AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix SMART 8: ಬೆಲೆ ಕೇವಲ 7,499 ರೂ.: ಬಜೆಟ್ ಪ್ರಿಯರಿಗಾಗಿ ಬಂದಿದೆ ಹೊಸ ಸ್ಮಾರ್ಟ್​ಫೋನ್

Infinix SMART 8 Launched in India: ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ ಅನ್ನು 7,499 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒದಗಿಸಲಾಗಿದ್ದು, 5,000 mAh ಬ್ಯಾಟರಿ- 10 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜನವರಿ 15 ರಿಂದ ಖರೀದಿಸಬಹುದು.

Infinix SMART 8: ಬೆಲೆ ಕೇವಲ 7,499 ರೂ.: ಬಜೆಟ್ ಪ್ರಿಯರಿಗಾಗಿ ಬಂದಿದೆ ಹೊಸ ಸ್ಮಾರ್ಟ್​ಫೋನ್
Infinix SMART 8
Vinay Bhat
|

Updated on: Jan 14, 2024 | 7:45 AM

Share

ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಭಾರತಕ್ಕೆ ಹೊಸ ಫೋನ್​ನೊಂದಿಗೆ ಬಂದಿದೆ. ಇದೀಗ ದೇಶದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 (Infinix SMART 8) ಫೋನನ್ನು ಅನಾವರಣ ಮಾಡಿದೆ. ಇದು ಕಂಪನಿ ಭಾರತೀಯ ಬಳಕೆದಾರರಿಗಾಗಿ ಬಿಡುಗಡೆ ಮಾಡಿದ ಅತ್ಯುತ್ತಮ ಅಗ್ಗದ ಸ್ಮಾರ್ಟ್‌ಫೋನ್ ಆಗಿದೆ. ಇನ್ಫಿನಿಕ್ಸ್ ಸ್ಮಾರ್ಟ್ 8 ಎಚ್‌ಡಿ ಫೋನ್‌ನ ಅನೇಕ ಹೋಲಿಕೆಗಳೊಂದಿಗೆ ಈ ಫೋನ್ ಅನ್ನು ರಿಲೀಸ್ ಮಾಡಲಾಗಿದೆ. ಆದರೆ ಪ್ರೊಸೆಸರ್ ಮತ್ತು ವಿನ್ಯಾಸದ ವಿಷಯದಲ್ಲಿ ಇದು ವಿಭಿನ್ನವಾಗಿದೆ. ಈ ಫೋನ್​ನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಫೀಚರ್ಸ್:

ಡಿಸ್​ಪ್ಲೇ- ಬಜೆಟ್ ಶ್ರೇಣಿಯಲ್ಲಿ ಬರುತ್ತಿರುವ ಈ ಫೋನ್ 6.6 ಇಂಚಿನ HD Plus ಡಿಸ್​ಪ್ಲೇ ಹೊಂದಿದೆ. ಇದರ ರಿಫ್ರೆಶ್ ದರ 90 Hz ಮತ್ತು ಗರಿಷ್ಠ ಬ್ರೈಟ್​ನೆಸ್ 500 nits ಆಗಿದೆ. ಮುಂಭಾಗದಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ನೀಡಲಾಗಿದೆ.

Tech Tricks: ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ ಗೊತ್ತೇ?

ಇದನ್ನೂ ಓದಿ
Image
ಟ್ರಾಫಿಕ್ ಫೈನ್ ಎಸ್​ಎಂಎಸ್ ಬಂದ್ರೆ ಅಲರ್ಟ್ ಆಗಿ!
Image
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ: ಯಾವುದಕ್ಕೆ ಎಷ್ಟು ಡಿಸ್ಕೌಂಟ್?
Image
ಧಮಾಕ ಆಫರ್: 200MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ 20,000ಕ್ಕೆ ಲಭ್ಯ
Image
ಭಾರತದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್​ನ ಮೊದಲ ಫೀಚರ್ ಫೋನ್ ಬಿಡುಗಡೆ

ಪ್ರೊಸೆಸರ್- ಈ ಫೋನ್ ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ ಹಿಲಿಯೊ G36 ಪ್ರೊಸೆಸರ್ ನೀಡಲಾಗಿದೆ. ಇದು 4 GB RAM ಮತ್ತು 64 GB ಸಂಗ್ರಹಣೆಯೊಂದಿಗೆ ಬರುತ್ತದೆ. ಮೈಕ್ರೋ SSD ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದು.

ಆಪರೇಟಿಂಗ್ ಸಿಸ್ಟಮ್- XOS 13 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇದರಲ್ಲಿ ನೀಡಲಾಗಿದೆ.

ಬ್ಯಾಟರಿ- ಇದು 5,000 mAh ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 10 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ- 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಇದರೊಂದಿಗೆ ಆಕ್ಸಿಲರಿ ಲೆನ್ಸ್ ಮತ್ತು ಎಲ್ಇಡಿ ಫ್ಲ್ಯಾಷ್ ಲಭ್ಯವಿದೆ. ಸೆಲ್ಫಿಗಾಗಿ 8MP ಸಂವೇದಕವನ್ನು ನೀಡಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಬೆಲೆ ಮತ್ತು ಲಭ್ಯತೆ:

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ ಅನ್ನು 7,499 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ನಾಲ್ಕು ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ. ಇವುಗಳಲ್ಲಿ Galaxy White, Rainbow Blue, Shiny Gold ಮತ್ತು Timber Black ಸೇರಿವೆ. ಜನವರಿ 15 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಯೋಜನೆಯ 500ನೇ ಕೋಟಿ ಟಿಕೆಟ್ ವಿತರಿಸಲಿರುವ ಸಿದ್ದರಾಮಯ್ಯ
ಯೋಜನೆಯ 500ನೇ ಕೋಟಿ ಟಿಕೆಟ್ ವಿತರಿಸಲಿರುವ ಸಿದ್ದರಾಮಯ್ಯ
ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣ: ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ
ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣ: ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ
ಚಾಲಕನ ನಿಯಂತ್ರಣ ತಪ್ಪಿ ಅನಾಹುತ, ಬೆಂಗಳೂರು ಮೂಲದ ಕಾರು!
ಚಾಲಕನ ನಿಯಂತ್ರಣ ತಪ್ಪಿ ಅನಾಹುತ, ಬೆಂಗಳೂರು ಮೂಲದ ಕಾರು!
ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ
ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ
ಲಂಡನ್: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ವಿಮಾನ
ಲಂಡನ್: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ವಿಮಾನ