AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮ್ಮೆ ಚಾರ್ಜ್ ಮಾಡಿದರೆ 50 ವರ್ಷ ಕೆಲಸ ಮಾಡುವ ಬ್ಯಾಟರಿ ಇದು: ವಿಜ್ಞಾನಿಗಳಿಂದ ಪವಾಡ

50 Years Charged Battery: ಒಂದೇ ಚಾರ್ಜ್​ನಲ್ಲಿ 50 ವರ್ಷಗಳ ಕಾಲ ಯಾವುದೇ ಅಡತಡೆ ಇಲ್ಲದೆ ಕೆಲಸ ಮಾಡುವ ಬ್ಯಾಟರಿ ಇದ್ದರೆ ಹೇಗೆ? ಊಹಿಸಿಕೊಳ್ಳಲೂ ಕಷ್ಟ ಎನಿಸುತ್ತದೆ. ಆದರೆ ಚೀನಾದ ವಿಜ್ಞಾನಿಗಳು ಇದನ್ನು ಸಾಕಾರಗೊಳಿಸಲು ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಒಮ್ಮೆ ಚಾರ್ಜ್ ಮಾಡಿದರೆ 50 ವರ್ಷ ಕೆಲಸ ಮಾಡುವ ಬ್ಯಾಟರಿ ಇದು: ವಿಜ್ಞಾನಿಗಳಿಂದ ಪವಾಡ
Battery
Vinay Bhat
|

Updated on: Jan 14, 2024 | 11:04 AM

Share

ಸ್ಮಾರ್ಟ್​ಫೋನ್ (Smartphone) ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಅದರಲ್ಲಿ ಸಣ್ಣ ಬ್ಯಾಟರಿ ಹಾಗೂ ಚಾರ್ಜ್ ನಿಲ್ಲುವುದಿಲ್ಲ ಎಂಬುದು. ಬ್ಯಾಟರಿ ಎಷ್ಟೇ ಉತ್ತಮವಾಗಿದ್ದರೂ, ತಡೆರಹಿತವಾಗಿ ಬಳಸಿದರೆ ಎರಡು ದಿನಗಳಿಗಿಂತ ಹೆಚ್ಚು ಚಾರ್ಜ್ ಉಳಿಯುವುದಿಲ್ಲ. ಆದರೀಗ ಇಡೀ ಜಗತ್ತೇ ಅಚ್ಚರಿಗೊಳ್ಳುವಂತಹ ಸುದ್ದಿಯೊಂದು ಬಂದಿದೆ. ಒಂದೇ ಚಾರ್ಜ್​ನಲ್ಲಿ 50 ವರ್ಷಗಳ ಕಾಲ ಯಾವುದೇ ಅಡತಡೆ ಇಲ್ಲದೆ ಕೆಲಸ ಮಾಡುವ ಬ್ಯಾಟರಿ ಇದ್ದರೆ ಹೇಗೆ? ಊಹಿಸಿಕೊಳ್ಳಲೂ ಕಷ್ಟ ಎನಿಸುತ್ತದೆ.

ಆದರೆ ಚೀನಾದ ವಿಜ್ಞಾನಿಗಳು ಇದನ್ನು ಸಾಕಾರಗೊಳಿಸಲು ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಚೀನಾದ ಬೆಟಾವೋಲ್ಟ್ ಟೆಕ್ನಾಲಜಿ ಎಂಬ ಕಂಪನಿಯು 50 ವರ್ಷಗಳವರೆಗೆ ಬಾಳಿಕೆ ಬರುವ ರೇಡಿಯೊನ್ಯೂಕ್ಲೈಡ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಲೆಕ್ಕಾಚಾರದಲ್ಲಿ, ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ, ನೀವು ಅದನ್ನು ಪುನಃ ಚಾರ್ಜ್​ಗೆ ಇಡುವ ಅಗತ್ಯವಿಲ್ಲ. ಬೆಟಾವೋಲ್ಟ್ ಟೆಕ್ನಾಲಜಿ ಸ್ಮಾರ್ಟ್​ಫೋನ್‌ಗಳಲ್ಲಿ ಕಂಡುಬರುವ ಪರಮಾಣು ಬ್ಯಾಟರಿಗಳ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ.

Honor 90 5G: ಧಮಾಕ ಆಫರ್: 200MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ 20,000ಕ್ಕೆ ಲಭ್ಯ

ಇದನ್ನೂ ಓದಿ
Image
3 ದಿನಗಳಲ್ಲಿ 1000 ಕೋಟಿ: ಭಾರತದಲ್ಲಿ ದಾಖಲೆ ಬರೆದ ರೆಡ್ಮಿ ನೋಟ್ 13 ಸರಣಿ
Image
ಬೆಲೆ ಕೇವಲ 7,499 ರೂ.: ಬಜೆಟ್ ಪ್ರಿಯರಿಗಾಗಿ ಬಂದಿದೆ ಹೊಸ ಸ್ಮಾರ್ಟ್​ಫೋನ್
Image
ಟ್ರಾಫಿಕ್ ಫೈನ್ ಎಸ್​ಎಂಎಸ್ ಬಂದ್ರೆ ಅಲರ್ಟ್ ಆಗಿ!
Image
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ: ಯಾವುದಕ್ಕೆ ಎಷ್ಟು ಡಿಸ್ಕೌಂಟ್?

ಬಾಹ್ಯಾಕಾಶದಲ್ಲಿ ಸೂರ್ಯನಿಂದ ದೂರದಲ್ಲಿರುವ ಉಪಕರಣಗಳ ಕಾರ್ಯಕ್ಷಮತೆಗಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಪರಮಾಣು ಬ್ಯಾಟರಿಗಳ ತಯಾರಿಕೆಯು ಹಿಂದೆ ಅನೇಕ ಬಾರಿ ವಿಫಲವಾಗಿದೆ. ಸ್ಮಾರ್ಟ್‌ಫೋನ್‌ಗಳಿಗೆ ಹೊಂದಿಕೊಳ್ಳುವ ಬ್ಯಾಟರಿಗಳನ್ನು ತಯಾರಿಸಲು ಅಸಮರ್ಥತೆ ಇದಕ್ಕೆ ಕಾರಣ.

ಹಾಗೆಯೇ.. ಪ್ಲುಟೋನಿಯಂನಂತಹ ವಿಕಿರಣಶೀಲ ವಸ್ತುವನ್ನು ಸ್ಮಾರ್ಟ್​ಫೋನ್​ನಲ್ಲಿ ಬಳಸುವುದು ಅಪಾಯಕಾರಿ. ಹಾಗಾಗಿ, ಬೀಟಾವೋಲ್ಟ್ ಟೆಕ್ನಾಲಜಿ ಈ ಬಾರಿ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿದೆ. ಇದು ಸಿಂಥೆಟಿಕ್ ಡೈಮಂಡ್ ಲೇಯರ್ ಅನ್ನು ಬಳಸುವ ರೇಡಿಯೊನ್ಯೂಕ್ಲೈಡ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಅರೆವಾಹಕ ಪದರವಾಗಿ ಕಾರ್ಯನಿರ್ವಹಿಸುತ್ತದೆ.

ಸಾಮಾನ್ಯ ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ, ನ್ಯೂಕ್ಲಿಯರ್ ಬ್ಯಾಟರಿಗಳು 10 ಪಟ್ಟು ಶಕ್ತಿಯನ್ನು ಹೊಂದಿರುತ್ತವೆ. ನ್ಯೂಕ್ಲಿಯರ್ ಬ್ಯಾಟರಿಗಳು 1 ಗ್ರಾಂ ಬ್ಯಾಟರಿಯಲ್ಲಿ 3,300 ಮೆಗಾವ್ಯಾಟ್-ಗಂಟೆಗಳನ್ನು ಸಂಗ್ರಹಿಸಬಹುದು. ಈ ಕಂಪನಿಯು ಈಗಾಗಲೇ BB100 ಎಂಬ ವರ್ಕಿಂಗ್ ಮಾಡೆಲ್ ಅನ್ನು ತಂದಿದೆ. ಈ ಬ್ಯಾಟರಿ 15 x 15 x 5 ಮಿಮೀ ಅಳತೆ, 100 ಮೈಕ್ರೋ ವ್ಯಾಟ್ ವಿದ್ಯುತ್ ಒದಗಿಸುತ್ತದೆ. ಈ ಬ್ಯಾಟರಿಗಳು ಲಭ್ಯವಾದರೆ, ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಪವಾಡವಾಗುವುದರಲ್ಲಿ ಸಂದೇಹವಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!