Tech Tips: ಸ್ಮಾರ್ಟ್‌ಫೋನ್‌ನ ಬ್ಯಾಕ್ ಕವರ್ ಖರೀದಿಸುವ ಮೊದಲು ಇದನ್ನು ತಿಳಿದುಕೊಳ್ಳಿ
ಇಂದು ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರು ಕೂಡ ಬ್ಯಾಕ್ ಕವರ್ ಹಾಕಿಯೇ ಇರುತ್ತಾರೆ. ಕೆಲವರು ಫೋನ್‌ಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಇದನ್ನು ಹಾಕಿದರೆ, ಇನ್ನೂ ಕೆಲವರು ಕೈಯಲ್ಲಿ ಹಿಡಿದುಕೊಳ್ಳುವಾಗ ಒಳ್ಳೆಯ ಗ್ರಿಪ್ ಸಿಗಲಿ ಎಂಬ ಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವ ಬ್ಯಾಕ್ ಕವರ್ ಉತ್ತಮವಾಗಿದೆ?.
ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಅದನ್ನು ಸುರಕ್ಷಿತವಾಗಿಡುವುದು ಮುಖ್ಯ, ಅದು ಕಡಿಮೆ ಬೆಲೆಯ ಫೋನ್ ಆಗಿರಬಹುದು ಅಥವಾ ದುಬಾರಿಯದ್ದಾಗಿರಬಹುದು. ಸ್ಮಾರ್ಟ್ಫೋನ್ ಅನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದರಲ್ಲಿ ಹಿಂಬದಿಯ ಕವರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳ ಹಿಂಬದಿಯ ಕವರ್ ಲಭ್ಯವಿದ್ದರೂ ಅದನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವ ಬ್ಯಾಕ್ ಕವರ್ ಉತ್ತಮವಾಗಿದೆ ಎಂದು ನಮಗೆ ಹೇಳುತ್ತೇವೆ.
1. ಸಿಲಿಕೋನ್ ಕವರ್‌ಗಳು
ಸಿಲಿಕೋನ್ ಕವರ್‌ಗಳು ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ. ಇದು ಸುಲಭವಾಗಿ ಸೆಟ್ ಆಗುತ್ತದೆ, ನೋಡಲು ಬ್ರೈಟ್ ಮತ್ತು ಬಲವಾಗಿರುತ್ತದೆ.
ಪ್ರಯೋಜನಗಳು:
ಕೈಯಿಂದ ಫೋನ್ ಜಾರುವುದರಿಂದ ರಕ್ಷಿಸುತ್ತದೆ.
ಫೋನ್‌ನ ಹಿಡಿತವನ್ನು ಸುಧಾರಿಸುತ್ತದೆ.
ಅಗ್ಗದ ದರದಲ್ಲಿ ಸುಲಭವಾಗಿ ದೊರೆಯುತ್ತದೆ.
ಕೊರತೆ:
ಸಮಯ ಕಳೆದಂತೆ ಕೊಳಕು ಕಾಣಲು ಪ್ರಾರಂಭಿಸುತ್ತದೆ.
ಅತಿಯಾದ ಶಾಖದಿಂದ ಹಾನಿಗೊಳಗಾಗಬಹುದು.
2. ಹಾರ್ಡ್ ಪ್ಲಾಸ್ಟಿಕ್ ಕವರ್‌ಗಳು
ಈ ಕವರ್‌ಗಳು ಹಗುರವಾದ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ಬರುತ್ತವೆ.
ಪ್ರಯೋಜನಗಳು:
ಸ್ಟೈಲಿಶ್ ಮತ್ತು ಮುದ್ರಿತ ವಿನ್ಯಾಸ.
ಫೋನ್ ಅನ್ನು ಹಗುರವಾಗಿ ಮತ್ತು ತೆಳ್ಳಗೆ ಇಡುತ್ತದೆ.
ಕೊರತೆ:
ಬಿದ್ದರೆ ಮುರಿಯಬಹುದು.
ಫೋನ್‌ನ ಮೂಲೆಗಳಿಗೆ ಕಡಿಮೆ ರಕ್ಷಣೆ ನೀಡುತ್ತದೆ.
3. ರಬ್ಬರ್ ಕವರ್‌ಗಳು
ರಬ್ಬರ್ ಕವರ್ ಫೋನ್‌ಗೆ ಸಂಪೂರ್ಣ ರಕ್ಷಣೆ ನೀಡುತ್ತದೆ ಮತ್ತು ಅನೇಕ ಪರಿಸ್ಥಿತಿಗಳಲ್ಲಿ ಉಪಯುಕ್ತವಾಗಿದೆ.
ಪ್ರಯೋಜನಗಳು:
ಬಲವಾದ ಹಿಡಿತ ಮತ್ತು ಉತ್ತಮ ಪ್ರೊಟೆಕ್ಷನ್ ನೀಡುತ್ತದೆ.
ಒರಟಾದ ಮೇಲ್ಮೈಗಳಲ್ಲಿಯೂ ಸಹ ಬಾಳಿಕೆ ಬರುತ್ತದೆ.
ಕೊರತೆ:
ಭಾರ ಇರುತ್ತದೆ ಮತ್ತು ದಪ್ಪವಾಗಿರುತ್ತದೆ.
ನೋಡಲು ತುಂಬಾ ಆಕರ್ಷಕವಾಗಿರುವುದಿಲ್ಲ.
4. ಹೈಬ್ರಿಡ್ ಕವರ್‌ಗಳು
ಈ ಕವರ್‌ಗಳು ಪ್ಲಾಸ್ಟಿಕ್ ಮತ್ತು ಸಿಲಿಕೋನ್ ಮಿಶ್ರಣವಾಗಿದ್ದು, ಫೋನ್‌ಗೆ ಬಲವಾದ ರಕ್ಷಣೆ ನೀಡುತ್ತದೆ.
ಪ್ರಯೋಜನಗಳು:
ಡ್ಯುಯಲ್ ಲೇಯರ್ ರಕ್ಷಣೆ.
ಸ್ಟೈಲಿಶ್ ಲುಕ್.
ಕೊರತೆ:
ದುಬಾರಿಯಾಗಬಹುದು.
ತೂಕ ಹೆಚ್ಚಾಗಿರುತ್ತದೆ.
5. ಚರ್ಮದ ಕವರ್‌ಗಳು
ಚರ್ಮದ ಹೊದಿಕೆಯು ಪ್ರೀಮಿಯಂ ಆಯ್ಕೆಯಾಗಿದೆ, ಇದು ಶೈಲಿ ಮತ್ತು ರಕ್ಷಣೆಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ.
ಪ್ರಯೋಜನಗಳು:
ಪ್ರೀಮಿಯಂ ಮತ್ತು ಪ್ರೊಫೆಷನಲ್ ಲುಕ್ ನೀಡುತ್ತದೆ.
ತುಂಬಾ ಸಮಯ ಬಾಳಿಕೆ ಬರುತ್ತದೆ.
ಕೊರತೆ:
ಬೆಲೆ ದುಬಾರಿ ಆಗಿರುತ್ತದೆ.
ನೀರಿನಿಂದ ಹಾಳಾಗಬಹುದು.
ಯಾವುದನ್ನು ಆರಿಸಬೇಕು?:
ನೀವು ಹಗುರವಾದ ಮತ್ತು ಅಗ್ಗದ ಆಯ್ಕೆಯನ್ನು ಬಯಸಿದರೆ, ಸಿಲಿಕೋನ್ ಕವರ್ ಉತ್ತಮವಾಗಿದೆ. ನೀವು ಸೊಗಸಾದ ಮತ್ತು ತೆಳುವಾದ ಕವರ್‌ಗಳನ್ನು ಬಯಸಿದರೆ, ಗಟ್ಟಿಯಾದ ಪ್ಲಾಸ್ಟಿಕ್ ಕವರ್‌ಗಳನ್ನು ಆರಿಸಿ. ಅದೇ ಸಮಯದಲ್ಲಿ, ಹೆಚ್ಚಿನ ರಕ್ಷಣೆಗಾಗಿ ರಬ್ಬರ್ ಅಥವಾ ಹೈಬ್ರಿಡ್ ಕವರ್‌ಗಳು ಸರಿಯಾದ ಆಯ್ಕೆಯಾಗಿರಬಹುದು. ಚರ್ಮದ ಕವರ್ ಪ್ರೀಮಿಯಂ ನೋಟಕ್ಕೆ ಸೂಕ್ತವಾಗಿದೆ.
ಇದನ್ನೂ ಓದಿ: ಗೂಗಲ್ ಪೇ, ಫೋನ್ ಪೇನಂತಹ UPI ಅಪ್ಲಿಕೇಶನ್‌ಗಳ ನಿಯಮಗಳು ಜ. 1 ರಿಂದ ಬದಲಾವಣೆ
ಬ್ಯಾಕ್ ಕವರ್ ಹಳದಿ ಬಣ್ಣ ಆಗಿದೆಯೇ?:
ಸಾಮಾನ್ಯವಾಗಿ ಈ ಟ್ರಾನ್ಪರೆಂಟ್ ಕವರ್‌ಗಳನ್ನು TPU (ಥರ್ಮೋ ಪ್ಲಾಸ್ಟಿಕ್ ಪಾಲಿ ಯುರೆಥೇನ್) ವಸ್ತುಗಳಿಂದ ತಯಾರಿಸಲಾಗುತ್ತದೆ. ಸೂರ್ಯನ ಶಾಖದಿಂದ ಬರುವ ಯುವಿ ಕಿರಣಗಳು ಬ್ಯಾಕ್ ಕವರ್ನ ಬಣ್ಣ ಹಳದಿಗೆ ತಿರುಗಲು ಮುಖ್ಯ ಕಾರಣ. ಕವರ್‌ನಲ್ಲಿರುವ TPU ರಾಸಾಯನಿಕಗಳು ಸೂರ್ಯನ ಕಿರಣಗಳನ್ನು ತಡೆದು ನಿಲ್ಲುವ ಶಕ್ತಿ ಹೊಂದಿಲ್ಲ. ಹೀಗಾಗಿ ಇದು ಬಣ್ಣವನ್ನು ಬದಲಾಯಿಸುತ್ತದೆ. ಬಣ್ಣ ಕಳೆದುಕೊಂಡ ಬ್ಯಾಕ್ ಕವರ್ ಅನ್ನು ಹೊಸದರಂತೆ ಮಾಡಲು, ಬಿಸಿ ನೀರಿನಲ್ಲಿ ಎರಡರಿಂದ ಮೂರು ಹನಿಗಳ ಪಾತ್ರೆ ತೊಳೆಯುವ ಸೋಪ್ ಅನ್ನು ಮಿಶ್ರಣ ಮಾಡಿ. ನಂತರ, ಹಳೆಯ ಬ್ರಷ್ ತೆಗೆದುಕೊಂಡು ಅದನ್ನು ಫೋನ್ ಕವರ್ ಮೇಲೆ ಉಜ್ಜಿಕೊಳ್ಳಿ. ಈಗ ನೀರಿನಿಂದ ತೊಳೆದ ನಂತರ ಅದು ಮತ್ತೆ ಹಳೆಯ ಬಣ್ಣಕ್ಕೆ ತಿರುಗುತ್ತದೆ. ಅಥವಾ ಅಡಿಗೆ ಸೋಡಾದಿಂದ ಕೂಡ ಕವರ್ನ ಬಣ್ಣವನ್ನು ಬದಲಾಯಿಸಬಹುದು. ಸ್ವಲ್ಪ ಅಡಿಗೆ ಸೋಡಾಗೆ ಕೊಂಚ ನೀರು ಸೇರಿಸಿ ಬ್ರಶ್ ನಿಂದ ಕ್ಲೀನ್ ಮಾಡಿದರೆ ಕವರ್‌ನಲ್ಲಿರುವ ಹಳದಿ ಬಣ್ಣ ಮಾಯವಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ