POCO C55: ಪೋಕೋ C55 ಬಿಡುಗಡೆಗೆ ಒಂದೇ ದಿನ ಬಾಕಿ: ಇದು ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್

ಪೋಕೋ C55 ಸ್ಮಾರ್ಟ್​ಫೋನ್ C50 ಯ ಮುಂದಿನ ಆವೃತ್ತಿಯಾಗಿದೆ. ಇದು ಫೆಬ್ರವರಿ 21 ಮಂಗಳವಾರದಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಬಗ್ಗೆ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಟೀಸರ್ ಬಿಡುಗಡೆ ಮಾಡುವ ಮೂಲಕ ಖಚಿತ ಪಡಿಸಿದೆ.

POCO C55: ಪೋಕೋ C55 ಬಿಡುಗಡೆಗೆ ಒಂದೇ ದಿನ ಬಾಕಿ: ಇದು ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್
poco c55
Follow us
Vinay Bhat
|

Updated on:Feb 20, 2023 | 12:06 PM

ಪೋಕೋ ಸಂಸ್ಥೆಯ ಸ್ಮಾರ್ಟ್​ಫೋನ್​ಗಳು (Smartphones) ಭಾರತದಲ್ಲಿ ಬಿಡುಗಡೆ ಆಗುತ್ತಿರುವುದು ತೀರಾ ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈಲ್ ಬ್ರ್ಯಾಂಡ್​ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್​ಗಳಿರುವ ಫೋನ್​ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣಕ್ಕೆ ಪೋಕೋ ಸಂಸ್ಥೆ ಬಜೆಟ್ ಬೆಲೆಯ ಫೋನನ್ನು ರಿಲೀಸ್ ಮಾಡಿದರೂ ಅದರಲ್ಲೊಂದು ವಿಶೇಷತೆ ಇರುತ್ತದೆ. ಇದೀಗ ಅದೇರೀತಿಯ ಫೋನೊಂದನ್ನು ಪೋಕೋ (Poco) ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಲು ಸಜ್ಜಾಗುತ್ತಿದೆ. ಅದುವೇ ಪೋಕೋ ಸಿ55 (POCO C55). ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್​ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದ್ರೆ ಪೋಕೋ M5 ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ? ಎಂಬುದನ್ನು ನೋಡೋಣ.

ಪೋಕೋ C55 ಸ್ಮಾರ್ಟ್​ಫೋನ್ C50 ಯ ಮುಂದಿನ ಆವೃತ್ತಿಯಾಗಿದೆ. ಇದು ಫೆಬ್ರವರಿ 21 ಮಂಗಳವಾರದಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಬಗ್ಗೆ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಟೀಸರ್ ಬಿಡುಗಡೆ ಮಾಡುವ ಮೂಲಕ ಖಚಿತ ಪಡಿಸಿದೆ. ಪೋಕೋದ ಅಧಿಕೃತ ಯೂಟ್ಯೂಬ್ ಚಾನೆಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವೀಕ್ಷಿಸಬಹುದು. ಇದು ಇತ್ತೀಚೆಗಷ್ಟೆ ಚೀನಾದಲ್ಲಿ ರಿಲೀಸ್ ಆದ ರೆಡ್ಮಿ 12C ಫೋನ್​ನ ರಿಬ್ರಾಂಡೆಂಡ್ ಎಂಬ ಮಾತುಕೂಡ ಇದೆ.

ಈ ಫೋನಿನ ಬೆಲೆ, ಪೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಪೋಕೋ C55 ಸ್ಮಾರ್ಟ್​ಫೋನ್ 6.71 ಇಂಚಿನ ಹೆಚ್‌ಡಿ ಪ್ಲಸ್‌ ರೆಸಲೂಷನ್​ನ ಎಲ್​ಸಿಡಿ ಡಿಸ್‌ ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಫೋನಿ ಡಿಸೈನ್ ಅದ್ಭುತವಾಗಿದ್ದು ಗ್ರಾಹಕರು ಫಿದಾ ಆಗುವುದು ಗ್ಯಾರೆಂಟಿ. ಅಂತೆಯೆ ಮೀಡಿಯಾಟೆಕ್ ಹೀಲಿಯೊ H85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ 12 ನ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಇದನ್ನೂ ಓದಿ
Image
WhatsApp Picture-in-Picture: ವಾಟ್ಸ್​ಆ್ಯಪ್ ವಿಡಿಯೋ ಕರೆಯಲ್ಲಿ ಬಂತು ಹೊಸ ಆಯ್ಕೆ: ಬಳಕೆದಾರರಿಂದ ಭಾರೀ ಮೆಚ್ಚುಗೆ
Image
Meta Verified: ಹಣ ಕೊಟ್ಟು ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಬ್ಲೂ ಟಿಕ್ ಪಡೆದುಕೊಳ್ಳಿ: ಮೆಟಾದಿಂದ ಮಹತ್ವದ ಘೋಷಣೆ
Image
Tech Tips: 68GB, 128GB ಸ್ಟೊರೇಜ್ ಸಾಮರ್ಥ್ಯವೂ ಸಾಕಾಗ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ
Image
Tech Tips: ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್​​ಫೋನನ್ನು ಭರ್ಜರಿ ಬೆಲೆಗೆ ಮಾರಾಟ ಮಾಡಿ: ಹೇಗೆ ಗೊತ್ತೇ?

Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್​​ನಿಂದ ಹಿಂದೆಂದೂ ನೀಡದ ಆಫರ್

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಪೋಕೋ C55 ಸ್ಮಾರ್ಟ್​ಫೋನ್ ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿರುವುದು ಅನುಮಾನ. 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಇರುವುದು ಖಚಿತ. ಇದರ ಬೆಲೆ 10,000 ರೂ. ಒಳಗಡೆ ಇರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Mon, 20 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ