದೇ ಆ್ಯಪ್​ಗಳನ್ನು ಚುರುಕಾಗಿಸಬಹುದು.

ಕ್ಲೌಡ್‌ ಸ್ಟೋರೇಜ್: ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೆಜ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಆಕ್ಸಿಸ್ ಮಾಡಲು ನೀವು ಹೆಚ್ಚುವರಿ ಇಂಟರ್ನೆಟ್ ಹೊಂದಿರಬೇಕಾಗುತ್ತದೆ. ಇದು ಒಳ್ಳೆಯ ಆಯ್ಕೆಯಾಗಿದ್ದು, ವೇಗದ ಇಂಟರ್ನೆಟ್ ಇದ್ದರೇ ಮಾತ್ರ ಹೆಚ್ಚಿನ ಲಾಭದಾಯಕ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು