ವಾಟ್ಸ್ಆ್ಯಪ್ ಅನ್ನು ಮೊದಲು ಚಾಟ್ ಮಾಡಲು ಬಳಸಲಾಗುತ್ತಿತ್ತು. ಆದರೆ, ಕಾಲಾನಂತರದಲ್ಲಿ ಇದರಲ್ಲಿ ಅನೇಕ ನವೀಕರಣಗಳನ್ನು ಬಿಡುಗಡೆ ಮಾಡಲಾಯಿತು. ಎಷ್ಟರ ಮಟ್ಟಿಗೆ ಎಂದರೆ ವಾಟ್ಸ್ಆ್ಯಪ್ ಮೂಲಕವೂ ಟ್ಯಾಕ್ಸಿ ಬುಕ್ ಮಾಡಬಹುದು. ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಲು ಊಬರ್ ನಿಮಗೆ ಅನುಮತಿಸುತ್ತದೆ. ಇದರ ವಿಧಾನವು ಸಾಕಷ್ಟು ಸುಲಭವಾಗಿದೆ. ಆದರೆ, ಅನೇಕರಿಗೆ ಈ ವಿಚಾರ ತಿಳಿದಿಲ್ಲ. ಸ್ಮಾರ್ಟ್ಫೋನ್ನಲ್ಲಿ ಸ್ಟೋರೇಜ್ ಅಥವಾ ಇನ್ಯಾವುದೇ ಕಾರಣದಿಂದ ಅನೇಕ ಅಪ್ಲಿಕೇಶನ್‌ಗಳನ್ನು ಇಡುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಆಯ್ಕೆ ನಿಮಗೆ ತುಂಬಾ ಪ್ರಯೋಜನವಾಗಲಿದೆ.
ಊಬರ್ ಆ್ಯಪ್ ಅವಶ್ಯಕತೆಯಿಲ್ಲದೆಯೇ, ವಾಟ್ಸ್ಆ್ಯಪ್ ಮೂಲಕ ಚಾಟ್ ಇಂಟರ್ಫೇಸ್ನಲ್ಲಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ ರೈಡ್ಗಳನ್ನು ಬುಕ್ ಮಾಡಬಹುದು ಮತ್ತು ಟ್ರಿಪ್ ರಸೀದಿಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಥವಾ ಊಬರ್ ವಾಟ್ಸ್ಆ್ಯಪ್ ಚಾಟ್ ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಚಾಟ್‌ಬಾಟ್ ನಂತರ ಪಿಕಪ್ ಮತ್ತು ಡ್ರಾಪ್ ಆಫ್ ಸ್ಥಳಗಳನ್ನು ನೀಡಲು ಬಳಕೆದಾರರನ್ನು ಕೇಳುತ್ತದೆ. ಅವರು ಬುಕ್ ಮಾಡಲು ಬಯಸುವ ರೀತಿಯ ರೈಡ್ ಅನ್ನು ಆಯ್ಕೆ ಮಾಡುತ್ತದೆ.
ಇಲ್ಲಿ ಚಾಟ್‌ಬಾಟ್ ನಿಮಗೆ ಮುಂಗಡ ದರದ ಮಾಹಿತಿಯನ್ನು ನೀಡುತ್ತದೆ ಮತ್ತು ಚಾಲಕನ ಆಗಮನದ ನಿರೀಕ್ಷಿತ ಸಮಯವನ್ನು ಸಹ ನೀಡುತ್ತದೆ. ಊಬರ್ನಲ್ಲಿ ಕೇವಲ ಒಂದು ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಿದ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆಯು ಲಭ್ಯವಿದೆ. ಈ ಟೆಕ್ನಾಲಜಿಯಿಂದಾಗಿ ಪ್ರಯಾಣಿಕರು ಊಬರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಥವಾ ಬಳಸುವ ಅಗತ್ಯವಿಲ್ಲ.
ಇದನ್ನೂ ಓದಿ: ಬಜೆಟ್ 2025 ತಯಾರಿ ಪ್ರಾರಂಭ: ಮೇಕ್ ಇನ್ ಇಂಡಿಯಾ ಮೊಬೈಲ್ ಫೋನ್‌ಗಳು ಅಗ್ಗವಾಗಲಿದೆಯೇ?
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ