Tech Tips: ನಿಮ್ಮ ಮೊಬೈಲ್ಗೆ ನಿಮ್ಮದೇ ಹೆಸರಿನ ಕಾಲರ್ ಟ್ಯೂನ್ ಸೆಟ್ ಮಾಡೋದು ಹೇಗೆ?
Tech Tips and Tricks in Kannada: ಈ ಟ್ರಿಕ್ ಮೂಲಕ ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್ನಲ್ಲಿ ಕೇಳಿಸುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಗೊತ್ತಿಲ್ಲದವರು ತಮ್ಮ ಹೆಸರಿನ ಕಾಲರ್ ಟ್ಯೂನ್ ಹೊಂದಿಸುವ ಸುಲಭ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಬಹುದು.

(ಬೆಂಗಳೂರು, ಮಾ: 07): ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫೋನ್‌ಗಳನ್ನು (Smartphones) ಎಷ್ಟಾಗುತ್ತೊ ಅಷ್ಟು ಚಂದಗಾಣಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿದಿನ ಮಾರುಕಟ್ಟೆಯಲ್ಲಿ ಕೆಲವು ಹೊಸ ನವೀಕರಣಗಳು ಅಥವಾ ವೈಶಿಷ್ಟ್ಯಗಳು ಬರುತ್ತಲೇ ಇವೆ. ಇದರಲ್ಲಿ ನಿಮ್ಮ ಹೆಸರಿನೊಂದಿಗೆ ಬರುವ ಕಾಲರ್ ಟ್ಯೂನ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ, ಜನರು ತಮಗೆ ಕರೆ ಮಾಡುವವರನ್ನು ಇಮ್ಪ್ರೆಸ್ ಮಾಡಲು ತಮ್ಮ ಹೆಸರಿನ ಕಾಲ್ ಟ್ಯೂಲ್ ಅನ್ನು ಇರಿಸುತ್ತಾರೆ. ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್ನಲ್ಲಿ ಕೇಳಿಸುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಗೊತ್ತಿಲ್ಲದವರು ತಮ್ಮ ಹೆಸರಿನ ಕಾಲರ್ ಟ್ಯೂನ್ ಹೊಂದಿಸುವ ಸುಲಭ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಬಹುದು.
ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಹೊಂದಿಸಲು ನೀವು ಹೆಚ್ಚು ಕಷ್ಟಪಡಬೇಕಿಲ್ಲ. ಇದಕ್ಕಾಗಿ ನೀವು ಕೇವಲ ಜಿಯೋ ಬಳಕೆದಾರರಾಗಿರಬೇಕು ಮತ್ತು ನಿಮ್ಮ ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿರುವುದು ಅವಶ್ಯಕ.
ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಈ ರೀತಿ ಆಯ್ಕೆ ಮಾಡಿ:
- MyJio ಅಪ್ಲಿಕೇಶನ್ ಅನ್ನು ತೆರೆದು ಮೆನೂ ಆಯ್ಕೆಯಲ್ಲಿ ತೋರಿಸಿರುವ JioTunes ಮೇಲೆ ಕ್ಲಿಕ್ ಮಾಡಿ.
- ನಂತರ, ಜಿಯೋ ಟ್ಯೂನ್ಸ್ನ ಪೇಜ್ ನಿಮ್ಮ ಮುಂದೆ ತೆರೆಯುತ್ತದೆ, ಇಲ್ಲಿ ನೇಮ್ ಜಿಯೋ ಟ್ಯೂನ್ಸ್, ಆರ್ಟಿಸ್ಟ್ ಜಿಯೋ ಟ್ಯೂನ್ಸ್ ಮತ್ತು ಟಾಪ್ ಜಿಯೋ ಟ್ಯೂನ್ಸ್ ಎಂದ ಮೂರು ಆಯ್ಕೆ ಕಾಣಿಸುತ್ತದೆ.
- ಇಲ್ಲಿ ನೀವು ನೇಮ್ JioTune ಪುಟ ತೆರೆದ ನಂತರ, ನಿಮ್ಮ ಹೆಸರನ್ನು ಬರೆದು ಸರ್ಚ್ ಕೊಡಬೇಕು. ಆಗ ನಿಮ್ಮ ಹೆಸರಿರುವ ಅನೇಕ ಪಟ್ಟಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಹೆಸರಿನ ಜಿಯೋ ಟ್ಯೂನ್ ಬರುತ್ತದೆ.
- ವಿಭಿನ್ನ ಧ್ವನಿಗಳು ಮತ್ತು ಭಾಷೆಗಳಲ್ಲಿ ನಿಮ್ಮ ಹೆಸರನ್ನು ಟ್ಯೂನ್ ಮಾಡಲು ಇಲ್ಲಿ ನೀವು ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ಆಯ್ಕೆಯ ಟ್ಯೂನ್ ಅನ್ನು ಸೆಲೆಕ್ಟ್ ಮಾಡಿ ಮತ್ತು ಸೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆಯಿತು.
- ಈ ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಯಾರಾದರೂ ನಿಮ್ಮ ಫೋನ್‌ಗೆ ಕರೆ ಮಾಡಿದಾಗ, ಅವರು ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಕೇಳುತ್ತಾರೆ.
- ಇದು ಬೇಡ ಎಂದಾದಲ್ಲಿ ಡಿ-ಆ್ಯಕ್ಟಿವೆಟ್ ಮಾಡುವ ಆಯ್ಕೆ ಕೂಡ ಅಲ್ಲೇ ನೀಡಲಾಗಿದೆ.
Apple vs Android: ಭಾರತೀಯರಿಗೆ ಐಫೋನ್ ಹುಚ್ಚು! ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಮಾರಾಟ ಶೇ. 10 ರಷ್ಟು ಕುಸಿತ
ಏರ್‌ಟೆಲ್‌ನಲ್ಲಿ ಹಾಡುಗಳನ್ನು ಕಾಲರ್ ಟ್ಯೂನ್ಗೆ ಸೆಟ್ ಮಾಡೋದು ಹೇಗೆ?:
ಏರ್‌ಟೆಲ್‌ನಲ್ಲಿ, ಬಳಕೆದಾರರು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಆಪ್ ತೆರೆದು ಮೇಲಿನ ಬಲಭಾಗದಲ್ಲಿರುವ ‘ಹಲೋ ಟ್ಯೂನ್ಸ್’ ಐಕಾನ್‌ಗೆ ನ್ಯಾವಿಗೇಟ್ ಮಾಡಿ. ‘ಹಲೋ ಟ್ಯೂನ್ಸ್’ ಏರ್‌ಟೆಲ್‌ನ ಕಾಲರ್ ಟ್ಯೂನ್‌ಗಳಿಗೆ ಸೇರ್ಪಡೆಯಾಗಿದೆ. ಹಲೋ ಟ್ಯೂನ್ ಹೊಂದಿಸಲು ನಿಮ್ಮ ನೆಚ್ಚಿನ ಹಾಡನ್ನು ಹುಡುಕಲು ಸರ್ಚ್ ಪಟ್ಟಿಯನ್ನು ಬಳಸಿ. ನೀವು ಹಾಡಿನ ಆಯ್ದ ಭಾಗವನ್ನು ನಿಮ್ಮ ಹಲೋ ಟ್ಯೂನ್ ಆಗಿ ಹೊಂದಿಸಬಹುದು.
ವೊಡಾಫೋನ್ ಐಡಿಯಾದಲ್ಲಿ ಕಾಲರ್ ಟ್ಯೂನ್ ಸೆಟ್ ಮಾಡೋದು ಹೇಗೆ?:
ವೊಡಾಫೋನ್ ಐಡಿಯಾ ಬಳಕೆದಾರರು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿರುವ VI ಅಪ್ಲಿಕೇಶನ್ ಮೂಲಕ ಹಂಗಾಮಾ ಮ್ಯೂಸಿಕ್ನೊಂದಿಗೆ ಕಾಲರ್ ಟ್ಯೂನ್ ಅನ್ನು ಹೊಂದಿಸಬಹುದು. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ Vi ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿರುವ ಹಾಡುಗಳ ಟ್ಯಾಬ್ನಲ್ಲಿ ಸರ್ಚ್ ಮಾಡಿ. ನಿಮ್ಮ ನೆಚ್ಚಿನ ಹಾಡನ್ನು ಹುಡುಕಿ. ನಿಮಗೆ ಬೇಕಾದ ಹಾಡನ್ನು ನೀವು ಕಂಡುಕೊಂಡ ನಂತರ, ಅದನ್ನು ತೆರೆಯಿರಿ ಮತ್ತು ಆಲ್ಬಮ್ ಆರ್ಟ್ ಚಿತ್ರದ ಕೆಳಗೆ ‘ಸೆಟ್ ಕಾಲರ್ ಟ್ಯೂನ್’ ಆಯ್ಕೆಯನ್ನು ನೋಡುತ್ತೀರಿ. ನಂತರ ನಿಮಗೆ ನೀಡಲಾಗುವ ಹಲವು ಚಂದಾದಾರಿಕೆ ಪ್ಯಾಕ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ, ಅದರ ನಂತರ ನೀವು ಆಯ್ಕೆ ಮಾಡಿದ ಟ್ರ್ಯಾಕ್ ಅನ್ನು ನಿಮ್ಮ ಕಾಲರ್ ಟ್ಯೂನ್ ಆಗಿ ಹೊಂದಿಸಲಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ