ಇಂದು 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ಫೋನ್ಗಳು (Smartphones) ಮಾರುಕಟ್ಟೆಯಲ್ಲಿದೆ. ಆದರೆ, ಎಷ್ಟೇ ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನಿದ್ದರೂ ಅನೇಕ ಬಾರಿ ಫೋನ್‌ನಲ್ಲಿ ಫೋಟೋ ತೆಗೆದಾಗ ಅದು ಮಸುಕಾಗಿ ಕಾಣಿಸುತ್ತದೆ. ಹೀಗಾದಾಗ ಈ ಫೋನ್ ಬೇಡ, ಹೊಸ ಸ್ಮಾರ್ಟ್ಫೋನ್ ಖರೀದಿಸುವ ಎಂದು ಯೋಚಿಸುತ್ತೀರಿ. ಆದರೆ, ನೀವು ಕ್ಯಾಮೆರಾದ ಕಾರಣದಿಂದ ನಿಮ್ಮ ಫೋನ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ನಿಮ್ಮ ಫೋನ್‌ನ ಕ್ಯಾಮೆರಾವನ್ನು ನೀವು ಹೇಗೆ ಸರಿಪಡಿಸಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ನಿಮ್ಮ ಫೋನ್‌ನಿಂದ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು, ಇದಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ.
ಅನೇಕರು ಹಲವು ಬಾರಿ ಫೋನಿನ ಲೆನ್ಸ್ ಅನ್ನು ಕ್ಲೀನ್ ಮಾಡುವುದೇ ಇಲ್ಲ. ಇದರಿಂದ ಅದರಲ್ಲಿ ಧೂಳು ಸೇರಿಕೊಳ್ಳುತ್ತದೆ. ಬಹುತೇಕ ಎಲ್ಲಾ ಬಳಕೆದಾರರು ಫೋನ್ ಖರೀದಿಸಿದ ನಂತರ ಅದನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದರಿಂದಾಗಿ ಫೋನ್‌ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಧೂಳಿನ ಶೇಖರಣೆಯಿಂದ ನೀವು ತೆಗೆಯುವ ಫೋಟೋ ಮಸುಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಲೆನ್ಸ್ ಅನ್ನು ಸ್ವಚ್ಚಗೊಳಸಿಬೇಕು. ಲೆನ್ಸ್ ಕೊಳಕಾಗಿದ್ದರೆ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ.
ನೀವು ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದರೆ, ನಿಮ್ಮ ಫೋನ್‌ನಲ್ಲಿರುವ ಫೋಟೋಗಳು ಮಸುಕಾಗಿ ಬರುತ್ತದೆ. ಅಥವಾ ಉತ್ತಮ ಗುಣಮಟ್ಟದಲ್ಲಿ ಕಾಣಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಫೋಟೋವನ್ನು ಕ್ಲಿಕ್ ಮಾಡಿದಾಗ, ಲೈಟ್ ಉಪಯೋಗಿಸಿ. ಅಂದಹಾಗೆ, ನೀವು ನೈಸರ್ಗಿಕ ಬೆಳಕಿನಲ್ಲಿ ಫೋಟೋವನ್ನು ಕ್ಲಿಕ್ ಮಾಡಿದರೆ ನಿಮ್ಮ ಫೋಟೋ ಚೆನ್ನಾಗಿ ಕಾಣುತ್ತದೆ.
ಫೋನ್‌ನ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ, ನೀವು ಕ್ಯಾಮೆರಾ ಅಪ್ಲಿಕೇಶನ್ ಅನ್ನು ತೆರೆದರೆ ಅದರಲ್ಲಿ ಪೋರ್ಟ್ರೇಟ್ ಮೋಡ್, ಲ್ಯಾಂಡ್‌ಸ್ಕೇಪ್, ನೈಟ್ ಮೋಡ್ ಅಥವಾ ಪ್ರೊ ಮೋಡ್‌ನಂತಹ ಹಲವು ಮೋಡ್‌ಗಳನ್ನು ನೋಡಬಹುದು. ಇದನ್ನು ಉಪಯೋಗಿಸಿ ಫೋಟೋ ಕ್ಲಿಕ್ಕಿಸಿದರೆ ಚೆನ್ನಾಗಿ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ