ಮಾರುಕಟ್ಟೆಯಲ್ಲಿ ಅನೇಕ ಬಣ್ಣಗಳ ಸ್ಮಾರ್ಟ್ಫೋನ್ಗಳಿವೆ (Smartphones). ಒಂದೇ ಫೋನ್ಗಳು ವಿವಿಧ ಕಲರ್ನಲ್ಲಿ ಬಿಡುಗಡೆ ಆಗುತ್ತವೆ. ಇತ್ತೀಚೆಗಷ್ಟೆ ವಿವೋ ಕಂಪನಿ ತನ್ನ ಫೋನ್ ಹಿಂಭಾಗದಲ್ಲಿ ಸೂರ್ಯನ ಕಿರಣಕ್ಕೆ ಬಣ್ಣ ಬದಲಾಗುವ ವಿಭಿನ್ನ ಪ್ರಯತ್ನ ನಡೆಸಿ ಯಶಸ್ವಿಯಾಗಿತ್ತು. ಹೀಗೆ ಸ್ಮಾರ್ಟ್ಫೋನ್ಗಳು ಅನೇಕ ರೀತಿಯಲ್ಲಿವೆ. ಆದರೆ, ಈ ಸ್ಮಾರ್ಟ್ಫೋನ್ಗಳ ಜೊತೆ ಬರುವ ಚಾರ್ಜರ್‌ಗಳು (Charger) ಮಾತ್ರ ಕೇವಲ ಎರಡು ಮಾದರಿಯಲ್ಲಿ ಮಾತ್ರ ಇರುತ್ತದೆ. ಹೌದು, ಮೊಬೈಲ್ಗಳ ರೀತಿ ಕೆಂಪು, ಹಸಿರು, ನೀಲಿ ಹೀಗೆ ಅನೇಕ ಬಣ್ಣಗಳಲ್ಲಿ ಮೊಬೈಲ್ ಚಾರ್ಜರ್‌ಗಳು ಇರುವುದಿಲ್ಲ. ಅವು ಕಪ್ಪು (Black Color Charger) ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ಯಾಕೆ ಗೊತ್ತೇ?.
ಇದರ ಹಿಂದೆ ಯಾವುದೇ ಕಾರಣವಿಲ್ಲ ಎಂದು ನೀವು ಭಾವಿಸಿದರೆ ಅದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಕಂಪನಿಗಳು ಸ್ಮಾರ್ಟ್‌ಫೋನ್ ಚಾರ್ಜರ್‌ಗಳನ್ನು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ತಯಾರಿಸುವುದಕ್ಕೆ ಒಂದು ಬಲವಾದ ಕಾರಣವಿದೆ. ಮೊಬೈಲ್ ಕಂಪನಿಗಳು ಕೆಂಪು, ಹಳದಿ, ನೀಲಿ ಅಥವಾ ಇತರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸದಿರಲು ಕಾರಣ ಬಾಳಿಕೆ ಮತ್ತು ವೆಚ್ಚ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ.
Infinix Smart 7: 6000mAh ಬ್ಯಾಟರಿ: ಭಾರತದಲ್ಲಿ ಕೇವಲ 7,299 ರೂ. ಗೆ ರಿಲೀಸ್ ಆಗಿದೆ ಹೊಸ ಫೋನ್: ಯಾವುದು?
ಕೆಲವು ವರ್ಷಗಳ ಹಿಂದಿನವರೆಗೂ ಸ್ಮಾರ್ಟ್‌ಫೋನ್ ಚಾರ್ಜರ್‌ಗಳು ಕಪ್ಪು ಬಣ್ಣಗಳಲ್ಲಿ ಮಾತ್ರ ಇದ್ದವು. ಕಪ್ಪು ಬಣ್ಣದ ವಿಶೇಷತೆ ಎಂದರೆ ಅದು ಇತರ ಬಣ್ಣಗಳಿಗಿಂತ ಚೆನ್ನಾಗಿ ಶಾಖವನ್ನು ಹೀರಿಕೊಳ್ಳುತ್ತದೆ. ಕಪ್ಪು ಬಣ್ಣಕ್ಕೆ ಈ ವಿಶೇಷವಾದ ಶಕ್ತಿಯಿದೆ. ಇದು ಚಾರ್ಜಿಂಗ್ ಸಮಯದಲ್ಲಿ ಉಂಟಾಗುವ ಶಾಖದಿಂದ ಚಾರ್ಜರ್ ಅನ್ನು ರಕ್ಷಿಸುತ್ತದೆ. ಕಪ್ಪು ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್‌ಗೆ ಪ್ರವೇಶಿಸದಂತೆ ತಡೆ ಹಿಡಿಯುತ್ತದೆ. ಎರಡನೆಯದಾಗಿ, ಕಪ್ಪು ವಸ್ತುವು ಇತರ ಬಣ್ಣಗಳಿಗಿಂತ ಅಗ್ಗವಾಗಿದೆ. ಇದು ಚಾರ್ಜರ್ ತಯಾರಿಕೆಯ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.
ಕಳೆದ ಕೆಲವು ವರ್ಷಗಳಿಂದ ಕಂಪನಿಗಳು ಮೊಬೈಲ್ ಜೊತೆ ಬಿಳಿ ಬಣ್ಣದ ಚಾರ್ಜರ್ ನೀಡುತ್ತಿವೆ. ಬಿಳಿ ಚಾರ್ಜರ್ ಉಪಯೋಗ ಮಾಡಲು ಮೂರು ಕಾರಣಗಳಿವೆ. ಮೊದಲನೆಯದಾಗಿ, ಬಿಳಿ ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣ ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಚಾರ್ಜರ್ ಕಡಿಮೆ ಬಿಸಿಯಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಕಪ್ಪು ಬಣ್ಣದ ಚಾರ್ಜರ್‌ಗಳ ಸಮಸ್ಯೆಯೆಂದರೆ ರಾತ್ರಿಯ ಕತ್ತಲೆಯಲ್ಲಿ ಅವುಗಳನ್ನು ಕಂಡುಹಿಡಿಯುವುದು ಕಷ್ಟ. ಅದೇ ಬಿಳಿ ಬಣ್ಣದ ಚಾರ್ಜರ್ ಕತ್ತಲೆಯಲ್ಲಿಯೂ ಸುಲಭವಾಗಿ ಗೋಚರಿಸುತ್ತದೆ. ಬಿಳಿ ಬಣ್ಣವು ಸೌಮ್ಯತೆಯ ಸಂಕೇತವಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ. ಅದಕ್ಕಾಗಿಯೇ ಈಗ ಕಂಪನಿಗಳು ಹೆಚ್ಚು ಬಿಳಿ ಬಣ್ಣದ ಚಾರ್ಜರ್‌ಗಳನ್ನು ತಯಾರಿಸಲು ಪ್ರಾರಂಭಿಸಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ