ಬಜೆಟ್ 2025 ತಯಾರಿ ಪ್ರಾರಂಭ: ಮೇಕ್ ಇನ್ ಇಂಡಿಯಾ ಮೊಬೈಲ್ ಫೋನ್‌ಗಳು ಅಗ್ಗವಾಗಲಿದೆಯೇ?
2025-26ನೇ ಹಣಕಾಸು ವರ್ಷದ ಸಾಮಾನ್ಯ ಬಜೆಟ್‌ಗೆ ದೇಶದಲ್ಲಿ ಸಿದ್ಧತೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶದೊಳಗೆ ತಯಾರಾದ ಮೊಬೈಲ್ ಫೋನ್‌ಗಳು ಅಗ್ಗವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಫೋನ್ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳು ಇತ್ತೀಚೆಗೆ ಹಣಕಾಸು ಸಚಿವಾಲಯಕ್ಕೆ ಪ್ರಸ್ತುತಿಯನ್ನು ನೀಡಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ.
ಈಗ ಭಾರತದಲ್ಲಿ ಮಾರಾಟವಾಗುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಪಿಎಲ್‌ಐ ಯೋಜನೆಯು ದೇಶದೊಳಗೆ ಮೊಬೈಲ್ ಉತ್ಪಾದನೆಯನ್ನು ಉತ್ತೇಜಿಸಲು ಸಾಕಷ್ಟು ಸಹಾಯ ಮಾಡಿದೆ. ಭಾರತದಿಂದ ಆ್ಯಪಲ್ ಐಫೋನ್ ರಫ್ತು ಕೂಡ ಹಲವಾರು ಪಟ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ 2025-26ನೇ ಹಣಕಾಸು ವರ್ಷದ ಸಾಮಾನ್ಯ ಬಜೆಟ್‌ಗೆ ದೇಶದಲ್ಲಿ ಸಿದ್ಧತೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶದೊಳಗೆ ತಯಾರಾದ ಮೊಬೈಲ್ ಫೋನ್‌ಗಳು ಅಗ್ಗವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಫೋನ್ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳು ಇತ್ತೀಚೆಗೆ ಹಣಕಾಸು ಸಚಿವಾಲಯಕ್ಕೆ ಪ್ರಸ್ತುತಿಯನ್ನು ನೀಡಿವೆ, ಇದರಲ್ಲಿ ಅವರು ಫೋನ್‌ಗಳಲ್ಲಿ ಬಳಸುವ ವಿವಿಧ ಭಾಗಗಳ ಆಮದು ಸುಂಕವನ್ನು ಕಡಿಮೆ ಮಾಡಲು ವಿನಂತಿಸಿದ್ದಾರೆ.
ಯಾವುದರ ಮೇಲೆ ತೆರಿಗೆ ಕಡಿತ ಇರುತ್ತದೆ?:
ಫೋನ್ ತಯಾರಕರು ಫೋನ್‌ಗಳಲ್ಲಿ ಬಳಸುವ ಮೈಕ್‌ಗಳು, ರಿಸೀವರ್‌ಗಳು, ಸ್ಪೀಕರ್‌ಗಳು ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಅಸೆಂಬ್ಲಿಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಇವುಗಳ ಮೇಲೆ ಶೇ.15 ರಷ್ಟು ತೆರಿಗೆ ಇದ್ದು, ಸರ್ಕಾರ ಅದನ್ನು ಶೇ. 10ಕ್ಕೆ ಇಳಿಸಬೇಕು ಎಂಬುದು ಉತ್ಪಾದಕರ ಆಗ್ರಹವಾಗಿದೆ. ಇದು ಮಾತ್ರವಲ್ಲದೆ, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಭಾಗಗಳನ್ನು ಸುಂಕ ಮುಕ್ತಗೊಳಿಸುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ, ಇದು ಪ್ರಸ್ತುತ ಶೇಕಡಾ 2.5 ತೆರಿಗೆಯನ್ನು ಹೊಂದಿದೆ.
ಇಟಿ ಸುದ್ದಿಯ ಪ್ರಕಾರ, ಫೋನ್ ತಯಾರಕರು ಕಡ್ಡಾಯ ಪರೀಕ್ಷೆ (ಮ್ಯಾಂಡೆಟರಿ ಟೆಸ್ಟ್) ಮತ್ತು ಪ್ರಮಾಣೀಕರಣದ ಮೇಲೆ ಸಬ್ಸಿಡಿಯನ್ನು ಒದಗಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ, ಕಾರ್ಪೊರೇಟ್ ತೆರಿಗೆಯ ಮೇಲೆ 15 ಪ್ರತಿಶತ ವಿನಾಯಿತಿ ವಿಸ್ತರಣೆ ಮತ್ತು ಘಟಕಗಳಿಗೆ ಪ್ರತ್ಯೇಕ ಕ್ಲಸ್ಟರ್‌ಗಳನ್ನು ರಚಿಸಲು ಕೋರಿದ್ದಾರೆ.
ಇದನ್ನು ಓದಿ: ಸ್ಮಾರ್ಟ್‌ಫೋನ್‌ನ ಬ್ಯಾಕ್ ಕವರ್ ಖರೀದಿಸುವ ಮೊದಲು ಇದನ್ನು ತಿಳಿದುಕೊಳ್ಳಿ
ಚೀನಾ ಮತ್ತು ವಿಯೆಟ್ನಾಂಗಿಂತ ತೆರಿಗೆ ಇನ್ನೂ ಹೆಚ್ಚಾಗಿದೆ:
ಮೊಬೈಲ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಪ್ರಮುಖ ಪಾತ್ರವಹಿಸಲು ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚೀನಾ, ವಿಯೆಟ್ನಾಂನಂತಹ ದೇಶಗಳು ಅದಕ್ಕೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ, ಮೊಬೈಲ್ ಫೋನ್‌ಗಳನ್ನು ತಯಾರಿಸಲು ಬಳಸುವ ಘಟಕಗಳ ಮೇಲಿನ ತೆರಿಗೆಯು ಇನ್ನೂ 7 ರಿಂದ 7.2 ಪ್ರತಿಶತದವರೆಗೆ ಇರುತ್ತದೆ, ಇದು ಚೀನಾ ಮತ್ತು ವಿಯೆಟ್ನಾಂಗಿಂತ ಹೆಚ್ಚಾಗಿದೆ.
ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಕೆಲವು ದಿನಗಳ ಹಿಂದೆ ಹಣಕಾಸು ಸಚಿವರೊಂದಿಗೆ ನಡೆದ ಬಜೆಟ್ ಪೂರ್ವ ಚರ್ಚೆಯಲ್ಲಿ ಈ ಎಲ್ಲಾ ಅಂಶಗಳನ್ನು ಸರ್ಕಾರದ ಮುಂದಿಟ್ಟಿದೆ. ಸರ್ಕಾರ ಈ ಬೇಡಿಕೆಗಳನ್ನು ಒಪ್ಪಿಕೊಂಡರೆ, ಭವಿಷ್ಯದಲ್ಲಿ ನಾವು ದೇಶದಲ್ಲಿ ಫೋನ್‌ಗಳನ್ನು ಸ್ವಲ್ಪ ಅಗ್ಗವಾಗಿ ಪಡೆಯಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Thu, 2 January 25