WhatsApp Tricks: ವಾಟ್ಸ್​ಆ್ಯಪ್​ನಲ್ಲಿರುವ ಈ 3 ಟ್ರಿಕ್​ಗಳ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ: ಇಲ್ಲಿದೆ ನೋಡಿ

|

Updated on: Apr 28, 2023 | 12:43 PM

Tech Tips: ಒಂದರ ಹಿಂದೆ ಒಂದರಂತೆ ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುವ ವಾಟ್ಸ್​ಆ್ಯಪ್​ನಲ್ಲಿ ಕೆಲವೊಂದು ಟ್ರಿಕ್​ಗಳಿವೆ. ಈ ಆಯ್ಕೆಯನ್ನು ಸ್ವತಃ ವಾಟ್ಸ್​ಆ್ಯಪ್ ನೀಡಿದೆ. ಆದರೆ, ಅನೇಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

WhatsApp Tricks: ವಾಟ್ಸ್​ಆ್ಯಪ್​ನಲ್ಲಿರುವ ಈ 3 ಟ್ರಿಕ್​ಗಳ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ: ಇಲ್ಲಿದೆ ನೋಡಿ
WhatsApp Tips and Tricks
Follow us on

ಕ್ಷಣಾರ್ಧದಲ್ಲಿ ಸಂದೇಶದ ಮೂಲಕ ಸಂವಹನ ನಡೆಸಲು ಇಂದು ಬಹುತೇಕ ಜನರು ಉಪಯೋಗಿಸುತ್ತಿರುವ ಆ್ಯಪ್ ಎಂದರೆ ಅದು ವಾಟ್ಸ್​ಆ್ಯಪ್ (WhatsApp). ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಉಪಯೋಗಿಸುತ್ತಿದ್ದಾರೆ. ವಾರಕ್ಕೊಂದು ನೂತನ ಫೀಚರ್​ಗಳನ್ನು ಪರಿಚಯಿಸುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು (WhatsApp Update) ಬರಲಿದ್ದು ಕೆಲವೊಂದು ಪರೀಕ್ಷಾ ಹಂತದಲ್ಲಿದೆ. ಒಂದರ ಹಿಂದೆ ಒಂದರಂತೆ ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುವ ವಾಟ್ಸ್​ಆ್ಯಪ್​ನಲ್ಲಿ ಕೆಲವೊಂದು ಟ್ರಿಕ್​ಗಳಿವೆ (Tricks). ಈ ಆಯ್ಕೆಯನ್ನು ಸ್ವತಃ ವಾಟ್ಸ್​ಆ್ಯಪ್ ನೀಡಿದೆ. ಆದರೆ, ಅನೇಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿ:

ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಎಂದಾದರೆ, ಆ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ. ಬ್ರೌಸರ್ ಆ್ಯಪ್‌ನ (ಉದಾ. ಕ್ರೋಮ್) ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಿ. ಇಷ್ಟಾಗಿ ಎಂಟರ್ ಕೊಟ್ಟ ನಂತರ ಅದು ನೇರವಾಗಿ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.

WhatsApp New Feature: ಇನ್ನು ಒಂದೇ ವಾಟ್ಸ್​ಆ್ಯಪ್ ಖಾತೆ ನಾಲ್ಕು ಫೋನ್​ಗಳಲ್ಲಿ ಬಳಸಬಹುದು!

ಇದನ್ನೂ ಓದಿ
Tecno Spark 10 4G: ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್​ಫೋನ್: ಇದು ಬಜೆಟ್ ಬೆಲೆಯ ಬಂಪರ್ ಫೋನ್
Mobile Blast: ಮನಕಲಕುವ ಘಟನೆ: ರೆಡ್ಮಿ ಸ್ಮಾರ್ಟ್​ಫೋನ್​ ಸ್ಪೋಟಗೊಂಡು 8 ವರ್ಷದ ಬಾಲಕಿ ದುರ್ಮರಣ: ಎಚ್ಚರ ವಹಿಸಿ
Vivo X90 Pro: 120W ಫಾಸ್ಟ್ ಚಾರ್ಜರ್, ಅದ್ಭುತ ಕ್ಯಾಮೆರಾ: ಸದ್ದಿಲ್ಲದೆ ವಿವೋದಿಂದ ಎರಡು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Vivo Y78+ 5G: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೊ Y78+ 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?, ಬೆಲೆ ಎಷ್ಟು?

ಹೈ-ಕ್ವಾಲಿಟಿಯಲ್ಲಿ ಫೋಟೋ ಕಳುಹಿಸಿ:

ವಾಟ್ಸ್​ಆ್ಯಪ್​ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ತನ್ನ ನೈಜ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುತ್ತದೆ. ಇದಕ್ಕಕಾಗಿ ಸೆಟ್ಟಿಂಗ್​ನಲ್ಲಿ ಒಂದು ಆಯ್ಕೆ ಇದೆ. ಸೆಟ್ಟಿಂಗ್ಸ್ ವಿಭಾಗಕ್ಕೆ ತೆರಳಿ ಅಲ್ಲಿರುವ ಸ್ಟೋರೇಜ್ ಮತ್ತು ಡಾಟಾ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಫೋಟೋ ಅಪ್ಲೋಡ್ ಕ್ವಾಲಿಟಿ ಎಂದು ಬರೆದಿರುವುದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಹಾಗೂ ಬೆಸ್ಟ್ ಕ್ವಾಲಿಟಿ ಆಯ್ಕೆ ಮಾಡಿಕೊಂಡರೆ ನೀವು ಕಳುಹಿಸುವ ಫೋಟೋ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ.

ಆನ್​ಲೈನ್​ನಲ್ಲಿದ್ದರೂ ಕಾಣದಂತೆ ಮರೆ ಮಾಡಬಹುದು:

ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಕಾಣದಂತೆ ಹೈಡ್ ಮಾಡಬಹುದು. ಇಷ್ಟೇ ಅಲ್ಲದೆ ನಿಮ್ಮ ಪ್ರೊಫೈಲ್ ಫೋಟೋವನ್ನು, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ಹಿಂದೆ ಇದರಲ್ಲಿ ನೋಬಡಿ (Nobody), ಮೈ ಕಾಂಟ್ಯಾಕ್ಟ್ಸ್ (My Contacts), ಎವರಿಒನ್ (Everyone) ಎಂಬ ಆಯ್ಕೆ ಮಾತ್ರ ನೀಡಲಾಗಿತ್ತು. ಇತ್ತೀಚೆಗಷ್ಟೆ ಪರಿಚಯಿಸಿದ ಹೊಸ ಫೀಚರ್​ನಲ್ಲಿ ‘ಮೈ ಕಾಂಟ್ಯಾಕ್ಸ್ಟ್​​ ಎಕ್ಸೆಪ್ಟ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ ಡಿಪಿ, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ನೋಡುವಂತೆ ಮಾಡಬಹುದು. ಸೆಟ್ಟಿಂಗ್​​ಗ ಹೋಗಿ ಎಕೌಂಟ್-ಪ್ರೈವಸಿ ಮೂಲಕ ಈ ಆಯ್ಕೆಯನ್ನು ನೀವು ಗಮನಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ