Tech Tips: ನಿಮಗೆ ಇನ್ನುಕೂಡ ಸ್ಪ್ಯಾಮ್ ಕಾಲ್, ನಕಲಿ ಸಂದೇಶಗಳು ಬರುತ್ತಿವೆಯೇ?: ಜಸ್ಟ್ ಹೀಗೆ ಮಾಡಿ

|

Updated on: Jan 22, 2024 | 1:29 PM

TRAI DND 3.0: ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಟ್ರಾಯ್​ನ ಅಪ್ಲಿಕೇಶನ್ ಅನ್ನು ಇನ್​​ಸ್ಟಾಲ್ ಮಾಡಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯಗೊಳಿಸಬೇಕು. ನಂತರ ನೀವು ಯಾವುದೇ ಸ್ಪ್ಯಾಮ್ ಕರೆಗಳು ಮತ್ತು ಎಸ್​ಎಮ್​ಎಸ್ ಪಡೆಯುವುದಿಲ್ಲ.

Tech Tips: ನಿಮಗೆ ಇನ್ನುಕೂಡ ಸ್ಪ್ಯಾಮ್ ಕಾಲ್, ನಕಲಿ ಸಂದೇಶಗಳು ಬರುತ್ತಿವೆಯೇ?: ಜಸ್ಟ್ ಹೀಗೆ ಮಾಡಿ
Spam Call TRAI
Follow us on

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೈಬರ್ ವಂಚನೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಅದು ಕೂಡ ಪ್ರಯೋಜನವಾಗುತ್ತಿಲ್ಲ. ಟ್ರಾಯ್​ನ ಕಟ್ಟುನಿಟ್ಟಿನ ಕ್ರಮದ ಹೊರತಾಗಿಯೂ, ಸ್ಪ್ಯಾಮ್ ಕರೆಗಳು ಮತ್ತು ನಕಲಿ SMS ಗಳಂತಹ ಹಗರಣಗಳು ಭಾರತದಲ್ಲಿ ಹೆಚ್ಚುತ್ತಿವೆ. ಆದರೆ ನೀವು ಜಸ್ಟ್ ಹೀಗೆ ಮಾಡಿದರೆ ಸ್ಪ್ಯಾಮ್ ಕರೆಗಳು ಮತ್ತು ನಕಲಿ SMS ನಂತಹ ಯಾವುದೇ ಹಗರಣಗಳಿಂದ ಪಾರಾಗಬಹುದು. ಅದಕ್ಕಾಗಿ ನೀವು ಈ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಬೇಕು.

ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಟ್ರಾಯ್​ನ ಅಪ್ಲಿಕೇಶನ್ ಅನ್ನು ಇನ್​​ಸ್ಟಾಲ್ ಮಾಡಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯಗೊಳಿಸಬೇಕು. ನಂತರ ನೀವು ಯಾವುದೇ ಸ್ಪ್ಯಾಮ್ ಕರೆಗಳು ಮತ್ತು ಎಸ್​ಎಮ್​ಎಸ್ ಪಡೆಯುವುದಿಲ್ಲ.

OnePlus 12 Series: ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಒನ್​ಪ್ಲಸ್​ನ ಎರಡು ಬಲಿಷ್ಠ ಸ್ಮಾರ್ಟ್​ಫೋನ್ಸ್: ಯಾವುದು ನೋಡಿ

ಇದನ್ನೂ ಓದಿ
ಬಿಡುಗಡೆಗೆ 1 ದಿನ ಇರುವಾಗ ಲೀಕ್ ಆಯಿತು ಒನ್​ಪ್ಲಸ್ 12 ಫೋನಿನ ಎಲ್ಲ ಫೀಚರ್ಸ್
ಪಾಸ್​ವರ್ಡ್​ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ
ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವುದು ಹೇಗೆ?
ನಿಮ್ಮ ಗರ್ಲ್ ಫ್ರೆಂಡ್​ಗೆ ಗಿಫ್ಟ್ ಬೇಕಿದ್ದರೆ ಈ ಸ್ಮಾರ್ಟ್ ರಿಂಗ್ ಕೊಡಿ

TRAI DND 3.0 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಇದು ಅನಗತ್ಯ ಕರೆಗಳು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುತ್ತದೆ. ಈ ಅಪ್ಲಿಕೇಶನ್ ಅನ್ನು TRAI (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಅಭಿವೃದ್ಧಿಪಡಿಸಿದೆ. ನೀವು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್​ ಸ್ಟೋರ್​ನಿಂದ ಇದನ್ನು ಡೌನ್​​ಲೋಡ್ ಮಾಡಬಹುದು.

TRAI DND 3.0 ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು?

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್​ ಸ್ಟೋರ್​ನಿಂದ TRAI DND 3.0 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್​ಸ್ಟಾಲ್ ಮಾಡಿ.
  • ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ನಮೂದಿಸಿ.
  • ಸೈನ್ ಇನ್ ಆಗಿ.
  • ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ, ನಿಮ್ಮ ಸಂಖ್ಯೆಯನ್ನು DND ಪಟ್ಟಿಗೆ ಸೇರಿಸಲಾಗುತ್ತದೆ.
  • ಈಗ ನಿಮ್ಮ ಸಂಖ್ಯೆಗೆ ಅನಗತ್ಯ ಕರೆಗಳು ಮತ್ತು ಸಂದೇಶಗಳನ್ನು ನಿರ್ಬಂಧಿಸಲಾಗುತ್ತದೆ.
  • ನೀವು ನಿರ್ದಿಷ್ಟ ಬಿಸಿನೆಸ್ ಕರೆಗಳು ಮತ್ತು ಸಂದೇಶಗಳನ್ನು ಮಾತ್ರ ಸ್ವೀಕರಿಸಲು ಬಯಸುತ್ತೀರಾ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಬಹುದು.
  • ಯಾವುದೇ ಅನಗತ್ಯ ಕರೆಗಳು ಮತ್ತು ಸಂದೇಶಗಳ ಬಗ್ಗೆ ನೀವು ದೂರು ಕೂಡ ಸಲ್ಲಿಸಬಹುದು.