ನಿಮ್ಮ ಮೊಬೈಲ್ ನಂಬರ್ ಮರೆತಿರುವಿರಾ?, ರೀಚಾರ್ಜ್ ಕೂಡ ಮುಗಿದಿದೆಯಾ?: ಈ ಟ್ರಿಕ್ಸ್​ನಿಂದ ಕಂಡುಹಿಡಿಯಿರಿ

|

Updated on: Jan 29, 2024 | 12:20 PM

Tech Tips: ನೀವು USSD ಕೋಡ್ ಅಥವಾ ಮೈ ಅಕೌಂಟ್ ಅಪ್ಲಿಕೇಶನ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ಕಂಪನಿಯ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿ.

ನಿಮ್ಮ ಮೊಬೈಲ್ ನಂಬರ್ ಮರೆತಿರುವಿರಾ?, ರೀಚಾರ್ಜ್ ಕೂಡ ಮುಗಿದಿದೆಯಾ?: ಈ ಟ್ರಿಕ್ಸ್​ನಿಂದ ಕಂಡುಹಿಡಿಯಿರಿ
Mobile Number
Follow us on

ಇಂದಿನ ಕಾಲದಲ್ಲಿ ಮೊಬೈಲ್ ಫೋನ್ (Mobile Phone) ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮಾತನಾಡುವುದು, ಇಂಟರ್ನೆಟ್ ಬ್ರೌಸ್ ಮಾಡುವುದು ಅಥವಾ ಇನ್ನಾವುದೇ ಕೆಲಸವಿರಲಿ, ನಾವು ನಮ್ಮ ಮೊಬೈಲ್ ಫೋನ್‌ಗಳ ಮೂಲಕ ಎಲ್ಲವನ್ನೂ ಮಾಡುತ್ತೇವೆ. ಆದರೆ ಅನೇಕ ಬಾರಿ ನಾವು ನಮ್ಮ ಮೊಬೈಲ್ ಸಂಖ್ಯೆಯನ್ನು ಮರೆತುಬಿಡುತ್ತೇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಸಹ ಮರೆತಿದ್ದರೆ ಗಾಬರಿಯಾಗಬೇಡಿ, ಇಂದು ನಾವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಕಂಡುಹಿಡಿಯುವ ಕೆಲವು ಮಾರ್ಗಗಳನ್ನು ತಿಳಿಸುತ್ತೇವೆ.

USSD ಕೋಡ್ ಬಳಸಿ

ವಿವಿಧ ಟೆಲಿಕಾಂ ಕಂಪನಿಗಳಿಗೆ ವಿಭಿನ್ನ USSD ಕೋಡ್‌ಗಳಿವೆ, ಅದರ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಕಂಡುಹಿಡಿಯಬಹುದು.

ಏರ್​ಟೆಲ್: *282# ವೊಡಾಫೋನ್: 1112# ಅಥವಾ 5550# ಐಡಿಯಾ: 1214# ಬಿಎಸ್​ಎನ್​ಎಲ್: *99# ಜಿಯೋ: *1# ಈ USSD ಕೋಡ್‌ಗಳನ್ನು ಡಯಲ್ ಮಾಡಿದ ನಂತರ, ನಿಮ್ಮ ಮುಂದೆ ಮೆನು ತೆರೆಯುತ್ತದೆ. ಈ ಮೆನುವಿನಿಂದ “ಮೈ ನಂಬರ್” ಅಥವಾ “ಮೊಬೈಲ್ ಸಂಖ್ಯೆ” ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಡಿಸ್​ಪ್ಲೇ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ
6000mAh ಬ್ಯಾಟರಿ: ಬಜೆಟ್ ಬೆಲೆಗೆ ಇನ್ಫಿನಿಕ್ಸ್ ಸ್ಮಾರ್ಟ್ 8+ ಬಿಡುಗಡೆ
ಐಕ್ಯೂ ಕ್ವೆಸ್ಟ್ ಡೇಸ್: ಐಕ್ಯೂ ನಿಯೋ 7 ಪ್ರೊ ಮೇಲೆ 7,000 ರೂ. ರಿಯಾಯಿತಿ
ಮೊಬೈಲ್ ಫೆಸ್ಟ್ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್
ಸ್ಯಾಮ್​ಸಂಗ್​ನಿಂದ ಪವಾಡ: ಬಜೆಟ್ ಬೆಲೆಯಲ್ಲಿ ಬರುತ್ತಿದೆ ಹೊಸ ಮಡಚುವ ಫೋನ್

ಜನವರಿ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು: ಯಾವುವು ನೋಡಿ

ಮೈ ಅಕೌಂಟ್ ಅಪ್ಲಿಕೇಶನ್ ಬಳಸಿ

ನಿಮ್ಮ ಟೆಲಿಕಾಂ ಕಂಪನಿಯ ಮೈ ಅಕೌಂಟ್ ಅಪ್ಲಿಕೇಶನ್ ಅನ್ನು ನೀವು ಹೊಂದಿದ್ದರೆ, ಸುಲಭವಾಗಿ ಮೊಬೈಲ್ ಸಂಖ್ಯೆಯನ್ನು ನೀವು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ನಿಮ್ಮ ಮೊಬೈಲ್ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡಬೇಕು.

ಟೆಲಿಕಾಂ ಕಂಪನಿಯನ್ನು ಸಂಪರ್ಕಿಸಿ

ನೀವು USSD ಕೋಡ್ ಅಥವಾ ಮೈ ಅಕೌಂಟ್ ಅಪ್ಲಿಕೇಶನ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ಕಂಪನಿಯ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಮರೆತು ಹೋಗಿದೆ ಎಂದು ಹೇಳಿ. ಕಂಪನಿಯು ನಿಮ್ಮ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕದಂತಹ ಕೆಲವು ಮಾಹಿತಿಯನ್ನು ಕೇಳುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಕಂಪನಿಯು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮಗೆ ತಿಳಿಸುತ್ತದೆ.

ಸ್ನೇಹಿತ ಅಥವಾ ಕುಟುಂಬದ ಸದಸ್ಯರನ್ನು ಕೇಳಿ

ನಿಮ್ಮ ಮೊಬೈಲ್‌ನಲ್ಲಿ ವ್ಯಾಲಿಡಿಟಿ ಮುಗಿದಿಲ್ಲ ಎಂದಾದರೆ ಮೊಬೈಲ್ ಸಂಖ್ಯೆ ಸೇವ್ ಆಗಿರುವ ಯಾವುದೇ ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿದ್ದರೆ, ಅವರಲ್ಲಿ ಕೇಳುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನೀವು ಕಂಡುಹಿಡಿಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ