Tech Tips: ಎರಡು ಸ್ಮಾರ್ಟ್​ಫೋನ್​ನಲ್ಲಿ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಅಕೌಂಟ್ ಬಳಸುವುದು ಹೇಗೆ?

WhatsApp Trick: ಫೇಸ್​ಬುಕ್, ಇನ್​ಸ್ಟಾಗ್ರಾಮ್ ರೀತಿಯಲ್ಲಿ ಒಂದು ವಾಟ್ಸ್​ಆ್ಯಪ್ ಅಕೌಂಟ್ ಅನ್ನು ಎರಡು ಮೊಬೈಲ್​ಗಳಲ್ಲಿ ಉಪಯೋಗಿಸಲು ಸಾಧ್ಯವೇ?. ಇದಕ್ಕಾಗಿ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಇದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

Tech Tips: ಎರಡು ಸ್ಮಾರ್ಟ್​ಫೋನ್​ನಲ್ಲಿ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಅಕೌಂಟ್ ಬಳಸುವುದು ಹೇಗೆ?
WhatsApp Tricks

Updated on: Mar 17, 2023 | 6:45 PM

ವಾಟ್ಸ್​ಆ್ಯಪ್ ಕಳೆದ ವರ್ಷ ಸಾಕಷ್ಟು ಬೆಳವಣಿಗೆ ಕಂಡಿತು. ಅತಿ ಹೆಚ್ಚು ನೂತನ ಫೀಚರ್​ಗಳನ್ನು 2022 ರಲ್ಲಿ ಬಿಡುಗಡೆ ಮಾಡಿದೆ. ಈ ವರ್ಷ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಡೇಟ್ ನೀಡುವಲ್ಲಿ ಕೆಲಸ ಮಾಡುತ್ತಿದೆ. ಆಂಡ್ರಾಯ್ಡ್, ಐಒಎಸ್​ಗೆ ಮಾತ್ರವಲ್ಲದೆ ಈಗೀಗ ವೆಬ್ ಬಳಕೆದಾರರಿಗೆ, ಟ್ಯಾಬ್ಲೆಟ್​ನವರಿಗೆ ಕೂಡ ವಿನೂತನ ಫೀಚರ್​ಗಳನ್ನು ನೀಡುತ್ತಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್​​ಆ್ಯಪ್ (WhatsApp) ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಆದರೆ, ಫೇಸ್​ಬುಕ್, ಇನ್​ಸ್ಟಾಗ್ರಾಮ್ ರೀತಿಯಲ್ಲಿ ಒಂದು ವಾಟ್ಸ್​ಆ್ಯಪ್ ಅಕೌಂಟ್ ಅನ್ನು ಎರಡು ಮೊಬೈಲ್​ಗಳಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ಮೆಟಾ ಕಂಪನಿ ಇನ್ನೂ ನೀಡಿಲ್ಲ. ಆದರೀಗ ವರದಿಯ ಪ್ರಕಾರ ವಾಟ್ಸ್​ಆ್ಯಪ್ ಕಂಪ್ಯಾನಿಯನ್‌ ಮೋಡ್‌ (Companion Mode) ಆಯ್ಕೆ ನೀಡಲು ಮುಂದಾಗಿದೆ.

ವಾಟ್ಸ್​ಆ್ಯಪ್​ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದಂತೆ. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ.

Moto G73 5G: ಭಾರತದಲ್ಲಿ ರೋಚಕತೆ ಸೃಷ್ಟಿಸಿದ ಮೋಟೋ G73 5G ಫೋನ್‌ ಈಗ ಖರೀದಿಗೆ ಲಭ್ಯ: ಆಫರ್ ಏನಿದೆ?

ಇದನ್ನೂ ಓದಿ
Galaxy A54 5G: ಒಂದೇ ದಿನ ಎರಡು ಬೊಂಬಾಟ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್: ಯಾವುವು?, ಏನು ವಿಶೇಷತೆ?
Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
iPhone 11: ವಿಶೇಷ ಆಫರ್​ನಲ್ಲಿ ₹17,999ಕ್ಕೆ ಆ್ಯಪಲ್ iPhone 11 64 GB ಲಭ್ಯ
Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G

ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಆಯ್ಕೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಸದ್ಯ ಈ ಹೊಸ ಆಂಡ್ರಾಯ್ಡ್‌ಗಾಗಿ ಬೀಟಾ ಬಿಲ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಪರೀಕ್ಷಿಸಲ್ಪಡುವ ನಿರೀಕ್ಷೆಯಿದೆ. ಇದು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಮೆಸೇಜ್ ಬಂದರೆ ನಂಬರ್ ಕಾಣಿಸುವುದಿಲ್ಲ:

ವಾಟ್ಸ್​ಆ್ಯಪ್ ಮತ್ತೊಂದು ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ. ಅಂದರೆ ಬಳಕೆದಾರರು ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್‌ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಈ ಫೀಚರ್​ನ ಮತ್ತೊಂದು ಉಪಯೋಗ ಎಂದರೆ ದೊಡ್ಡ ಗ್ರೂಪ್‌ ಇದ್ದಾಗ ಅದರಲ್ಲಿ ಅನೇಕ ಸದಸ್ಯರು ಇರುತ್ತರೆ. ಆದರೆ, ಈ ಎಲ್ಲರ ಹೆಸರುಗಳನ್ನು ನೆನಪಿನಲ್ಲಿ ಇಡುವುದು ಅಥವಾ ಎಲ್ಲರ ಸಂಖ್ಯೆಗಳನ್ನು ಸೇವ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೀಗ ವಾಟ್ಸ್​ಆ್ಯಪ್ ಪರಿಚಯಿಸಲಿರುವ ಈ ಹೊಸ ಫೀಚರ್​ನಲ್ಲಿ ಸಂಖ್ಯೆಯ ಬದಲಿಗೆ ಹೆಸರನ್ನು ತೋರಿಸಲಾಗುವುದರಿಂದ ಯಾರು ಮೆಸೆಜ್‌ ಕಳುಹಿಸಿದ್ದಾರೆ ಎಂಬುದನ್ನು ಸುಲಭವಗಿ ಕಂಡುಹಿಡಿಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us