ಮಾರುಕಟ್ಟೆಯಲ್ಲಿಂದು ನಕಲಿ ಫೋನ್ಗಳ (Fake Smartphones) ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಭಾರತದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಚಾರ. ಆನ್ಲೈನ್ ಮತ್ತು ಆಫ್ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರಿಗೆ ತಿಳಿಯದಂತೆ ಈರೀತಿಯ ವಂಚನೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 (iPhone 13) ನಕಲಿ ಫೋನ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಜನರ ತಂಡವನ್ನು ಬಂಧಿಸಿದ್ದರು. ಇವರಿಂದ 60ಕ್ಕೂ ಅಧಿಕ ಫೇಕ್ ಐಫೋನ್ಗಳನ್ನು ವಶಪಡಿಸಿಕೊಳ್ಳಲಾಯಿತು. ಪೊಲೀಸರು ಹೇಳುವ ಪ್ರಕಾರ, ಇವರು ದೆಹಲಿಯಲ್ಲಿ ಕೇವಲ 12,000 ರೂಪಾಯಿಗೆ ಫೋನನ್ನು ಖರೀದಿಸಿ ಚೀನಾದ ಶಾಪಿಂಗ್ ವೆಬ್ಸೈಟ್ನಿಂದ ಥೇಟ್ ಐಫೋನ್ ರೀತಿಯ ಬಾಕ್ಸ್ ಅನ್ನು ಆರ್ಡರ್ ಮಾಡಿ ಅದಕ್ಕೆ ಆ್ಯಪಲ್ (Apple) ಸ್ಟಿಕ್ಕರ್ ಅಂಟಿಸಿ ಸೇಲ್ ಮಾಡುತ್ತಿದ್ದರಂತೆ. ಹೀಗಿರುವಾಗ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದು ಹೇಗೆ?.
IMEI ನಂಬರ್: ಎಲ್ಲ ಒರಿಜಿನಲ್ ಸ್ಮಾರ್ಟ್ಫೋನ್ಗಳಲ್ಲಿ IMEI ಇರುತ್ತದೆ. ನಿಮ್ಮ ಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಇರುವ ಸುಲಭ ವಿಧಾನ ಇದಾಗಿದೆ. ಅನೇಕ ಕಡೆಗಳಲ್ಲಿ ಈ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ನಿಮ್ಮ ಮೊಬೈಲ್ ಬಾಕ್ಸ್ನಲ್ಲಿ ಕೂಡ ಇದು ಇರುತ್ತದೆ. ಸ್ಮಾರ್ಟ್ಫೋನ್ನ ಸೆಟ್ಟಿಂಗ್ ವಿಭಾಗಕ್ಕೆ ಹೋದರೆ ಅಲ್ಲೂ ನೋಡಬಹುದು.
ಸೆಟ್ಟಿಂಗ್ಸ್ನಲ್ಲಿ IMEI ನಂಬರ್ ನೋಡಲು ಹೀಗೆ ಮಾಡಿ. ಸೆಟ್ಟಿಂಗ್ಸ್-ಜನರಲ್ ಇಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ. ಇಲ್ಲಿ ನಿಮಗೆ IMEI ನಂಬರ್ ಕಾಣಿಸಿಲ್ಲ ಎಂದಾದರೆ ನಿಮ್ಮ ಫೋನ್ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ.
Tech Tips: ವಾಟ್ಸ್ಆ್ಯಪ್ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬೇಕೇ?: ಇಲ್ಲಿದೆ ಟ್ರಿಕ್
ನಿಮಗೆ ಹೇಗೆ ಪರಿಶೀಲಿಸುವುದು ಎಂದು ತಿಳಿಯಲು ಸಾಧ್ಯವಾಗದಿದ್ದರೆ ನಿಮ್ಮ ಪಕ್ಕದ ಮೊಬೈಲ್ ಸ್ಟೋರ್ಗೆ ಭೇಟಿ ನೀಡಿ. ಅವರು ನಿಮ್ಮ ಫೋನನ್ನು ರನ್ ಮಾಡಿ ಇದು ಫೇಕ್ ಅಥವಾ ರಿಯಲ್ ಎಂಬುದನ್ನು ತಿಳಯಲು ಸಹಾಯ ಮಾಡುತ್ತಾರೆ. ಅಂತೆಯೆ ನೀವು ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಅದು ಅತಿ ಕಡಿಮೆ ಬೆಲೆ ಇದೆ ಎಂದು ಸಿಕ್ಕಸಿಕ್ಕಲ್ಲಿ ಪಡೆದುಕೊಳ್ಳಬೇಡಿ. ನಂಬಿಕೆಗೆ ಅರ್ಹವಾದ ತಾಣ ಅಥವಾ ರಿಟೆಲ್ ಸ್ಟೋರ್ಗಳನ್ನು ಆಯ್ಕೆ ಮಾಡುವುದು ಉತ್ತಮ.
ಹೆಚ್ಚಿನ ಫೇಕ್ ಮೊಬೈಲ್ಗಳು ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಗಳು ಇಲ್ಲಿದೆ.
Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.Samsung = Sammsung or Samsang or Samsong, iPhone = iPone or iPhoon, Huawei= Hauwei or Huawai, Xiaomi = Xaiomi or Xioami.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ