Tech Tips: ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದು ಹೇಗೆ?, ಇಲ್ಲಿದೆ ಟ್ರಿಕ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 11:02 AM

ನೀವು ಕಚೇರಿಯಲ್ಲಿದ್ದರೆ, ಕಾರಿನಲ್ಲಿದ್ದರೆ ಅಥವಾ ಸಂಬಂಧಿಕರ ಮನೆಗೆ ಬಂದಿದ್ದರೆ ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸುಲಭವಾಗಿ ಹೇಗೆ ಚಾರ್ಜ್ ಮಾಡಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಕೆಲವು ಸ್ಮಾರ್ಟ್ ವಿಧಾನಗಳಿವೆ, ಅದನ್ನು ಅನುಸರಿಸಿದರೆ ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

Tech Tips: ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದು ಹೇಗೆ?, ಇಲ್ಲಿದೆ ಟ್ರಿಕ್ಸ್
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಫೋನ್ ಅನ್ನು ಮತ್ತೆ ಮತ್ತೆ ಚಾರ್ಜ್ ಮಾಡುವುದನ್ನು ತಪ್ಪಿಸಲು, ಕಂಪನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿಗಳನ್ನು ನೀಡಲು ಪ್ರಾರಂಭಿಸಿವೆ. ಇತ್ತೀಚೆಗಷ್ಟೆ 7500mAh ಬ್ಯಾಟರಿಯ ಫೋನ್ ಅನಾವರಣಗೊಂಡಿತ್ತು. ಹೀಗಾಗಿ ಈಗ ಹೆಚ್ಚಿನ ಜನರು ಇನ್ನು ಫೋನ್ ಚಾರ್ಜರ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದಿಲ್ಲ. ಆದರೆ ಇಡೀ ದಿನ ಫೋನ್ ಬಳಸುವಾಗ ಫೋನ್‌ನ ಬ್ಯಾಟರಿ ಖಾಲಿಯಾಗುತ್ತಿದೆ. ಆ ಸಂದರ್ಭ ಮನೆಯ ಹೊರಗೆ ಇದ್ದರೆ ಫೋನ್ ಸ್ವಿಚ್ ಆಫ್ ಆಗುತ್ತದೆ. ಈ ರೀತಿ ಅನೇಕ ಬಾರಿ ಸಂಭವಿಸುತ್ತದೆ?.

ನೀವು ಕಚೇರಿಯಲ್ಲಿದ್ದರೆ, ಕಾರಿನಲ್ಲಿದ್ದರೆ ಅಥವಾ ಸಂಬಂಧಿಕರ ಮನೆಗೆ ಬಂದಿದ್ದರೆ ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸುಲಭವಾಗಿ ಹೇಗೆ ಚಾರ್ಜ್ ಮಾಡಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಕೆಲವು ಸ್ಮಾರ್ಟ್ ವಿಧಾನಗಳಿವೆ, ಅದನ್ನು ಅನುಸರಿಸಿದರೆ ಚಾರ್ಜರ್ ಇಲ್ಲದೆ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ರಿವರ್ಸ್ ಚಾರ್ಜಿಂಗ್:

ನಿಮ್ಮ ಬಳಿ ಚಾರ್ಜರ್ ಅಥವಾ ಡೇಟಾ ಕೇಬಲ್ ಇಲ್ಲದಿದ್ದರೂ ನಿಮ್ಮ ಫೋನ್ ರಿವರ್ಸ್ ಚಾರ್ಜ್ ಅನ್ನು ಬೆಂಬಲಿಸಿದರೆ, ನಿಮ್ಮ ಕಚೇರಿಯಲ್ಲಿ ರಿವರ್ಸ್ ಚಾರ್ಜ್ ಬೆಂಬಲದೊಂದಿಗೆ ಫೋನ್ ಬರುವ ಬೇರೆಯವರ ಸಹಾಯವನ್ನು ಗೆದುಕೊಳ್ಳಬಹುದು.

ಯುಎಸ್​ಬು ಚಾರ್ಜ್:

ನೀವು ಚಾರ್ಜರ್ ಅಡಾಪ್ಟರ್ ಹೊಂದಿಲ್ಲದಿದ್ದರೂ ಡೇಟಾ ಕೇಬಲ್ ಇದ್ದರೆ ಸಾಕು, ನಿಮ್ಮ ಕೆಲಸ ಸುಲಭವಾಗುತ್ತದೆ. ನಿಮ್ಮ ಲ್ಯಾಪ್‌ಟಾಪ್ ಮೂಲಕ ಕಾರು ಮತ್ತು ಟಿವಿ ಜೊತೆಗೆ ಯುಎಸ್‌ಬಿ ಪೋರ್ಟ್‌ನಲ್ಲಿ ಪ್ಲಗ್ ಮಾಡುವ ಮೂಲಕ ನಿಮ್ಮ ಸುಲಭವಾಗಿ ಚಾರ್ಜ್ ಮಾಡಬಹುದು. ನಿಮ್ಮ ಬಳಿ ಡೇಟಾ ಕೇಬಲ್ ಕೂಡ ಇಲ್ಲದಿದ್ದರೆ, ಯಾರಿಗಾದರೂ ಕೇಬಲ್ ಕೇಳುವ ಮೂಲಕ ನೀವು ಫೋನ್ ಅನ್ನು ಚಾರ್ಜ್ ಮಾಡಬಹುದು.

ಪವರ್ ಬ್ಯಾಂಕ್:

ಚಾರ್ಜ್ ಮಾಡಿದ ಪವರ್ ಬ್ಯಾಂಕ್ ಮತ್ತು ಡೇಟಾ ಕೇಬಲ್ ಅನ್ನು ನೀವು ಕಚೇರಿಗೆ ಅಥವಾ ನಿಮ್ಮ ಕಾರಿನಲ್ಲಿ ಸಾಗಿಸುವ ಬ್ಯಾಗ್‌ನಲ್ಲಿ ಇರಿಸಿ. ಇದರೊಂದಿಗೆ, ನೀವು ಯಾವಾಗಾದರು ಮನೆಯಲ್ಲಿ ಚಾರ್ಜರ್ ಅನ್ನು ಮರೆತರೆ, ಚಿಂತಿಸಬೇಕಾಗಿಲ್ಲ.

ಇದನ್ನೂ ಓದಿ: ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ದೊಡ್ಡ ಸುದ್ದಿ: ಇನ್ಮುಂದೆ ಈ ಜನರಿಗೆ ಸಿಮ್ ಸಿಗುವುದಿಲ್ಲ

ಗಮನ ಕೊಡಿ:

ಹಾಗಂತ ಫೋನ್ ಅನ್ನು ಪ್ರತಿ ಬಾರಿ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅನ್ನು ಬಳಸಬೇಡಿ, ಹೀಗೆ ಮಾಡುವುದರಿಂದ ಫೋನ್‌ನ ಬ್ಯಾಟರಿ ಆರೋಗ್ಯವು ಹದಗೆಡಲು ಪ್ರಾರಂಭಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಪವರ್ ಬ್ಯಾಂಕ್ ಬಳಸಿ. ಇದರ ಹೊರತಾಗಿ, ಯುಎಸ್‌ಬಿ ಪೋರ್ಟ್ ಮೂಲಕ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಆಡಾಪ್ಟರ್ ಚಾರ್ಜರ್‌ಗಿಂತ ನಿಧಾನವಾಗಿ ಚಾರ್ಜ್ ಆಗುತ್ತದೆ.

ಬೇರೊಬ್ಬರ ಚಾರ್ಜರ್​ನಿಂದ ತಮ್ಮ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಹಾನಿಯಾಗಬಹುದು ಎಂದು ಭಾವಿಸುವ ಜನರಿಗೆ ಈ ವಿಧಾನಗಳು ಉಪಯೋಗವಾಗಲಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ