ಕೈ ಬೆರಳಿನ ಗಾತ್ರದ ಫೋನ್ ನೋಡಿದ್ರೆ ನೀವು ಶಾಕ್ ಆಗ್ತೀರಾ: ಇದರ ಬೆಲೆ ಕೇವಲ 1,099 ರೂ.

Finger size phone: ನೀವು ಇಲ್ಲಿಯವರೆಗೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಬಳಸಿರಬಹುದು, ಆದರೆ ಈ ಫೋನ್ ಅನ್ನು ನೋಡಿದರೆ ನೀವು ಶಾಕ್ ಆಗ್ತೀರಾ. ಈ ಚಿಕ್ಕ ಮತ್ತು ಮುದ್ದಾದ ಫೋನ್ ನಿಮ್ಮ ಬೆರಳಿನ ಗಾತ್ರವಾಗಿದೆ. ನೀವು ಈ ಫೋನ್ ಅನ್ನು ನಿಮ್ಮ ಕ್ಲಚ್/ಪಾಕೆಟ್ ಪರ್ಸ್‌ನಲ್ಲಿಯೂ ಇರಿಸಬಹುದು.

ಕೈ ಬೆರಳಿನ ಗಾತ್ರದ ಫೋನ್ ನೋಡಿದ್ರೆ ನೀವು ಶಾಕ್ ಆಗ್ತೀರಾ: ಇದರ ಬೆಲೆ ಕೇವಲ 1,099 ರೂ.
Finger size phone
Follow us
|

Updated on:Jan 14, 2024 | 1:54 PM

ನೀವು ಇಲ್ಲಿಯವರೆಗೆ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಸ್ಮಾರ್ಟ್​ಫೋನ್​ಗಳನ್ನು (Smartphones) ಬಳಸಿರಬಹುದು ಅಥವಾ ನೋಡಿರಬಹುದು. ಆದರೆ, ನೀವು ಬೆರಳಿನ ಗಾತ್ರದ ಫೋನ್ ಬಳಸಿದ್ದೀರಾ? ಅಥವಾ ಎಲ್ಲಾದರು ನೋಡಿದ್ದೀರಾ?. ನಾವಿಲ್ಲ ಅತಿ ಚಿಕ್ಕ ಗಾತ್ರದ ಕೆಲವು ಫೋನ್‌ಗಳ ಬಗ್ಗೆ ಹೇಳುತ್ತೇವೆ. ಅಚ್ಚರಿ ವಿಷಯವೆಂದರೆ ಈ ಫೋನ್ ಕೇವಲ ಆಟಿಕೆ ಅಲ್ಲ, ಇದರ ಮೂಲಕ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು. ಈ ಫೋನ್‌ನಲ್ಲಿ ನೀವು ಮಾಮೂಲಿ ಫೋನ್‌ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ.

ಮಾರುಕಟ್ಟೆಯಲ್ಲಿ ತಮ್ಮ ಚಿಕ್ಕ ಫೋನ್‌ಗಳನ್ನು ಬಿಡುಗಡೆ ಮಾಡಿರುವ ಹಲವು ಬ್ರಾಂಡ್‌ಗಳು ಇವೆ. ಈ ಬೆರಳು ಗಾತ್ರದ ಫೋನ್‌ಗಳು ನಿಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬಲ್ಲವು. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ನೀವು ಈ ಫೋನ್‌ಗಳನ್ನು ರಿಯಾಯಿತಿಯೊಂದಿಗೆ ಖರೀದಿಸಬಹುದು.

Traffic Challan SMS: ಟ್ರಾಫಿಕ್ ಫೈನ್ ಎಸ್​ಎಂಎಸ್ ಬಂದ್ರೆ ಅಲರ್ಟ್ ಆಗಿ!

ಇದನ್ನೂ ಓದಿ
Image
ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್​ನ ಮಡಚುವ ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಇದು ಒಮ್ಮೆ ಚಾರ್ಜ್‌ ಫುಲ್ ಮಾಡಿದರೆ 50 ವರ್ಷಗಳವರೆಗೆ ಕೆಲಸ ಮಾಡುವ ಬ್ಯಾಟರಿ
Image
3 ದಿನಗಳಲ್ಲಿ 1000 ಕೋಟಿ: ಭಾರತದಲ್ಲಿ ದಾಖಲೆ ಬರೆದ ರೆಡ್ಮಿ ನೋಟ್ 13 ಸರಣಿ
Image
ಬೆಲೆ ಕೇವಲ 7,499 ರೂ.: ಬಜೆಟ್ ಪ್ರಿಯರಿಗಾಗಿ ಬಂದಿದೆ ಹೊಸ ಸ್ಮಾರ್ಟ್​ಫೋನ್

Kechaoda K10 Finger Sized

ಈ ಸಿಂಗಲ್ ಸಿಮ್ ಫೋನ್‌ನಲ್ಲಿ ನೀವು 0.66 ಇಂಚಿನ ಡಿಸ್​ಪ್ಲೇಯನ್ನು ಪಡೆಯುತ್ತೀರಿ. ಒಬ್ಬರು ಬ್ಲೂಟೂತ್ ಸಂಪರ್ಕ ವೈಶಿಷ್ಟ್ಯ ಮತ್ತು ವೈರ್‌ಲೆಸ್ ಎಫ್‌ಎಂ ಅನ್ನು ಸಹ ಆನಂದಿಸಬಹುದು. ನೀವು ಅಮೆಜಾನ್​ನಲ್ಲಿ 300mah ಬ್ಯಾಟರಿ ಹೊಂದಿರುವ ಈ ಫೋನ್ ಅನ್ನು ಕೇವಲ 1,099 ರೂ. ಗಳಿಗೆ 21 ಪ್ರತಿಶತ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಗ್ರೀನ್‌ಬೆರಿ ಜಿ370

ಈ ಫೋನ್‌ನಲ್ಲಿ ನೀವು ಡ್ಯುಯಲ್ ಸಿಮ್ ಆಯ್ಕೆಯನ್ನು ಪಡೆಯುತ್ತೀರಿ. ಇದರ ವಿನ್ಯಾಸವು ಸ್ಲಿಮ್ ಮತ್ತು ಸ್ಟೈಲಿಶ್ ಆಗಿದೆ. ಸ್ವಯಂ ಕರೆ ರೆಕಾರ್ಡಿಂಗ್, ವೈರ್‌ಲೆಸ್ ಎಫ್‌ಎಂ, ಬ್ಲೂಟೂತ್ ಸಂಪರ್ಕ ಇತ್ಯಾದಿ ವೈಶಿಷ್ಟ್ಯಗಳು ಲಭ್ಯವಿದೆ. ನೀವು ಈ ಫೋನ್ ಅನ್ನು ಅಮೆಜಾನ್​ನಿಂದ 43 ಶೇಕಡಾ ರಿಯಾಯಿತಿಯೊಂದಿಗೆ ಕೇವಲ 1,139 ರೂ. ಗಳಿಗೆ ಖರೀದಿಸಬಹುದು.

itel Circle 1 Round Screen Phone

ಈ ಫೋನ್‌ನಲ್ಲಿರುವ ಬ್ಯಾಟರಿಯ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ, ನೀವು ಇದರಲ್ಲಿ 500mAh ಬ್ಯಾಟರಿಯನ್ನು ಪಡೆಯುತ್ತೀರಿ. 1.32 ಇಂಚಿನ ಡಿಸ್​ಪ್ಲೇ ಹೊಂದಿರುವ ಈ ಫೋನ್‌ನಲ್ಲಿ ನೀವು ರೋಸ್ ಗೋಲ್ಡ್ ಕಲರ್ ಆಯ್ಕೆಯನ್ನು ಪಡೆಯುವಿರಿ. ಇದರಲ್ಲಿ ಬ್ಲೂಟೂತ್ ಕರೆ ಮಾಡುವ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ. ಈ ಫೋನ್‌ನ ಮೂಲ ಬೆಲೆ 1,899 ರೂ. ಆಗಿದ್ದರೂ, ನೀವು ಇದನ್ನು ಅಮೆಜಾನ್​ನಲ್ಲಿ 21 ಪ್ರತಿಶತ ರಿಯಾಯಿತಿಯೊಂದಿಗೆ ಕೇವಲ 1,499 ರೂ. ಗಳಿಗೆ ಪಡೆಯುತ್ತೀರಿ.

ಈ ಫೋನ್‌ಗಳು ನಿಮ್ಮ ಮೂಲಭೂತ ಅಗತ್ಯಗಳನ್ನು ಮಾತ್ರ ಪೂರೈಸಬಲ್ಲವು ಎಂಬುದನ್ನು ನೆನಪಿನಲ್ಲಿಡಿ. ಈ ಮೊಬೈಲ್ ಫೋನ್‌ಗಳಲ್ಲಿ ನೀವು ಇಂದಿನ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳನ್ನು ಪಡೆಯುವುದಿಲ್ಲ. ಆದರೆ ಅವುಗಳ ಬೆಲೆಯನ್ನು ಪರಿಗಣಿಸಿ, ಕರೆ ಸೇರಿದಂತೆ ಇತರ ವೈಶಿಷ್ಟ್ಯಗಳು ಸಾಕಷ್ಟು ಉತ್ತಮವಾಗಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Sun, 14 January 24

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ