ಕೃತಕ ಬುದ್ಧಿಮತ್ತೆ ಪ್ರಸ್ತುತ ಇಡೀ ಜಗತ್ತನ್ನು ಬದಲಾಯಿಸುತ್ತಿದೆ. ಶಾಪಿಂಗ್‌ನಿಂದ ಔಷಧದವರೆಗೆ, AI ತಂತ್ರಜ್ಞಾನದ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲಾ ಪ್ರಮುಖ ಟೆಕ್ ಕಂಪನಿಗಳು ಈಗಾಗಲೇ ಈ ಕ್ಷೇತ್ರವನ್ನು ಪ್ರವೇಶಿಸಿವೆ. ಗೂಗಲ್ ಮತ್ತು ಆ್ಯಪಲ್‌ನಂತಹ ಕಂಪನಿಗಳು AI ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಪ್ರಸ್ತುತ, ಚಾಟ್‌ಜಿಪಿಟಿ ಮತ್ತು ಗೂಗಲ್ ಬೋಟ್ AI ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿವೆ. ಈ ಸಾದಿಯಲ್ಲಿ ಮೆಟಾ ಕೂಡ ಮುಂದುವರೆಯುತ್ತಿದೆ. ಮೆಟಾ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ AI ಪರಿಕರಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ. ಇದರಲ್ಲಿ ವಾಟ್ಸ್ಆ್ಯಪ್ ಕೂಡ ಇದೆ.
ವಾಟ್ಸ್ಆ್ಯಪ್ನಲ್ಲಿ ಎಐ ಟೂಲ್ ತರಲಾಗಿದೆ. ಈ ಹೊಸ AI ಉಪಕರಣವು ಬಳಕೆದಾರರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್ಆ್ಯಪ್ AI ನಲ್ಲಿಯೂ ಒದಗಿಸಲಾಗಿದೆ. AI ಮೂಲಕ ವಾಟ್ಸ್ಆ್ಯಪ್ನಲ್ಲಿ ಫೋಟೋ ವಿನ್ಯಾಸ ವೈಶಿಷ್ಟ್ಯವನ್ನು ಉಪಯೋಗಿಸಬಹುದು. ನಿಮ್ಮ ಕಲ್ಪನೆಯ ಯಾವುದೇ ವಿಷಯವನ್ನು ಕೃತಕ ಬುದ್ಧಿಮತ್ತೆಯು ಫೋಟೋವನ್ನಾಗಿ ಬದಲಾಯಿಸುತ್ತದೆ.
ನೀವು ಎಷ್ಟು GB RAM ಫೋನ್ ಖರೀದಿಸಬೇಕು?: ಗೊಂದಲವಿದ್ದರೆ ಈ ಸ್ಟೋರಿ ಓದಿ
ವಾಟ್ಸ್ಆ್ಯಪ್ನಲ್ಲಿ ಎಐ ಟೂಲ್ ಬಳಸಲು ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ಮೊದಲು ಅಪ್ ಡೇಟ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಚಾಟ್ ಇಂಟರ್‌ಫೇಸ್‌ನ ಮೇಲ್ಭಾಗದಲ್ಲಿ ನೇರಳೆ ಮತ್ತು ನೀಲಿ ಬಣ್ಣದಲ್ಲಿ ಒಂದು ವಿಶಿಷ್ಟವಾದ ವೃತ್ತಾಕಾರದ ಐಕಾನ್ ಅನ್ನು ಕಾಣುತ್ತೀರಿ. ಈ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಮೆಟಾ AI ಗೆ ಪ್ರವೇಶಿಸಬಹುದು. ಪರ್ಸನಲ್ ಅಥವಾ ಗ್ರೂಪ್ ಚಾಟ್‌ಗಳಲ್ಲಿರಲಿ, “@” ನಂತರ “ಮೆಟಾ AI” ಎಂದು ಟೈಪ್ ಮಾಡುವ ಮೂಲಕ ಜನರು ಚಾಟ್ ಬೋಟ್ ಸೇವೆಗಳನ್ನು ಪ್ರವೇಶಿಸಬಹುದು. ಸದ್ಯಕ್ಕೆ ಈ ಆಯ್ಕೆ ಕೆಲ ವಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಿದೆಯಷ್ಟೆ.
ಚೀನಾ ಸರ್ಕಾರದ ಆದೇಶದ ಅನುಸಾರ ಆ್ಯಪಲ್ ತನ್ನ ಚೀನಾ ಆ್ಯಪ್ ಸ್ಟೋರ್ನಿಂದ ವಾಟ್ಸ್ಆ್ಯಪ್ ಮತ್ತು ಥ್ರೆಡ್ಸ್ ಆ್ಯಪ್ಗಳನ್ನು ತೆಗೆದುಹಾಕಿದೆ. ವಾಟ್ಸ್ಆ್ಯಪ್ ಮತ್ತು ಥ್ರೆಡ್ನಿಂದ ದೇಶದ ಭದ್ರತೆಗೆ ಅಪಾಯ ಆಗುತ್ತದೆ ಎಂಬ ಕಾರಣಕ್ಕೆ ಆ ಎರಡು ಆ್ಯಪ್ಗಳನ್ನು ಚೀನಾ ನಿಷೇಧಿಸಿದೆ. ಹೀಗಾಗಿ, ಆ್ಯಪಲ್ನ ಆ್ಯಪ್ ಸ್ಟೋರ್ನಿಂದ ಅದನ್ನು ತೆಗೆಯಲಾಗಿದೆ. ಇದು ಚೀನಾದಲ್ಲಿ ಮಾತ್ರ ಅನ್ವಯ ಆಗುತ್ತದೆ. ಭಾರತದಲ್ಲಿರುವ ಐಫೋನ್ ಬಳಕೆದಾರರಿಗೆ ಅವರ ಆ್ಯಪ್ ಸ್ಟೋರ್ನಲ್ಲಿ ವಾಟ್ಸ್ಆ್ಯಪ್ ಲಭ್ಯ ಇರುತ್ತದೆ.
ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್ಗಳು ರದ್ದಾಗುವ ಸಾಧ್ಯತೆ
ಚೀನಾದಲ್ಲಿ ಈ ರೀತಿ ಸೋಷಿಯಲ್ ಮೀಡಿಯಾ ಮೇಲಿನಿ ನಿರ್ಬಂಧ ಬಹಳ ಕಠಿಣತರದ್ದಾಗಿದೆ. ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾದ ಯಾವುದೇ ಮಾಹಿತಿ ತನ್ನ ಕಣ್ತಪ್ಪಿ ಹರಿದಾಡದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸುತ್ತದೆ. ಅದರಲ್ಲೂ ರಾಜಕೀಯವಾಗಿ ಸೂಕ್ಷ್ಮವೆನಿಸುವ ಮಾಹಿತಿಯನ್ನು ಚೀನಾ ಸರ್ಕಾರ ತಪ್ಪದೇ ನಿರ್ಬಂಧಿಸುತ್ತದೆ.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ