AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Republic Day Sale: ಹೊಸ ಐಫೋನ್ 15 ಬೇಕಿದ್ದರೆ ಇಂದೇ ಖರೀದಿಸಿ: ಇದಕ್ಕಿಂತ ಕಡಿಮೆ ಬೆಲೆಗೆ ಇನ್ನು ಸಿಗಲ್ಲ

Apple iPhone 15 Offer: ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ, ಐಫೋನ್ 15 ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಜನವರಿ 13 ರಿಂದ ಪ್ರಾರಂಭವಾಗಿರುವ ಈ ಮಾರಾಟವು ಜನವರಿ 19 ರವರೆಗೆ ಮುಂದುವರಿಯುತ್ತದೆ. ನೀವು ಐಫೋನ್‌ ಖರೀದಿಸುವ ಪ್ಲಾನ್​ನಲ್ಲಿದ್ದರೆ ಫ್ಲಿಪ್‌ಕಾರ್ಟ್‌ನ ಈ ಲಾಭವನ್ನು ಪಡೆಯಬಹುದು.

Flipkart Republic Day Sale: ಹೊಸ ಐಫೋನ್ 15 ಬೇಕಿದ್ದರೆ ಇಂದೇ ಖರೀದಿಸಿ: ಇದಕ್ಕಿಂತ ಕಡಿಮೆ ಬೆಲೆಗೆ ಇನ್ನು ಸಿಗಲ್ಲ
iPhone 15 and republic day sale
Vinay Bhat
|

Updated on:Jan 15, 2024 | 11:29 AM

Share

ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಿಂದ ಐಒಎಸ್ ಬಳಸುವ ಪ್ಲಾನ್​ನಲ್ಲಿದ್ದರೆ ಅಥವಾ ಹಳೆಯ ಐಫೋನ್ ಕೊಟ್ಟು ನೂತನ ಮಾದರಿಯ ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಇದಕ್ಕೆಲ್ಲ ಇದು ಸರಿಯಾದ ಸಮಯ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ನಿಮ್ಮ ಆಸೆಯನ್ನು ಈಡೇರಿಸಲು ಮುಂದಾಗಿದೆ. ಈಗ ನೀವು ಹೊಚ್ಚ ಹೊಸ ಐಫೋನ್ 15 ಅನ್ನು 65,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರಿಪಬ್ಲಿಕ್ ಸೇಲ್ (Flipkart Republic Day Sale) ನಡೆಯುತ್ತಿದೆ. ಇದರಲ್ಲಿ 79,900 ರೂ. ಮೌಲ್ಯದ ಐಫೋನ್ ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯಬಹುದು.

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ, ಐಫೋನ್ 15 ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಜನವರಿ 13 ರಿಂದ ಪ್ರಾರಂಭವಾಗಿರುವ ಈ ಮಾರಾಟವು ಜನವರಿ 19 ರವರೆಗೆ ಮುಂದುವರಿಯುತ್ತದೆ. ನೀವು ಐಫೋನ್‌ ಖರೀದಿಸುವ ಪ್ಲಾನ್​ನಲ್ಲಿದ್ದರೆ ಫ್ಲಿಪ್‌ಕಾರ್ಟ್‌ನ ಈ ಲಾಭವನ್ನು ಪಡೆಯಬಹುದು. ಹೊಸ ಐಫೋನ್‌ನಲ್ಲಿ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.

ಮೂರೇ ದಿನ ಬಾಕಿ: 200MP ಕ್ಯಾಮೆರಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಬಿಡುಗಡೆಗೆ ದಿನಗಣನೆ

ಇದನ್ನೂ ಓದಿ
Image
ಜಿಯೋ-ಏರ್ಟೆಲ್ ಬಳಕೆದಾರರಿಗೆ ಶಾಕ್: ಅನ್ಲಿಮಿಟೆಡ್ 5G ಇಂಟರ್ನೆಟ್ ಅಂತ್ಯ
Image
ಸ್ಮಾರ್ಟ್​ಫೋನ್​ಗೆ ವೈರಸ್ ಬರೋದನ್ನು ತಪ್ಪಿಸಲು ಸಿಂಪಲ್ ಟಿಪ್ಸ್
Image
ಸಖತ್ ಸೌಂಡ್ ಮಾಡುತ್ತಿದೆ ನಥಿಂಗ್ ಫೋನ್ 2a ಸ್ಮಾರ್ಟ್​ಫೋನ್: ಹೇಗಿರಲಿದೆ?
Image
ಸಿಮ್ ಕಾರ್ಡ್ ಬೇಕಾದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!

ಐಫೋನ್ 15: 63,999 ರೂ. ಗೆ ಲಭ್ಯ

ನೀವು ಫ್ಲಿಪ್‌ಕಾರ್ಟ್‌ನಿಂದ 63,999 ರೂ. ಗಳಲ್ಲಿ ಐಫೋನ್ 15 ಅನ್ನು ಖರೀದಿಸಬಹುದು. 128GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ 79,900 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರೂ. 11,901 ರಿಯಾಯಿತಿಯ ನಂತರ ರೂ 65,999 ಕ್ಕೆ ಮಾರಾಟವಾಗುತ್ತಿದೆ. ಜೊತೆಗೆ ನಿಮ್ಮ ಬಳಿ ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳಿದ್ದರೆ ಹೆಚ್ಚುವರಿ ಉಳಿತಾಯ ಮಾಡಬಹುದು. ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ, ನೀವು ಈ ಫೋನನ್ನು 63,999 ರೂ. ಗೆ ಖರೀದಿಸಲು ಸಾಧ್ಯವಾಗುತ್ತದೆ.

ಐಫೋನ್ 15: ವಿನಿಮಯ ಬೋನಸ್

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಿಮಗೆ ಐಫೋನ್ 15 ಅನ್ನು ಖರೀದಿಸಲು ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಆಫರ್ ಕೂಡ ನೀಡುತ್ತಿದೆ. ಈ ಮೂಲಕ ನೀವು ಐಫೋನ್ 15 ಅನ್ನು ಖರೀದಿಸಲು ಬಯಸಿದರೆ, ವಿನಿಮಯ ಕೊಡುಗೆ 54,990 ರೂ. ವರೆಗೆ ಲಭ್ಯವಿರುತ್ತದೆ. ಆದಾಗ್ಯೂ, ಎಕ್ಸ್​ಚೇಂಜ್ ಆಫರ್ ನಿಮ್ಮ ಫೋನ್‌ನ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಐಫೋನ್ 15 ಫೀಚರ್ಸ್

ಐಫೋನ್ 15 6.1 ಇಂಚಿನ ಸೂಪರ್ ರೆಟಿನಾ XDR ಡಿಸ್​ಪ್ಲೇಯೊಂದಿಗೆ ಬರುತ್ತದೆ. ಆ್ಯಪಲ್‌ನ ಹೊಸ ಸ್ಮಾರ್ಟ್‌ಫೋನ್ A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 48MP + 12MP ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಆ್ಯಪಲ್​ನ ವಿಶೇಷ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವು ಐಫೋನ್ 15 ನಲ್ಲಿಯೂ ಸಹ ಲಭ್ಯವಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Mon, 15 January 24