Tech Tips: ಪಾಸ್​ಪೋರ್ಟ್ ಸೈಜ್ ಫೋಟೋ ಬೇಕಿದ್ದರೆ ನಿಮಿಷದಲ್ಲಿ ನೀವೇ ಪಡೆಯಿರಿ: ಹೇಗೆ ಗೊತ್ತೇ?

|

Updated on: Jan 16, 2024 | 8:40 AM

Passport Size Photo Online: ಯಾವುದೇ ಫೋಟೋ ಸ್ಟುಡಿಯೋಗೆ ಹೋಗದೆ, ಹೆಚ್ಚು ಹಣ ಖರ್ಚು ಮಾಡದೆ ಸುಲಭವಾಗಿ 60-70 ಪಾಸ್​ಪೋರ್ಟ್ ಸೈಜ್ ಫೋಟೋಗಳನ್ನು ತೆಗೆಯುವುದು ಹೇಗೆ ಎಂದು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಅದು ಕೂಡ 50 ರೂ. ಒಳಗೆ ಸಾಧ್ಯವಾಗುತ್ತದೆ.

Tech Tips: ಪಾಸ್​ಪೋರ್ಟ್ ಸೈಜ್ ಫೋಟೋ ಬೇಕಿದ್ದರೆ ನಿಮಿಷದಲ್ಲಿ ನೀವೇ ಪಡೆಯಿರಿ: ಹೇಗೆ ಗೊತ್ತೇ?
passport size photo
Follow us on

ನಮಗೆ ಹೆಚ್ಚಿನ ಸಮಯದಲ್ಲಿ ಪಾಸ್‌ಪೋರ್ಟ್ ಗಾತ್ರದ ಫೋಟೋ (Passport Size Photo) ಅಗತ್ಯವಿರುತ್ತದೆ. ಕಾಲೇಜು-ಶಾಲಾ ಪ್ರವೇಶದಿಂದ ಕಛೇರಿ ಅಥವಾ ಬ್ಯಾಂಕ್ ಕೆಲಸದವರೆಗೆ ಎಲ್ಲೆಡೆ ಪಾಸ್‌ಪೋರ್ಟ್ ಅಳತೆಯ ಫೋಟೋ ಅತ್ಯಗತ್ಯ. ಅಂತಹ ಪರಿಸ್ಥಿತಿಯಲ್ಲಿ, ಮುಂಚಿತವಾಗಿ ಪಾಸ್​ಪೋರ್ಟ್ ಗಾತ್ರದ ಫೋಟೋವನ್ನು ಹೊಂದಿರುವುದು ಬಹಳ ಮುಖ್ಯ. ಯಾವುದೇ ಫೋಟೋ ಸ್ಟುಡಿಯೋಗೆ ಹೋಗದೆ, ಹೆಚ್ಚು ಹಣ ಖರ್ಚು ಮಾಡದೆ ಸುಲಭವಾಗಿ 60-70 ಫೋಟೋಗಳನ್ನು ತೆಗೆಯುವುದು ಹೇಗೆ ಎಂದು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಅದು ಕೂಡ 50 ರೂ. ಒಳಗೆ ಸಾಧ್ಯವಾಗುತ್ತದೆ. ತುರ್ತು ಸಂದರ್ಭದಲ್ಲಿ ಅಥವಾ ನಿಮ್ಮ ಹಣವನ್ನು ಉಳಿಸಲು, ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಈ ರೀತಿ ಪಡೆದುಕೊಳ್ಳಿ.

ತುರ್ತು ಪರಿಸ್ಥಿತಿಯಲ್ಲಿ ಈ ರೀತಿಯ ಪಾಸ್‌ಪೋರ್ಟ್ ಅಳತೆಯ ಫೋಟೋ ತೆಗೆದುಕೊಳ್ಳಿ

  • ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ತ್ವರಿತವಾಗಿ ಮತ್ತು ಅಗ್ಗವಾಗಿ ಪಡೆಯಲು ನೀವು ನಿಮ್ಮ ಫೋನ್ ಅನ್ನು ತೆಗೆದುಕೊಂಡು ಒಳ್ಳೆಯ ಸೆಲ್ಫಿ ಫೋಟೋವನ್ನು ಕ್ಲಿಕ್ ಮಾಡಿ.
  • ಫೋಟೋ ಕ್ಲಿಕ್ ಮಾಡಿದ ನಂತರ, ಗೂಗಲ್​ಗೆ ಹೋಗಿ ಮತ್ತು Cutout pro ಎಂದು ಟೈಪ್ ಮಾಡಿ. ಇಲ್ಲದಿದ್ದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://www.cutout.pro/.
  • ಇದರ ನಂತರ ನಿಮಗೆ ಫೋಟೋವನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ತೋರಿಸಲಾಗುತ್ತದೆ.
  • ನೀವು ಕ್ಲಿಕ್ ಮಾಡಿದ ಸೆಲ್ಫಿಯನ್ನು ಇಲ್ಲಿ ಅಪ್‌ಲೋಡ್ ಮಾಡಿ.
  • ಇಲ್ಲಿ ನೀವು ನಿಮ್ಮ ಫೋಟೋದ ಬ್ಯಾಕ್​ಗ್ರೌಂಡ್ ಬದಲಾಯಿಸಲು, ಬಟ್ಟೆ ಬದಲಾಯಿಸಲು ಮತ್ತು ಕಲರ್ ಎಡಿಟಿಂಗ್ ಮಾಡಲು ಆಯ್ಕೆಯನ್ನು ಪಡೆಯುತ್ತೀರಿ.
  • ಈಗ ಟಿ-ಶರ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಫೋಟೋದಲ್ಲಿರುವ ಬಟ್ಟೆಗಳನ್ನು ಬೇಕಾದಲ್ಲಿ ಬದಲಿಸಿ. ಇಲ್ಲಿ ನೀವು ಫಾರ್ಮಲ್, ಟೀ ಶರ್ಟ್, ಶರ್ಟ್, ಸೂಟ್ ಎಲ್ಲಾ ರೀತಿಯ ಆಯ್ಕೆಗಳನ್ನು ಕಾಣುತ್ತೀರಿ.
  • ನಂತರ ಮೇಲ್ಭಾಗದಲ್ಲಿ ಕಸ್ಟಮೈಸ್ ಗಾತ್ರದಲ್ಲಿ 413×531 ಆಯ್ಕೆಮಾಡಿ.
  • ಇದಾದ ಬಳಿಕ, ನಿಮ್ಮ ಫೋಟೋದ ಪ್ರಿಂಟ್ ತೆಗೆದುಕೊಳ್ಳಲು, ಫೋಟೋ ವಿವರಣೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆಯನ್ನು ಆರಿಸಿ.
  • ಕಾಗದದ ಗಾತ್ರದಲ್ಲಿ A4 ಗಾತ್ರವನ್ನು ಆಯ್ಕೆ ಮಾಡಿ ಮತ್ತು ಯಾವುದೇ ಫೋಟೊ ಕಾಪಿ ಅಂಗಡಿಗೆ ಹೋಗಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

Smartphone Virus: ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಬರೋದನ್ನು ತಪ್ಪಿಸಲು ಸಿಂಪಲ್ ಟಿಪ್ಸ್

ಪ್ರಿಂಟ್‌ಔಟ್‌ಗಾಗಿ ನೀವು ಸುಮಾರು 30 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದರ ನಂತರ ನೀವು 60-70 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹೊಂದಿರುತ್ತೀರಿ. ಈ ಪ್ರಕ್ರಿಯೆಯ ನಂತರ, ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ನೀವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ತೆಗೆದಿಡಬಹುದು. ಇದರಲ್ಲಿ ನೀವು ಸುಲಭವಾಗಿ ಎಡಿಟಿಂಗ್ ಮಾಡಬಹುದು.

ಇದನ್ನೂ ಓದಿ
ಐಫೋನ್​ನಂತೆ ಕಾಣುವ ಇನ್ಫಿನಿಕ್ಸ್ ಸ್ಮಾರ್ಟ್ 8 ಮಾರಾಟ ಆರಂಭ: ಬೆಲೆ 7499 ರೂ.
ಭಾರತಕ್ಕೆ ಬರುತ್ತಿದೆ ರಿಯಲ್ ಮಿ 12 ಪ್ರೊ ಸರಣಿ:ರೋಚಕತೆ ಸೃಷ್ಟಿಸಿದ ಫೀಚರ್ಸ್
ಐಫೋನ್ 15 ಬೇಕಿದ್ದರೆ ಇಂದೇ ಖರೀದಿಸಿ: ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ
ಜಿಯೋ-ಏರ್ಟೆಲ್ ಬಳಕೆದಾರರಿಗೆ ಶಾಕ್: ಅನ್ಲಿಮಿಟೆಡ್ 5G ಇಂಟರ್ನೆಟ್ ಅಂತ್ಯ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ