Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ

|

Updated on: May 12, 2023 | 1:27 PM

Sanchar Saathi Portal: ಕಳೆದ ವರ್ಷದಿಂದ ಮೊಬೈಲ್ ಕಳ್ಳತನ ದೇಶದಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದನ್ನು ಮನಗಂಡು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.

Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ
sanchar saathi portal
Follow us on

ನಮ್ಮ ಜೊತೆ ದಿನದ 24 ಗಂಟೆಗಳ ಕಾಲ ಇರುವ ಸ್ಮಾರ್ಟ್​ಫೋನ್ (Smartphone) ದಿಢೀರ್ ಕಳೆದು ಹೋದರೆ ಆಗ ಆಗುವ ಟೆನ್ಶನ್ ಅಷ್ಟಿಟ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು (Photos) ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ. ಆದರೆ, ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರವು ಕಳೆದುಹೋದ ಅಥವಾ ಕದ್ದ ಫೋನ್ ಅನ್ನು ಪತ್ತೆ ಮಾಡಿ ಮರಳಿ ಕೊಡಿಸುತ್ತದೆ. ಬಸ್​ನಲ್ಲಿ (Bus) ಪ್ರಯಾಣಿಸುವಾಗ ಅಥವಾ ಇತರೆ ಜನಜಂಗುಳಿ ಇರುವಂತಹ ಪ್ರದೇಶದಲ್ಲಿ ನಿಮ್ಮ ಫೋನ್ ಕಳೆದುಹೋಯಿತು ಅಥವಾ ಯಾರಾದರು ಕದ್ದರು ಎಂದಾದರೆ ನೀವು ಅದನ್ನು ಸುಲಭವಾಗಿ ಕಂಡುಹಿಡಿಯಬಹುದು. ಅದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ರೀತಿಯ ಮಾಹಿತಿಯನ್ನು ಫೋನ್‌ಗಳಲ್ಲಿ ಇಡುತ್ತೇವೆ. ಬ್ಯಾಂಕ್ ವಿವರಗಳಿಂದ ಹಿಡಿದು ಪ್ರಮುಖ ದಾಖಲೆಗಳವರೆಗೆ ಎಲ್ಲವೂ ನಿಮ್ಮ ಫೋನ್‌ನಲ್ಲಿ ಇರುತ್ತದೆ. ಹೀಗಿದ್ದಾಗ ಫೋನ್ ಕಳೆದುಹೋದರೆ ಅಥವಾ ಕದ್ದರೆ ಅದು ದೊಡ್ಡ ಸಮಸ್ಯೆಯಾಗುತ್ತದೆ. ಇದನ್ನು ಪರಿಹರಿಸಲು, ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದರ ಸಹಾಯದಿಂದ ನಿಮ್ಮ ಕಳೆದುಹೋದ ಫೋನ್ ಅನ್ನು ಸುಲಭವಾಗಿ ಮರಳಿ ಪಡೆಯಬಹುದು.

Vivo Y78 5G: ಮಾರುಕಟ್ಟೆಗೆ ಬಜೆಟ್ ಬೆಲೆಯ ಹೊಸ ವಿವೊ Y78 5G ಸ್ಮಾರ್ಟ್​ಫೋನ್ ಎಂಟ್ರಿ

ಇದನ್ನೂ ಓದಿ
Nokia C22: ಕೇವಲ 7,999 ರೂ. ಗೆ ಹೊಸ ನೋಕಿಯಾ C22 ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಏನಿದೆ ನೋಡಿ
General Knowledge: ಕ್ಯಾಮೆರಾ ಎಂಬ ಮಾಯಾಜಾಲ ಮೊಬೈಲ್​​​ ಫೋನ್‌ ಬಲಭಾಗದಲ್ಲಿಯೇ ಇರುತ್ತದೆ ಏಕೆ?
Smartphones under 12000: 12,000 ರೂ. ಒಳಗೆ ಸಿಗುತ್ತಿರುವ ಆಕರ್ಷಕ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ
Poco F5 Pro 5G: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಪೋಕೊ ಫೋನ್ ಬಿಡುಗಡೆ

ಕಳೆದ ವರ್ಷದಿಂದ ಮೊಬೈಲ್ ಕಳ್ಳತನ ದೇಶದಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದನ್ನು ಮನಗಂಡು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಹೊಸದಾಗಿ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಲಾಗಿದೆ. ಜನರ ಕದ್ದ ವಸ್ತುಗಳನ್ನು ಹುಡುಕುವುದೇ ಇದರ ಮುಖ್ಯ ಉದ್ದೇಶ. ಮೇ 17 ರಿಂದ ಜನರಿಗೆ ಇದರ ಸೇವೆ ಸಿಗಲಿದೆ. ಮೇ 17 ವಿಶ್ವ ಟೆಲಿಕಾಂ ದಿನವಾಗಿದ್ದು, ಈ ಸಂದರ್ಭದಲ್ಲಿ ಸಂಚಾರ್ ಸಾಥಿ ಪೋರ್ಟಲ್ ಅನಾವರಣಗೊಳ್ಳಲಿದೆ.

ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆ್ಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು ಸ್ಪಷ್ಟವಾಗಿ ಯಾವರೀತಿ ಉಪಯೋಗಿಸಬಹುದು ಎಂಬುದನ್ನು ಸರ್ಕಾರ ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ