UPI New Rule: ಗೂಗಲ್ ಪೇ, ಫೋನ್ ಪೇನಂತಹ UPI ಅಪ್ಲಿಕೇಶನ್‌ಗಳ ನಿಯಮಗಳು ಜ. 1 ರಿಂದ ಬದಲಾವಣೆ
ಫೀಚರ್ ಫೋನ್ ಬಳಕೆದಾರರಿಗಾಗಿ ತರಲಾದ ಯುಪಿಐ ಸೇವೆಯ UPI123Pay ನ ವಹಿವಾಟಿನ ಮಿತಿಯನ್ನು ಹೆಚ್ಚಿಸಲು RBI ನಿರ್ಧರಿಸಿದೆ. ಹೊಸ ವರ್ಷದಂದು, ಬಳಕೆದಾರರು UPI123Pay ಮೂಲಕ ರೂ. 5,000 ಬದಲಿಗೆ ಒಂದು ದಿನದಲ್ಲಿ ರೂ. 10,000 ವರೆಗೆ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ
ಯು ಪಿ ಐ ಪಾವತಿಗಳನ್ನು ಮಾಡುವವರಿಗೆ, ಜನವರಿ 1, 2025 ರಿಂದ ವರ್ಷವು ಬದಲಾಗುವುದಲ್ಲದೆ, ಹಲವು ನಿಯಮಗಳು ಸಹ ಬದಲಾಗಲಿವೆ. UPI ಪಾವತಿಗಳನ್ನು ಮಾಡುವಲ್ಲಿ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು, ಆರ್ ಬಿ ಐ ನಿಯಮಗಳನ್ನು ಬದಲಾಯಿಸುವ ತೀರ್ಮಾನಕ್ಕೆ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐನ ಹಲವಾರು ವಿಧಾನಗಳಿಗೆ ವಹಿವಾಟು ಮಿತಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ, ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ. ಬಳಕೆದಾರರು ಈಗ ಮೊದಲಿಗಿಂತ ಹೆಚ್ಚು ಹಣವನ್ನು UPI ಮೂಲಕ ಕಳುಹಿಸಲು ಸಾಧ್ಯವಾಗುತ್ತದೆ. UPI ಗೆ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
UPI123ಪೇ ಮಿತಿಯನ್ನು ಹೆಚ್ಚಿಸಲಾಗಿದೆ:
ಫೀಚರ್ ಫೋನ್ ಬಳಕೆದಾರರಿಗಾಗಿ ತರಲಾದ ಯುಪಿಐ ಸೇವೆಯ UPI123Pay ನ ವಹಿವಾಟಿನ ಮಿತಿಯನ್ನು ಹೆಚ್ಚಿಸಲು RBI ನಿರ್ಧರಿಸಿದೆ. ಇದಕ್ಕಾಗಿ ಇಂದು ಅಂದರೆ 31ನೇ ಡಿಸೆಂಬರ್ 2024ರವರೆಗೆ ಗಡುವು ನೀಡಲಾಗಿದೆ. ಈ ಗಡುವನ್ನು ವಿಸ್ತರಿಸದಿದ್ದರೆ, ಹೊಸ ವರ್ಷದಂದು, ಬಳಕೆದಾರರು UPI123Pay ಮೂಲಕ ರೂ. 5,000 ಬದಲಿಗೆ ಒಂದು ದಿನದಲ್ಲಿ ರೂ. 10,000 ವರೆಗೆ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
UPI123Pay ಮೂಲಕ, ಬಳಕೆದಾರರು ಇತರ ಯು ಪಿ ಐ ಬಳಕೆದಾರರಿಗೆ ರೂ. 10,000 ವರೆಗೆ ಕಳುಹಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಪ್ರಸ್ತುತ ಫೋನ್‌ಪೇ, ಪೇಟಿಎಂ, ಗೂಗಲ್‌ಪೇಯಂತಹ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಮೂಲಕ ಯುಪಿಐ ಪಾವತಿ ಮಾಡುವ ವಹಿವಾಟಿನ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬಳಕೆದಾರರು ಒಂದು ದಿನದಲ್ಲಿ ಗರಿಷ್ಠ 1 ಲಕ್ಷದವರೆಗೆ ಮಾತ್ರ UPI ವಹಿವಾಟುಗಳನ್ನು ಮಾಡಬಹುದು. ಆದರೆ, ವೈದ್ಯಕೀಯ ತುರ್ತು ಇತ್ಯಾದಿಗಳಿಗೆ ಮಿತಿಯನ್ನು 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಟೈಪ್ ಮಾಡದೇ ವಾಟ್ಸ್ಆ್ಯಪ್ನಲ್ಲಿ ಟೆಕ್ಸ್ಟ್ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
11 ತಿಂಗಳು, 15,547 ಕೋಟಿ ವಹಿವಾಟು:
ಹಣಕಾಸು ಸಚಿವಾಲ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ವರ್ಷದ (2024) ಜನವರಿಯಿಂದ ನವೆಂಬರ್ವರೆಗೆ 11 ತಿಂಗಳಲ್ಲಿ ಯುಪಿಐ ಮೂಲಕ 15,547 ಕೋಟಿ ವಹಿವಾಟುಗಳಾಗಿವೆ. ಇವುಗಳಿಂದ 223 ಲಕ್ಷ ಕೋಟಿ ರೂ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ. 2024ರ ಅಕ್ಟೋಬರ್ ತಿಂಗಳಲ್ಲಿ 23.49 ಲಕ್ಷ ಕೋಟಿ ರೂ ಮೌಲ್ಯದ 1,658 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳಾಗಿವೆ. ಹಿಂದಿನ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ವಹಿವಾಟು ಪ್ರಮಾಣ ಶೇ. 45ರಷ್ಟು ಹೆಚ್ಚಿದೆ.
ಭಾರತದಲ್ಲಿ ರೂಪಿಸಲಾಗಿರುವ ಯುಪಿಐ ಪಾವತಿ ವ್ಯವಸ್ಥೆಯು ವಿಶ್ವದಲ್ಲೇ ವಿಶೇಷವಾಗಿದೆ. ಹಲವಾರು ದೇಶಗಳು ಯುಪಿಐ ಅನ್ನು ತಮ್ಮಲ್ಲಿ ಅಳವಡಿಸಲು ಆಸಕ್ತವಾಗಿವೆ. ಯುಎಇ, ಸಿಂಗಾಪುರ್, ಭೂತಾನ್, ನೇಪಾಳ್, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಈ ಏಳು ದೇಶಗಳಲ್ಲಿ ಯುಪಿಐ ಅಳವಡಿಕೆ ಆಗಿದೆ. ಈ ಏಳು ದೇಶಗಳಿಂದ ಜನರು ಭಾರತಕ್ಕೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Tue, 31 December 24