AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Tricks: ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

ವಾಟ್ಸ್ಆ್ಯಪ್​ನಲ್ಲಿ ಟೈಪ್ ಮಾಡದೆಯೇ ಟೆಕ್ಸ್ಟ್ ಮೆಸೇಜ್ ಅನ್ನು ಕಳುಹಿಸಬಹುದು. ಈ ವೈಶಿಷ್ಟ್ಯ ನಿಮ್ಮ ಧ್ವನಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ ನೀವು ಕಳುಹಿಸ ಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಇಂಡಿಕ್ ಕೀಬೋರ್ಟ್ ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕು.

WhatsApp Tricks: ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 30, 2024 | 12:45 PM

Share

ಪ್ರಪಂಚದಲ್ಲಿ ಕೋಟ್ಯಾಂತರ ಜನರು ಇನ್ಸ್ಟೆಂಟ್ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಅನ್ನು ಬಳಕೆ ಮಾಡುತ್ತಾರೆ. ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುತ್ತಿರುತ್ತದೆ. ಸಾಮಾನ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಅಥವಾ ಇತರೆ ಆ್ಯಪ್​ಗಳಲ್ಲಿ ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಗೊತ್ತಿರುವ ವಿಷಯ. ಆದರೆ, ದೀರ್ಘ ಸಂದೇಶಗಳನ್ನು ಬರೆಯಬೇಕಾದಾಗ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡುವುದು ಕೆಲವೊಮ್ಮೆ ನೀರಸವಾಗುತ್ತದೆ. ವಿಶೇಷವಾಗಿ ನೀವು ಹೊರಗೆ ಇರುವಾಗ, ಚಾಲನೆ ಮಾಡುವಾಗ ಅಥವಾ ಯಾವುದೇ ಚಟುವಟಿಕೆ ಬ್ಯೂಸಿ ಇದ್ದಾಗ ಟೈಪ್ ಮಾಡುವುದು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು?.

ವಾಟ್ಸ್ಆ್ಯಪ್​ನಲ್ಲಿ ಟೈಪ್ ಮಾಡದೆಯೇ ಟೆಕ್ಸ್ಟ್ ಮೆಸೇಜ್ ಅನ್ನು ಕಳುಹಿಸಬಹುದು. ಈ ವೈಶಿಷ್ಟ್ಯ ನಿಮ್ಮ ಧ್ವನಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ ನೀವು ಕಳುಹಿಸ ಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಇಂಡಿಕ್ ಕೀಬೋರ್ಟ್ (google indic keyboard) ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕು. ವಿಶೇಷ ಎಂದರೆ ಇದು ಕನ್ನಡ ಭಾಷೆಗೂ ಕೂಡ ಸಪೋರ್ಟ್ ಮಾಡುತ್ತದೆ.

ಇಂಡಿಕ್ ಕೀಬೋರ್ಟ್ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್ಆ್ಯಪ್ ಅನ್ನು ತೆರೆಯಬೇಕು. ಬಳಿಕ ನೀವು ಸಂದೇಶ ಕಳುಹಿಸಬೇಕೆನ್ನುವವರ ಚಾಟ್​ಗೆ ಹೋಗಿ. ಈಗ ಸಂದೇಶ ಬರೆಯಲು ಕೀಬೋರ್ಡ್ ತೆರೆಯಿರಿ. ಹೆಚ್ಚುವರಿ ಕೀಬೋರ್ಡ್​ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್ (Mic) ಸೈನ್ ಇರುತ್ತದೆ. ಅದನ್ನು ಟ್ಯಾಪ್ ಮಾಡಿ. ಆದರೆ, ವಾಟ್ಸ್​ಆ್ಯಪ್​​ನಲ್ಲಿ ವಾಯಿಸ್ ಮೆಸೇಜ್ ಕಳುಹಿಸಲು ಕೂಡ ಮೈಕ್ ನೀಡಲಾಗಿದೆ ಎಂಬುದರ ಮೇಲೆ ಗಮನವಿರಲಿ. ನೀವು ಆ ಮೈಕ್​ನ ಬಳಕೆ ಮಾಡಬೇಡಿ. ಕೀಬೋರ್ಡ್ ನಲ್ಲಿರುವ ಮೈಕ್ ಮಾತ್ರ ನೀವು ಉಪಯೋಗಿಸಬೇಕು.

ಈಗ ನಿಮ್ಮ ಮುಂದೆ ಒಂದು ಮೈಕ್ ಪ್ರಕಟವಾಗಲಿದೆ. ಜೊತೆಗೆ ನಿಮಗೆ ಮಾತನಾಡಲು ಸೂಚನೆ ನೀಡುತ್ತದೆ. ನೀವು ಕಳುಹಿಸಬೇಕೆನ್ನುವ ಸಂದೇಶವನ್ನು ಕೇವಲ ಮಾತನಾಡುವ ಮೂಲಕ ಹೇಳಿ. ನಿಮ್ಮ ಸಂದೇಶ ಪೂರ್ಣಗೊಂಡ ಬಳಿಕ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ. ಇಲ್ಲಿ ವಿಶೇಷ ಎಂದರೆ ಇಂದಿನ ಬಹುತೇಕ ಕೀಬೋರ್ಡ್ ಇಂಗ್ಲಿಷ್ ಭಾಷೆಯ ಜೊತೆಗೆ ಪ್ರಾಂತೀಯ ಭಾಷೆಗಳನ್ನು ಸಹ ಸಮರ್ಥಿಸುತ್ತವೆ. ನೀವು ಮಾತನಾಡಿದ್ದೆಲ್ಲವು ಇಲ್ಲಿ ಟೈಪ್ ಆಗುತ್ತದೆ. ನಂತರ ಸೆಂಡ್ ಬಟನ್ ಒತ್ತಿದರೆ ಆಯಿತು.

ಇದನ್ನೂ ಓದಿ: ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದು ಹೇಗೆ?, ಇಲ್ಲಿದೆ ಟ್ರಿಕ್ಸ್

OK Google ಮೂಲಕವೂ ಕಳುಹಿಸಬಹುದು:

ಇನ್ನೂ ವಾಟ್ಸ್​ಆ್ಯಪ್ ಓಪನ್‌ ಮಾಡದಂತೆ ಮೆಸೇಜ್‌ ಸೆಂಡ್‌ ಮಾಡಲು ಗೂಗಲ್‌ ಕೂಡ ಸಹಾಯ ಮಾಡುತ್ತಿದೆ. ಗೂಗಲ್‌ ಫೋಲ್ಡರ್‌ ಅಥವಾ ಆಪ್‌ ಡ್ರಾವರ್‌ನಿಂದ ಗೂಗಲ್‌ ಆ್ಯಪ್‌ ಓಪನ್‌ ಮಾಡಿ ಜೋರಾಗಿ ‘OK Google’ ಎಂದು ಹೇಳಿ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ವಾಟ್ಸ್​ಆ್ಯಪ್‌ನಲ್ಲಿ ಲಾಂಗ್‌ ಮೆಸೇಜ್‌ ಟೈಪಿಸುವ ಬದಲು, ಸೆಂಡ್‌ ಮಾಡಬೇಕಾದ ಮೆಸೇಜ್‌ ಅನ್ನು ಹೇಳಿರಿ. ನಂತರ ಗೂಗಲ್‌ ಯಾವ ಮೆಸೇಜ್‌ ಅನ್ನು ಸೆಂಡ್ ಮಾಡಬೇಕು ಎಂದು ಕೇಳುತ್ತದೆ. ಈ ರೀತಿಯಲ್ಲಿ ಟೈಪಿಸುವ ಸಮಸ್ಯೆಯಿಂದ ವಾಟ್ಸ್​ಆ್ಯಪ್ ಮೆಸೇಜ್ ಅನ್ನು ಕಳುಹಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ