ಇಂದಿನ ವೇಗದ ಜಗತ್ತಿನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ. ಕೊರೊನಾ ವೈರಸ್ (Corona Virus) ಬಂದ ಮೇಲಂತು ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದ್ದು ಈ ಮೂಲಕ ಯುಪಿಐ (UPI) ಅಥವಾ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಹೆಚ್ಚು ಬಳಕೆಯಾಗುತ್ತಿದೆ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್ ಪಾವತಿಯನ್ನು ಸ್ವೀಕರಿಸುತ್ತಾರೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ. ಆದರೆ ಯುಪಿಐನಲ್ಲಿ ದಿನಕ್ಕೆ ಎಷ್ಟು ಹಣ ಕಳುಹಿಸಬಹುದು ಎಂಬುದು ನಿಮಗೆ ಗೊತ್ತೇ?.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಇದು ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಲು ಈ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಯುಪಿಐ ವಹಿವಾಟು ಮಿತಿಯನ್ನು ಕಾಲಕಾಲಕ್ಕೆ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ಯುಪಿಐ ಬಳಸಿ ಮಾಡುವ ವಹಿವಾಟು ಮಿತಿ ದಿನಕ್ಕೆ 1 ಲಕ್ಷ ರೂ. ಆಗಿದೆ. ಆದರೆ, ಇದು ಆಯ್ದ ಬ್ಯಾಂಕ್ಗಳಿಗೆ ಮಾತ್ರ. ನಿಮ್ಮದು ಯಾವ ಬ್ಯಾಂಕ್ ಎಂಬ ಆಧಾರದ ಮೇಲೆ ಎಷ್ಟು ಹಣ ಕಳುಹಿಸಬಹುದು ಎಂಬ ನಿಯಮವಿದೆ.
Mobile Data: ಪಾಕಿಸ್ತಾನ, ಇಂಗ್ಲೆಂಡ್ನಲ್ಲಿ 1GB ಡೇಟಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ: ಎಷ್ಟು ಗೊತ್ತೇ?
ಇನ್ನು ಭೀಮ್ ಯುಪಿಐ ವಹಿವಾಟು ಮಿತಿ ಪ್ರತಿ ವಹಿವಾಟಿಗೆ 40 ಸಾವಿರ ರೂ. ಆಗಿದೆ. ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ಲಭ್ಯವಿರುತ್ತದೆ. ಅಂತೆಯೆ ವ್ಯಾಪಾರಿಗಳ ನಡೆಸುವ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ. ಎಲ್ಲಾದರು ನೀವು ಪಾವತಿ ಮಾಡಿದ ಸಂದರ್ಭದಲ್ಲಿ ಹಣ ನಿಮ್ಮ ಖಾತೆಯಿಂದ ಕಡಿತವಾಗಿ ವರ್ಗಾವಣೆ ಮಾಡಿದ ಖಾತೆಗೆ ಜಮೆ ಆಗದಿದ್ದರೆ ಆ ಹಣವು ಮೂರು ದಿನಗಳ ಒಳಗೆ ರಿಫಂಡ್ ಆಗುತ್ತದೆ. ಅದು ರಿಫಂಡ್ ಆಗದಿದ್ದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕ ಮಾಡಬಹುದು.
ಈಗಾಗಲೇ ಹೇಳಿರುವಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಯುಪಿಐ ವಹಿವಾಟು ಮಿತಿ ವಿಭಿನ್ನವಾಗಿದೆ. ಈ ಕುರಿತ ಪಟ್ಟಿ ಇಲ್ಲಿದೆ.
ಐಸಿಐಸಿಐ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ. ಮಿತಿಯಿದೆ. ಐಸಿಐಸಿಐ ಬ್ಯಾಂಕಿನ ಖಾತೆದಾರರು 24 ಗಂಟೆಗಳಲ್ಲಿ 20 ಬಾರಿ ಹಣ ವರ್ಗಾವಣೆ ಮಾಡಬಹುದು.
ಎಸ್‌ಬಿಐ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ. ಮಿತಿ, 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟು ಮಾಡಬಹುದು.
ಎಚ್‌ಡಿಎಫ್‌ಸಿ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ. ಮಿತಿ.
ಬ್ಯಾಂಕ್ ಆಫ್ ಇಂಡಿಯಾ: ಪ್ರತಿ ವಹಿವಾಟಿಗೆ 10 ಸಾವಿರ ರೂ. ಮಿತಿ.
ಸೆಂಟ್ರಲ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ. ಮಿತಿ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ. ಮಿತಿ.
ಕೊಟಕ್ ಮಹೀಂದ್ರಾ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ ಮಿತಿ. ದಿನಕ್ಕೆ 2 ವಹಿವಾಟು ಮಾಡಬಹುದು.
ಕೆನರಾ ಬ್ಯಾಂಕ್ 1 ಲಕ್ಷ ರೂ.
ಆಕ್ಸಿಸ್ ಬ್ಯಾಂಕ್ 1 ಲಕ್ಷ ರೂ.
Tech Tips: ಗೂಗಲ್ನಲ್ಲಿ ನಿಮ್ಮ ಫೋಟೋ ಕಾಣಿಸಬೇಕೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
ಕಾರ್ಪೊರೇಶನ್ ಬ್ಯಾಂಕ್ 50 ಸಾವಿರ ರೂ.
ಆಂಧ್ರ ಬ್ಯಾಂಕ್ 1 ಲಕ್ಷ ರೂ.
ಸಿಟಿ ಬ್ಯಾಂಕ್ 1 ಲಕ್ಷ ರೂ.
ಬ್ಯಾಂಕ್ ಆಫ್ ಬರೋಡಾ 25 ಸಾವಿರ ರೂ.
ಬ್ಯಾಂಕ್ ಆಫ್ ಮಹಾರಾಷ್ಟ್ರ 1 ಲಕ್ಷ ರೂ.
ಸಿಟಿ ಯೂನಿಯನ್ ಬ್ಯಾಂಕ್ 1 ಲಕ್ಷ ರೂ.
ಗೂಗಲ್ ಪೇ, ಫೋನ್ ಪೇಗಳಂತೆ ಪೇಟಿಎಂನಲ್ಲಿ ಕೂಡ ಪ್ರತಿ ವಹಿವಾಟಿನಲ್ಲಿ 1 ಲಕ್ಷ ಹಣ ವರ್ಗಾವಣೆ ಮಾಡುವ ಆಯ್ಕೆ ನೀಡಲಾಗಿದೆ. ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಲು ಸಾಧ್ಯವಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ