Tech Tips: ನಿಮ್ಮ ಮೊಬೈಲ್ ಅನ್ನು ಫುಲ್ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಗೊತ್ತೇ?

ನಿಮ್ಮ ಸ್ಮಾರ್ಟ್​ಫೋನ್ ಯಾವುವು?, ಅದರ ಬ್ಯಾಟರಿ ಎಷ್ಟು ಎಂಬುದರ ಮೇಲೆ ವಿದ್ಯುತ್ ಬಳಕೆ ಬದಲಾಗುತ್ತದೆ. ಆದರೆ ಫಲಿತಾಂಶಗಳು ಹೆಚ್ಚು ಭಿನ್ನವಾಗಿರುವುದಿಲ್ಲ. ಚಾರ್ಜಿಂಗ್‌ನಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕಾದರೆ, ನೀವು ಎಷ್ಟು ಬಾರಿ, ಎಷ್ಟು ಸಮಯ ಫೋನ್ ಚಾರ್ಜ್ ಮಾಡುತ್ತೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Tech Tips: ನಿಮ್ಮ ಮೊಬೈಲ್ ಅನ್ನು ಫುಲ್ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಗೊತ್ತೇ?
Tech Tips
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jan 05, 2025 | 12:45 PM

ಸ್ಮಾರ್ಟ್​ಫೋನ್ ಇಂದು ನಮ್ಮ ಜೀವನದ ಪ್ರಮುಖ ಅಂಗವಾಗಿದೆ. ದಿನದ ಅನೇಕ ಕೆಲಸಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಲಾಗುತ್ತದೆ. ಫೋನ್ ಇಲ್ಲದೆ ಜೀವನವೇ ಅಪೂರ್ಣ ಎಂಬ ಸ್ಥಿತಿ ಉಂಟಾಗಿದೆ. ಆದರೆ ಈ ಫೋನ್‌ ಕಾರ್ಯನಿರ್ವಹಿಸಲು ಬ್ಯಾಟರಿ ಚಾರ್ಜ್ ಮಾಡಬೇಕು. ಬ್ಯಾಟರಿ ಚಾರ್ಜ್ ಆಗಲು ವಿದ್ಯುತ್ ಬೇಕೇಬೇಕು. ಸ್ಮಾರ್ಟ್​ಫೋನ್ ಚಾರ್ಜ್ ಮಾಡದಿದ್ದರೆ ಅದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಸಾಮಾನ್ಯವಾಗಿ ಎಲ್ಲರು ಚಾರ್ಜರ್ ಮೂಲಕ ಬ್ಯಾಟರಿ ಫುಲ್ ಮಾಡುತ್ತಾರೆ. ಆದರೆ, ನೀವು ಎಂದಾದರೂ ಸ್ಮಾರ್ಟ್​ಫೋನ್ ಒಮ್ಮೆ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ಯೋಚಿಸಿದ್ದೀರಾ?

ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ವೆಚ್ಚವಾಗುತ್ತದೆ?. ಫೋನ್ ಅನ್ನು ಚಾರ್ಜ್ ಮಾಡಿದಾಗ ಎಷ್ಟು ಹಣ ಖರ್ಚು ಆಗುತ್ತದೆ?. ಇದು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ನಿಮ್ಮ ಫೋನ್ ಅನ್ನು ಪ್ರತಿದಿನ ಚಾರ್ಜ್ ಮಾಡಿದಾಗ ಇದರಿಂದ ಇಡೀ ತಿಂಗಳು ಅಥವಾ ವರ್ಷದಲ್ಲಿ ಎಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ಮೊಬೈಲ್ ಚಾರ್ಜಿಂಗ್‌ನಿಂದ ಎಷ್ಟು ವಿದ್ಯುತ್ ಖರ್ಚಾಗುತ್ತದೆ?

ನಿಮ್ಮ ಸ್ಮಾರ್ಟ್​ಫೋನ್ ಯಾವುವು?, ಅದರ ಬ್ಯಾಟರಿ ಎಷ್ಟು ಎಂಬುದರ ಮೇಲೆ ವಿದ್ಯುತ್ ಬಳಕೆ ಬದಲಾಗುತ್ತದೆ. ಆದರೆ ಫಲಿತಾಂಶಗಳು ಹೆಚ್ಚು ಭಿನ್ನವಾಗಿರುವುದಿಲ್ಲ. ಚಾರ್ಜಿಂಗ್‌ನಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕಾದರೆ, ನೀವು ಎಷ್ಟು ಬಾರಿ, ಎಷ್ಟು ಸಮಯ ಫೋನ್ ಚಾರ್ಜ್ ಮಾಡುತ್ತೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರಾಸರಿ ಗಮನಿಸಿದರೆ ಪ್ರತಿಯೊಬ್ಬರೂ ತಮ್ಮ ಫೋನ್ ಅನ್ನು ದಿನಕ್ಕೆ 3 ಗಂಟೆಗಳ ಕಾಲ ಚಾರ್ಜ್ ಮಾಡುತ್ತಾರೆ. ಫಾಸ್ಟ್ ಚಾರ್ಜರ್ ನಿಂದ ಚಾರ್ಜ್ ಮಾಡುವವರು ಕಡಿಮೆ ಸಮಯದಲ್ಲಿ ಅಷ್ಟೇ ಪ್ರಮಾಣದ ವಿದ್ಯುತ್ ಬಳಸುತ್ತಾರೆ. ಇಷ್ಟು ದೀರ್ಘ ಕಾಲ ಫೋನ್ ಚಾರ್ಜ್ ಮಾಡುವುದರಿಂದ 0.15 KWH ವಿದ್ಯುತ್ ಖರ್ಚಾಗುತ್ತದೆ. ಇದಲ್ಲದೆ, ಹೆಚ್ಚಿನ mAh ಬ್ಯಾಟರಿ ಹೊಂದಿರುವ ಫೋನ್ ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಇದು 0.115 KWH ವರೆಗೆ ಇರುತ್ತದೆ.

ಇದನ್ನೂ ಓದಿ: ಬಜೆಟ್ 2025 ತಯಾರಿ ಪ್ರಾರಂಭ: ಮೇಕ್ ಇನ್ ಇಂಡಿಯಾ ಮೊಬೈಲ್ ಫೋನ್‌ಗಳು ಅಗ್ಗವಾಗಲಿದೆಯೇ?

ಉದಾಹರಣೆಗೆ, ಐಫೋನ್ ಅಡಾಪ್ಟರ್ 5W ಆಗಿದೆ, ನೀವು ಅದನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಇದು 0.005KWh ವಿದ್ಯುತ್ ಅನ್ನು ಬಳಸುತ್ತದೆ. ಅದೇ 3 ಗಂಟೆಗಳ ಕಾಲ ಬಳಸಿದರೆ 0.015 KWH ವಿದ್ಯುತ್ ಅನ್ನು ಬಳಸುತ್ತದೆ. ಯೂನಿಟ್ ವಾರು ನೋಡಿದರೆ ಒಂದು ವರ್ಷದಲ್ಲಿ ಸುಮಾರು 5 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ಕೇವಲ 5 ಯೂನಿಟ್ ವಿದ್ಯುತ್ ಕೇವಲ ಫೋನ್ ಚಾರ್ಜ್​ಗೆ ಖರ್ಚಾದಂತಾಯಿತು. ಅತ್ಯಂತ ಶಕ್ತಿಶಾಲಿ ಬ್ಯಾಟರಿಗಳಾದರೆ ಹೆಚ್ಚು ಸಮಯ ಫೋನ್ ಚಾರ್ಜ್ ಮಾಡಬೇಕಾಗುತ್ತದೆ. ಇದರಿಂದಾಗಿ ಒಮ್ಮೆಲೇ ವಿದ್ಯುತ್ ಖರ್ಚಾಗುತ್ತದೆ. 3000 ರಿಂದ 5000 MAH ಬ್ಯಾಟರಿ ಹೊಂದಿರುವ ಫೋನ್ ಆದರೆ ಇದು ವರ್ಷಕ್ಕೆ 4-6 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.

ನಿಮ್ಮ ರಾಜ್ಯದ ಪ್ರತಿ ಯೂನಿಟ್ ವಿದ್ಯುತ್ ದರದಿಂದ ಒಂದು ವರ್ಷದಲ್ಲಿ ಫೋನ್ ಶುಲ್ಕಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂದು ನೀವು ಅಂದಾಜು ಮಾಡಬಹುದು. ಉದಾಹರಣೆಗೆ ಒಂದು ಯೂನಿಟ್ ವಿದ್ಯುತ್ ಶುಲ್ಕ 8 ರೂಪಾಯಿಗಳಾಗಿದ್ದರೆ, ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ವರ್ಷಕ್ಕೆ 40 ರೂಪಾಯಿ ವೆಚ್ಚ ಮಾಡುತ್ತೀರಿ. ಇಡೀ ತಿಂಗಳು ಲೆಕ್ಕ ಹಾಕಿದರೆ ಈ ವೆಚ್ಚ ಸುಮಾರು 3.5 ರೂಪಾಯಿ ಆಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು