Tech Tips: ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
WhatsApp Tricks: ಮೊನ್ನೆಯಷ್ಟೆ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಶೇಷ ಫೀಚರ್ವೊಂದನ್ನು (Feature) ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ.
ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇದೀಗ ಬಳಕೆದಾರರ ನೆಚ್ಚಿನ ಅಪ್ಲಿಕೇಷನ್ ಆಗಿಬಿಟ್ಟಿದೆ. ಮೆಟಾ ಒಡೆತನದ ಈ ಆ್ಯಪ್ ಇಂದು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎಂದರೆ ಇದನ್ನು ಬಳಸದವರೇ ಇಲ್ಲ ಎಂಬಂತಾಗಿದೆ. ಕಳೆದ ವರ್ಷದಂತೆ ಈ ವರ್ಷ ಅನೇಕ ಹೊಸ ಹೊಸ ಫೀಚರ್ಗಳ ಮೇಲೆ ಕಣ್ಣಿಟ್ಟಿರುವ ವಾಟ್ಸ್ಆ್ಯಪ್ (WhatsApp) ಒಂದೊಂದು ಅಪ್ಡೇಟ್ ಪರಿಯಿಸುತ್ತಿದೆ. ಇದರ ನಡುವೆ ಅನೇಕ ಆಯ್ಕೆಗಳು ಬೇಟಾ ವರ್ಷನ್ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಮೊನ್ನೆಯಷ್ಟೆ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ (Android) ಬಳಕೆದಾರರಿಗೆ ವಿಶೇಷ ಫೀಚರ್ವೊಂದನ್ನು (Feature) ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ.
ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಹಾಗಾದರೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ.
Best Smartphone: ಕೇವಲ 10,000 ರೂ. ಒಳಗೆ ಆಕರ್ಷಕ ಸ್ಮಾರ್ಟ್ಫೋನ್ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಮೊಬೈಲ್
- ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ
- ಈಗ ನೀವು ಯಾರಿಗೆ ಫೋಟೋ ಅಥವಾ ವಿಡಿಯೋಗಳನ್ನು ಸೆಂಡ್ ಮಾಡಲು ಬಯಸುತ್ತೀರೊ ಅವರ ಚಾಟ್ ಓಪನ್ ಮಾಡಿ
- ಸ್ಕ್ರೀನ್ ಕೇಳಭಾಗದಲ್ಲಿ ಕಾಣುವ ಲಗತ್ತು ಐಕಾನ್ (ಪೇಪರ್ ಕ್ಲಿಪ್) ಮೇಲೆ ಟ್ಯಾಪ್ ಮಾಡಿ
- ನಂತರ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಲು ಪಟ್ಟಿಯಿಂದ “ಗ್ಯಾಲರಿ” ಸೆಲೆಕ್ಟ್ ಮಾಡಿ
- ಇದೀಗ ನೀವು ನಿಮ್ಮ ಫೋಟೋ ಅಥವಾ ವಿಡಿಯೋಗಳನ್ನು ಸ್ಟೋರೇಜ್ ಮಾಡಿರುವ ಫೋಲ್ಡರ್ ತೆರೆಯಿರಿ
- ನಂತರ ನೀವು ಶೇರ್ ಮಾಡಲು ಬಯಸುವ ವಿಡಿಯೋ, ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆ ಮಾಡಿ
- ಮೊದಲ ಫೋಟೋ ಅಥವಾ ವಿಡಿಯೋ ಹೈಲೈಟ್ ಆಗುವವರೆಗೆ ಅದನ್ನು ಪ್ರೆಸ್ ಮಾಡಿ ಹಿಡಿದುಕೊಳ್ಳಬೇಕು
- ನಂತರ ನೀವು ಶೇರ್ ಮಾಡಲು ಬಯಸುವ ಇತರ ಫೋಟೋ-ವಿಡಿಯೋಗಳ ಮೇಲೆ ಟ್ಯಾಪ್ ಮಾಡಬೇಕು
- ಹೀಗೆ ನೀವು ಒಂದು ಭಾರಿಗೆ 100 ಫೋಟೋಗಳು ಅಥವಾ ವಿಡಿಯೋಗಳನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು
ವೆಬ್ ಬಳಕೆದಾರರಿಗೆ ನೂತನ ಫೀಚರ್:
ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಅಪ್ಡೇಟ್ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೆ ನೂತನ ಪೀಚರ್ವೊಂದನ್ನು ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ ವೆಬ್ನಲ್ಲಿ ಫೋಟೋ ಸೆಂಡ್ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ. ಈ ಆಯ್ಕೆ ಸದ್ಯದಲ್ಲೇ ವಾಟ್ಸ್ಆ್ಯಪ್ ತನ್ನ ವೆಬ್ ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಅಥವಾ ಫೈಲ್‌ಗಳನ್ನು ಅದೇ ಗುಣಮಟ್ಟದಲ್ಲಿ ಸೆಂಡ್ ಮಾಡಬಹುದು. ಈಗಾಗಲೇ ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಈ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ