ಜಿಯೋ-ಏರ್ಟೆಲ್ ಬಳಕೆದಾರರಿಗೆ ಅತಿ ದೊಡ್ಡ ಶಾಕ್: ಅನ್ಲಿಮಿಟೆಡ್ ಉಚಿತ 5G ಇಂಟರ್ನೆಟ್ ಅಂತ್ಯ?

Unlimited 5G Data Offer: ಮುಂಬರುವ ದಿನಗಳಲ್ಲಿ 5G ಇಂಟರ್ನೆಟ್ ಅನ್ನು ಉಚಿತವಾಗಿ ಬಳಸುವುದು ಕಷ್ಟವಾಗಬಹುದು. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ 2024 ರ ದ್ವಿತೀಯಾರ್ಧದಲ್ಲಿ ಅನಿಯಮಿತ 5G ಕೊಡುಗೆಯನ್ನು ನಿಲ್ಲಿಸಲಿದೆ. ಇದಲ್ಲದೇ ಮೊಬೈಲ್ ರೀಚಾರ್ಜ್ ಬೆಲೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಟೆಲಿಕಾಂ ಕಂಪನಿಗಳು ಲಾಭವನ್ನು ಹೆಚ್ಚಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಿದೆ.

ಜಿಯೋ-ಏರ್ಟೆಲ್ ಬಳಕೆದಾರರಿಗೆ ಅತಿ ದೊಡ್ಡ ಶಾಕ್: ಅನ್ಲಿಮಿಟೆಡ್ ಉಚಿತ 5G ಇಂಟರ್ನೆಟ್ ಅಂತ್ಯ?
Airtel and Jio
Follow us
Vinay Bhat
|

Updated on: Jan 15, 2024 | 10:30 AM

5G ಇಂಟರ್ನೆಟ್ (5G Internet) ಬಳಸುವ ಕೋಟ್ಯಂತರ ಭಾರತೀಯ ಗ್ರಾಹಕರು ಸದ್ಯದಲ್ಲೇ ದೊಡ್ಡ ಆಘಾತವನ್ನು ಎದುರಿಸಬೇಕಾಗುತ್ತದೆ. ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆ. ಆದಷ್ಟು ಬೇಗ ಜನರು 5G ಬಳಸಲು ಪಾವತಿಸಬೇಕಾಗುತ್ತದೆ. ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಆಗಲಿದೆ.

ಹಿಂದುಸ್ಥಾನ್ ಟೈಮ್ಸ್ ವರದಿಯ ಪ್ರಕಾರ, ಹೊಸ 5ಜಿ ರೀಚಾರ್ಜ್ ಯೋಜನೆಗಳು ಪ್ರಸ್ತುತ 4G ರೀಚಾರ್ಜ್ ದರಗಳಿಗಿಂತ ಕನಿಷ್ಠ 5-10% ದುಬಾರಿಯಾಗಬಹುದು. ಹಾಗೆ ಮಾಡುವುದರಿಂದ ಟೆಲಿಕಾಂ ಕಂಪನಿಗಳು ಹಣಗಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 2022 ರಲ್ಲಿ 5G ಪ್ರಾರಂಭ

ಅಕ್ಟೋಬರ್ 2022 ರಲ್ಲಿ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಿದವು. ಅಂದಿನಿಂದ ಎರಡೂ ಕಂಪನಿಗಳು ಅಸ್ತಿತ್ವದಲ್ಲಿರುವ 4G ದರದಲ್ಲಿ 5G ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿವೆ. ಅನಿಯಮಿತ 5G ಡೇಟಾಕ್ಕಾಗಿ ಬಳಕೆದಾರರಿಂದ ಯಾವುದೇ ಪ್ರತ್ಯೇಕ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಆದಾಗ್ಯೂ, ಉಚಿತ ಅನಿಯಮಿತ 5G ಇಂಟರ್ನೆಟ್ ಕೊಡುಗೆಯ ಯುಗವು ಅಂತ್ಯಗೊಳ್ಳಲಿದೆ ಎಂದು ಈಗ ಹೇಳಲಾಗಿದೆ.

ಇದನ್ನೂ ಓದಿ
Image
ಸಿಮ್ ಕಾರ್ಡ್ ಬೇಕಾದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!
Image
3 ದಿನ ಬಾಕಿ: 200MP ಕ್ಯಾಮೆರಾದ ಗ್ಯಾಲಕ್ಸಿ S24 ಸರಣಿ ಬಿಡುಗಡೆಗೆ ದಿನಗಣನೆ
Image
ಕೈ ಬೆರಳಿನ ಗಾತ್ರದ ಫೋನ್ ನೋಡಿದ್ರೆ ಶಾಕ್ ಆಗ್ತೀರಾ: ಇದರ ಬೆಲೆ ಕೇವಲ...
Image
ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್​ನ ಮಡಚುವ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಒಮ್ಮೆ ಚಾರ್ಜ್ ಮಾಡಿದರೆ 50 ವರ್ಷ ಕೆಲಸ ಮಾಡುವ ಬ್ಯಾಟರಿ ಇದು: ವಿಜ್ಞಾನಿಗಳಿಂದ ಪವಾಡ

Jio-Airtel ಮಾತ್ರ 5G ಸೇವೆ ಒದಗಿಸುತ್ತದೆ

ದೇಶದ ಎರಡೂ ಪ್ರಮುಖ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5G ಸೇವೆಯ ವ್ಯಾಪ್ತಿಯನ್ನು ಒದಗಿಸಲು ಯೋಜಿಸುತ್ತಿವೆ. ಈಗ ಅವರ ಗಮನವು ಗಳಿಕೆಯನ್ನು ಹೆಚ್ಚಿಸುವತ್ತ ನೋಡುತ್ತಿದೆ. ಭಾರತದಲ್ಲಿ 5G ಕ್ರಾಂತಿಯನ್ನು ತಂದ ಕೀರ್ತಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸಲ್ಲುತ್ತದೆ. ಎರಡೂ ಕಂಪನಿಗಳು ದೇಶದಲ್ಲಿ 5G ಸೇವೆಯನ್ನು ಒದಗಿಸುವಲ್ಲಿ ಮುಂದಾಳತ್ವ ವಹಿಸಿವೆ. ದೇಶಾದ್ಯಂತ ಸುಮಾರು 12.5 ಕೋಟಿ 5ಜಿ ಬಳಕೆದಾರರಿದ್ದಾರೆ.

5G ಯೋಜನೆಗಳು ದುಬಾರಿಯಾಗಬಹುದು

2024 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ಬಳಕೆದಾರರ ಸಂಖ್ಯೆ 20 ಕೋಟಿ ದಾಟುವ ನಿರೀಕ್ಷೆಯಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 5-10 ಪ್ರತಿಶತದಷ್ಟು ದುಬಾರಿಯಾಗಬಹುದು. ಇದಲ್ಲದೆ, ಎರಡೂ ಕಂಪನಿಗಳು 30-40 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡಬಹುದು, ಇದರಿಂದ ಜನರು 5G ಸೇವೆಯನ್ನು ಅಳವಡಿಸಿಕೊಳ್ಳಬಹುದು ಮತ್ತು ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಬಹುದು ಎಂದು ನಂಬಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ