Smartphone Tips: ಸ್ಮಾರ್ಟ್‌ಫೋನ್‌ನ ಬ್ಯಾಕ್ ಕ್ಯಾಮೆರಾ ಪಕ್ಕದಲ್ಲಿ ಈ ಸಣ್ಣ ಹೋಲ್ ಯಾಕಿದೆ ಗೊತ್ತೇ?

Small Hole Next To Your Phone Camera: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್​ಫೋನ್‌ಗಳ ಕ್ಯಾಮೆರಾ ಬಳಿ ಈ ಹೋಲ್ ಅನ್ನು ನೀವು ಕಾಣಬಹುದು. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನ ಹಿಂದಿನ ಕ್ಯಾಮೆರಾದ ಪಕ್ಕದಲ್ಲೇ ಈ ರಂಧ್ರವಿರುತ್ತದೆ. ಅಷ್ಟಕ್ಕೂ ಕಂಪನಿಯು ಈ ರಂಧ್ರವನ್ನು ಏಕೆ ನೀಡಿದೆ? ಮತ್ತು ಇದು ಏನು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?.

Smartphone Tips: ಸ್ಮಾರ್ಟ್‌ಫೋನ್‌ನ ಬ್ಯಾಕ್ ಕ್ಯಾಮೆರಾ ಪಕ್ಕದಲ್ಲಿ ಈ ಸಣ್ಣ ಹೋಲ್ ಯಾಕಿದೆ ಗೊತ್ತೇ?
Phone Camera Small Hole
Follow us
Vinay Bhat
|

Updated on: Nov 03, 2023 | 1:05 PM

ಇಂದಿನ ಟೆಕ್ ಯುಗದಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸ್ಮಾರ್ಟ್‌ಫೋನ್ (Smartphone) ಬೇಕೇ ಬೇಕು. ಇದು ಇಲ್ಲದೆ ಯೋಚಿಸಲೂ ಸಾಧ್ಯವಿಲ್ಲ. ಕೆಲಸಕ್ಕಾಗಿ ಅಥವಾ ಮನರಂಜನೆಗಾಗಿ, ನಾವು ಇಡೀ ದಿನ ಸ್ಮಾರ್ಟ್‌ಫೋನ್ ಬಳಸುತ್ತೇವೆ. ಆದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಅನೇಕರಿಗೆ ತಿಳಿದಿಲ್ಲದ ಹಲವು ವಿಷಯಗಳಿವೆ. ಮೊಬೈಲ್ ಫೋನ್‌ನಲ್ಲಿ ಜನರಿಗೆ ತಿಳಿದಿಲ್ಲದ ಹಲವಾರು ಭಾಗಗಳಿವೆ. ಅವುಗಳಲ್ಲಿ ಒಂದು ಫೋನ್‌ನ ಬ್ಯಾಕ್ ಕ್ಯಾಮೆರಾ ಸೆಟಪ್‌ನ ಸಮೀಪವಿರುವ ಸಣ್ಣ ರಂಧ್ರ ಕೂಡ ಒಂದು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್​ಫೋನ್‌ಗಳ ಕ್ಯಾಮೆರಾ ಬಳಿ ಈ ಹೋಲ್ ಅನ್ನು ನೀವು ಕಾಣಬಹುದು. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನ ಹಿಂದಿನ ಕ್ಯಾಮೆರಾದ ಪಕ್ಕದಲ್ಲೇ ಈ ರಂಧ್ರವಿರುತ್ತದೆ. ಈ ರಂಧ್ರವು ವಿಭಿನ್ನ ಮಾದರಿಗಳಲ್ಲಿ ಚಿಕ್ಕದಾಗಿ ಅಥವಾ ದೊಡ್ಡದಾಗಿರುತ್ತದೆ. ಅಷ್ಟಕ್ಕೂ ಕಂಪನಿಯು ಈ ರಂಧ್ರವನ್ನು ಏಕೆ ನೀಡಿದೆ? ಮತ್ತು ಇದು ಏನು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?. ಇದನ್ನು ಕೇವಲ ಡಿಸೈನ್​ಗಾಗಿ ಬಳಸಲಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಇದು ನಿಜ ಅಲ್ಲ. ಈ ಹೋಲ್ ನೀಡಿರುವುದಕ್ಕೆ ಕಾರಣವಿದೆ.

ಟೆಕ್ನೋದಿಂದ ಅತ್ಯುತ್ತಮ ಬಜೆಟ್ ಸ್ಮಾರ್ಟ್​ಫೋನ್ ಟೆಕ್ನೋ ಪಾಪ್ 8 ಬಿಡುಗಡೆ: ಬೆಲೆ ಎಷ್ಟು?

ಇದನ್ನೂ ಓದಿ
Image
ನಥಿಂಗ್ ಫೋನ್ 2 ಮೇಲೆ ಧಮಾಕ ಆಫರ್:ದೀಪಾವಳಿ ಡಿಸ್ಕೌಂಟ್​ನಲ್ಲಿ ಇಂದೇ ಖರೀದಿಸಿ
Image
108MP ಕ್ಯಾಮೆರಾದ ಹೊಸ ಹುವೈ ನೋವಾ 11 SE ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?
Image
14,900 ರೂ.: ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್​ನಲ್ಲಿ ಐಫೋನ್ 14 ಗೆ ಬಂಪರ್ ಡಿ
Image
ಬಜೆಟ್ ಪ್ರಿಯರಿಗೆ ಬಂಪರ್ ಫೋನ್: ಲಾವಾ ಬ್ಲೇಜ್ 2 5G ಫೋನ್ ಅನಾವರಣ

ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿರುವ ಈ ಸಣ್ಣ ರಂಧ್ರವನ್ನು ನಾಯ್ಸ್ ಕ್ಯಾನ್ಸಲೇಷನ್​ಗೆ ನೀಡಲಾಗಿದೆ. ಅಂದರೆ ಇದು ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ. ಇದೊಂದು ಮೈಕ್ರೊಫೋನ್ ಆಗಿದೆ. ಸುಲಭವಾಗಿ ಹೇಳಬೇಕೆಂದರೆ, ನೀವು ಸ್ಮಾರ್ಟ್‌ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಾಗ, ಈ ಮೈಕ್ರೊಫೋನ್ ನಿಮ್ಮ ಸುತ್ತಲಿನ ಶಬ್ದವನ್ನು ಕಡಿಮೆ ಮಾಡಿ ನೀವು ಮಾತನಾಡುವುದನ್ನು ಮಾತ್ರ ಸೆರೆಹಿಡಿಯುತ್ತದೆ. ಇದರರ್ಥ ನೀವು ಫೋನ್‌ನಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುವಾಗ, ನಿಮ್ಮ ಧ್ವನಿ ಸ್ಪಷ್ಟವಾಗಿ ಇನ್ನೊಬ್ಬ ವ್ಯಕ್ತಿಗೆ ಕೇಳಿಸುತ್ತದೆ.

ನೀವು ಚಾರ್ಜರ್ ಪಾಯಿಂಟ್ ಇರುವ ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಮೈಕ್ರೊಫೋನ್ ಕಾಣಬಹುದು. ಅದರ ಮೂಲಕ ಈ ಸಣ್ಣ ರಂಧ್ರ ನಿಮ್ಮ ಸ್ಪಷ್ಟ ಧ್ವನಿಯು ಫೋನ್‌ನ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ತಲುಪಿಸುತ್ತದೆ. ಹಿಂಬದಿಯಲ್ಲಿರುವ ಈ ಹೋಲ್ ಹೊರಗಿನ ಶಬ್ದವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು ಬಿಡುಗಡೆ ಆಗುವ ಹೆಚ್ಚಿನ ಪ್ರಮುಖ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೋಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ