ಮೊಬೈಲ್ ಮಾರುಕಟ್ಟೆಗೆ ಇಂದು ನಾನಾ ಬಗೆಯ ವೈಶಿಷ್ಟ್ಯವುಳ್ಳ ಸ್ಮಾರ್ಟ್ಫೋನ್ಗಳು (Smartphone) ಬರುತ್ತಿವೆ. ಮುಂಭಾಗದಲ್ಲಿ ಮಾತ್ರವಲ್ಲದೆ ಫೋನಿನ ಹಿಂಭಾಗದಲ್ಲೂ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿವೆ. ಇದಕ್ಕೆ ತಕ್ಕಂತೆ ಅದರಲ್ಲಿನ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಸಾಕಷ್ಟು ಅಪ್‌ಡೇಟ್‌ಗಳಾಗಿದೆ. ಪ್ರತಿ ಆಂಡ್ರಾಯ್ಡ್- ಐಒಎಸ್‌ನಲ್ಲಿಯೂ (Android – iOS) ಏನಾದರೊಂದು ಹೊಸ ಫೀಚರ್ ಇದ್ದೆ ಇರುತ್ತದೆ. ಆ ಪೈಕಿ ಮಲ್ಟಿಟಾಸ್ಕ್ ಕೆಲಸ ನಿರ್ವಹಿಸಲು ಸ್ಪ್ಲಿಟ್ ಸ್ಕ್ರೀನ್ ಮೋಡ್ ಹೆಚ್ಚು ಗಮನಸೆಳೆದಿದೆ. ಕೆಲವರು ಬಳಸುತ್ತಿದ್ದಾರೆ ಕೂಡ. ಈ ವಿಶೇಷ ಸೌಲಭ್ಯದಲ್ಲಿ ಬಳಕೆದಾರರು ಏಕಕಾಲದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಎರಡು ಆ್ಯಪ್ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಾದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ (Split Screen Mode) ಮೋಡ್ ಬಳಕೆ ಮಾಡುವುದು ಹೇಗೆ ಎಂಬ ಟ್ರಿಕ್ ಇಲ್ಲಿದೆ ಓದಿ?.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಫೀಚರ್‌ಗಳಲ್ಲೊಂದಾದ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಬಳಸಲು ಈ ಫೀಚರ್ ಅನುಮತಿಸುತ್ತದೆ. ಉದಾಹರಣೆಗೆ-ಏಕಕಾಲದಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ವೀಕ್ಷಿಸಬಹುದು ಮತ್ತು ಸ್ನೇಹಿತರೊಂದಿಗೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಕೂಡ ಮಾಡಬಹುದಾಗಿದೆ.
Tech Tips: ವಾಟ್ಸ್ಆ್ಯಪ್ನಲ್ಲಿ ನಂಬರ್ ಬದಲಾಯಿಸುವಾಗ ಚಾಟ್ ಡಿಲೀಟ್ ಆಗದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಸ್ಪ್ಲಿಟ್ ಸ್ಕ್ರೀನ್ ಮೋಡ್ ಸೆಟ್ ಮಾಡಲು ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಮೇನ್ ಸ್ಕ್ರೀನ್/ಹೋಮ್ ಸ್ಕ್ರೀನ್ ಕೆಳಗಿನ ಎಡ ಭಾಗದಲ್ಲಿನ ರೀಸೆಂಟ್ ಅಪ್ಲಿಕೇಶನ್‌ಗಳ ಬಟನ್ ಟ್ಯಾಪ್ ಮಾಡಿ. (ಮಧ್ಯ ಬಟನ್ ಎಡ ಭಾಗದ ಬಟನ್). ಇತ್ತೀಚಿಗೆ ನೀವು ಬಳಕೆ ಮಾಡಿದ/ತೆರೆದ ಎಲ್ಲಾ ಅಪ್ಲಿಕೇಶನ್‌ಗಳ ಕ್ಯಾಸ್ಕೇಡಿಂಗ್ ಮೆನು ಕಾಣಿಸುತ್ತದೆ.
ಆಗ, ಬಲ ಭಾಗದ ಮೇಲ್ಭಾಗದಲ್ಲಿ ಕಾಣುವ ಮೂರು ಡಾಟ್ ಬಟನ್ ಇತ್ತಿರಿ, ನಂತರ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ ಅಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್ ಆಯ್ಕೆ ಆನ್ ಮಾಡಿ. ಆನಂತರ, ನೀವು ಒಂದೇ ವೇಳೆ ಎರಡು ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.
ಇನ್ನೂ ಮಧ್ಯ ಬಟನ್ ಎಡ ಭಾಗದ ಬಟನ್ ಅನ್ನು ಟ್ಯಾಪ್ ಮಾಡಿದಾಗ ಇತ್ತೀಚಿಗೆ ನೀವು ತೆರೆದ ಆ್ಯಪ್ಸ್ ಲಿಸ್ಟ್ ಕಾಣಿಸುತ್ತವೆ. ಅವುಗಳಲ್ಲಿ ಯಾವ ಆಪ್ ಸ್ಪ್ಲಿಟ್ ಸ್ಕ್ರೀನ್ ಮೋಡ್ ಮಾಡಲು ಬಯಸುತ್ತಿರೊ ಆ ಆ್ಯಪ್ ಅನ್ನು ಟ್ಯಾಪ್ ಮಾಡಿ ಹಿಡಿಯಿರಿ. ಆಗ ನೀವು ಟ್ಯಾಪ್ ಮಾಡಿರುವ ಆ್ಯಪ್ ನಿಮಗೆ ಸ್ಪ್ಲಿಟ್ ಸ್ಕ್ರೀನ್ ವ್ಯೂ ಕಾಣಿಸುತ್ತದೆ. ಈ ಆಯ್ಕೆ ಹೆಚ್ಚಿನ ಸ್ಮಾರ್ಟ್ಫೋನ್ಗಳನ್ನು ಕಾಣಸಿಗುತ್ತದೆ. ನಿಮ್ಮ ಮೊಬೈಲ್ನಲ್ಲಿ ಈ ಆಯ್ಕೆ ಇಲ್ಲ ಎಂದಾದಲ್ಲಿ ಮೆನುವಿಗೆ ಹೋಗಿ ಸೆಟ್ಟಿಂಗ್ಸ್ ಆಯ್ಕೆ ಮಾಡಿದರೆ ಅದರಲ್ಲಿ ಸ್ಪ್ಲಿಟ್ ಸ್ಕ್ರೀನ್ ಸರ್ಚ್ ಮಾಡಿದರೆ ಸಿಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ