ಸ್ಯಾಮ್​ಸಂಗ್​ನಿಂದ ಪವಾಡ: ಬಜೆಟ್ ಬೆಲೆಯಲ್ಲಿ ಬರುತ್ತಿದೆ ಹೊಸ ಮಡಚುವ ಫೋನ್

Galaxy Z Fold 6: ಮೂಲಗಳ ಪ್ರಕಾರ ಬಜೆಟ್ ಬೆಲೆಯ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಈ ವರ್ಷ ಮಾರುಕಟ್ಟೆಗೆ ಬರಲಿದೆಯಂತೆ. ಈ ಫೋಲ್ಡಬಲ್ ಫೋನ್ ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆಯಷ್ಟೆ. ಆದರೆ, ಖಚಿತ ಬೆಲೆ ಬಹಿರಂಗವಾಗಿಲ್ಲ.

ಸ್ಯಾಮ್​ಸಂಗ್​ನಿಂದ ಪವಾಡ: ಬಜೆಟ್ ಬೆಲೆಯಲ್ಲಿ ಬರುತ್ತಿದೆ ಹೊಸ ಮಡಚುವ ಫೋನ್
Galaxy Z Fold 6
Follow us
Vinay Bhat
|

Updated on: Jan 28, 2024 | 1:32 PM

ಪ್ರಸ್ತುತ, ಮಡಚಬಹುದಾದ ಸ್ಮಾರ್ಟ್​ಫೋನ್‌ಗಳು (Foldable phones) ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭರ್ಜರಿ ಮಾರಾಟ ಕಾಣುತ್ತಿದೆ. ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್ ದೈತ್ಯರು ಈಗಾಗಲೇ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಸ್ಯಾಮ್​ಸಂಗ್ ಕಂಪನಿಯನ್ನು ಪ್ರಮುಖವಾಗಿ ಉಲ್ಲೇಖಿಸಲೇಬೇಕು. ಈಗಾಗಲೇ ಗ್ಯಾಲಕ್ಸಿ Z ಫೋಲ್ಡ್ 6 ಫೋನನ್ನು ಬಿಡುಗಡೆ ಮಾಡಿರುವ ಸ್ಯಾಮ್​ಸಂಗ್ ಇದೀಗ ಅಚ್ಚರಿ ಎಂಬಂತೆ ಬಜೆಟ್ ಬೆಲೆಗೆ ಮಡಚುವ ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ.

ಪ್ರಸಿದ್ಧ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್‌ಸಂಗ್ ಕಳೆದ ವರ್ಷ ಗ್ಯಾಲಕ್ಸಿ Z ಫ್ಲಿಪ್ 5 ಎಂಬ ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ ಈ ಸ್ಯಾಮ್‌ಸಂಗ್ ಫೋನ್​ನ ಬೆಲೆ 1 ಲಕ್ಷಕ್ಕೂ ಅಧಿಕ. ಇದರ ಬೆಲೆ ಭಾರತದಲ್ಲಿ ರೂ. 1,54,999. ಪ್ರೀಮಿಯಂ ಬಳಕೆದಾರರನ್ನು ಮಾತ್ರ ಗುರಿಪಡಿಸಿ ಈ ಮೊಬೈಲ್ ಅನ್ನು ಲಾಂಚ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಬಜೆಟ್ ರೂಪಾಂತರದಲ್ಲಿ ಮಡಚಬಹುದಾದ ಫೋನ್ ಅನ್ನು ತರಲು ಕಂಪನಿ ಮುಂದಾಗಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್

ಇದನ್ನೂ ಓದಿ
Image
ಜನವರಿ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು
Image
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್
Image
ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬರುತ್ತಾ?
Image
ಸದ್ದಿಲ್ಲದೆ ದಿಢೀರ್ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಬಜೆಟ್ ಫೋನ್

ಮೂಲಗಳ ಪ್ರಕಾರ ಬಜೆಟ್ ಬೆಲೆಯ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಈ ವರ್ಷ ಮಾರುಕಟ್ಟೆಗೆ ಬರಲಿದೆಯಂತೆ. ಈ ಫೋಲ್ಡಬಲ್ ಫೋನ್ ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆಯಷ್ಟೆ. ಆದರೆ, ಖಚಿತ ಬೆಲೆ ಬಹಿರಂಗವಾಗಿಲ್ಲ. ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಆಗಿ ಸೇಲ್ ಆಗುತ್ತಿರುವ ಕಾರಣ ಸ್ಯಾಮ್​ಸಂಗ್ ಈ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

ಚೀನಾದ ಶವೋಮಿ, ಹಾನರ್ ಮತ್ತು ಹುವೈ ನಂತಹ ಕಂಪನಿಗಳು ಕಡಿಮೆ ಬೆಲೆಗೆ ಫೋಲ್ಡಬಲ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಸಮಯದಲ್ಲಿ, ಸ್ಯಾಮ್‌ಸಂಗ್ ಕೂಡ ಈ ಸ್ಪರ್ಧೆಯಿಂದ ಉಳಿಯಲು ಫೋನ್ ಅನ್ನು ಬಿಡುಗಡೆ ಮಾಡುತ್ತಿದೆಯಂತೆ. ಈ ವರ್ಷದ ಜುಲೈ ನಂತರ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋಲ್ಡ್ 6 ಫೋನ್ ಬಿಡುಗಡೆ ಆಗಲಿದೆ ಎಂಬ ಮಾತಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 7.6 ಇಂಚುಗಳ ಡಿಸ್​ಪ್ಲೇಯನ್ನು ಹೊಂದಿದೆ. ಮತ್ತು ಸೆಕೆಂಡರಿ ಡಿಸ್​ಪ್ಲೇ 6 ಇಂಚುಗಳಿಂದ ಕೂಡುದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ವಾಲ್ಕಂನ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ