ಕೆಲವೊಂದು ಬಾರಿ ನಾವು ನಮಗೆ ಸಹಾಯ ಮಾಡಲು ಯಾರೂ ಇಲ್ಲದಂತಹ ಪರಿಸ್ಥಿತಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತೇವೆ. ಈ ಸಂದರ್ಭ ಕೈಯಲ್ಲಿ ಫೋನ್ (Phone) ಇದ್ದರೆ ಅದರಿಂಗ ಆಗುವ ಪ್ರಯೋಜನ ಅಷ್ಟಿಟ್ಟಲ್ಲ. ಯಾವುದೇ ಅಪಾಯಕಾರಿ ಪರಿಸ್ಥಿತಿಯಲ್ಲಿ ಸ್ಮಾರ್ಟ್ಫೋನ್ (Smartphone) ನಿಮಗೆ ಸಹಾಯ ಮಾಡುವಂತಹ ವೈಶಿಷ್ಟ್ಯದ (Features) ಬಗ್ಗೆ ಇಂದು ನಾವು ಹೇಳುತ್ತೇವೆ. ಮನೆಯಲ್ಲಿ ನೀವು ಒಬ್ಬರೇ ಇದ್ದಾಗ ಕಳ್ಳರು ಬಂದರೆ, ಸ್ಮಾರ್ಟ್ಫೋನ್ನಲ್ಲಿರುವ ಜಸ್ಟ್ ಈ ಒಂದು ಬಟನ್ ಒತ್ತಿದರೆ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ಸಹಾಯಕ್ಕಾಗಿ ತಕ್ಷಣ ಆಗಮಿಸುತ್ತಾರೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀಡಲಾದ ಪವರ್ ಬಟನ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಒತ್ತುವ ಮೂಲಕ ಎಮರ್ಜೆನ್ಸಿ SOS ಅನ್ನು ಸಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯವು ಫೋನ್ ಅನ್ನು ಅನ್ಲಾಕ್ ಮಾಡದೆಯೇ ತುರ್ತು ಸಮಯದಲ್ಲಿ ಕರೆ ಮಾಡಲು ನಿಮಗೆ ಅನುಮತಿಸುತ್ತದೆ. ಕಳ್ಳರು ಮನೆಗೆ ಪ್ರವೇಶಿಸಿದ್ದರೆ ಅಥವಾ ನೀವು ಯಾವುದಾದರೂ ಅಜ್ಞಾತ ಸ್ಥಳದಲ್ಲಿ ಕಳೆದುಹೋದರೆ, ಈ ವೈಶಿಷ್ಟ್ಯವು ಯಾವಾಗಲೂ ನಿಮಗೆ ಸಹಾಯ ಮಾಡುತ್ತದೆ.
Tech Tips: ಸ್ಮಾರ್ಟ್ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
ಎಮರ್ಜೆನ್ಸಿ SOS ವೈಶಿಷ್ಟ್ಯದಲ್ಲಿ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಸಂಖ್ಯೆಯನ್ನು ನೀವು ಸೇರಿಸಬಹುದು. ಇದರಿಂದ ನೀವು ಅಪಾಯದ ಸಮಯದಲ್ಲಿ ಈ ಜನರಿಂದ ಸಹಾಯ ಪಡೆಯಬಹುದು. ನೀವು ಈ ಬಟನ್ ಅನ್ನು ಒತ್ತಿದಾಗಲೆಲ್ಲಾ, ಆಯ್ಕೆಮಾಡಿದ ಸಂಪರ್ಕಗಳಿಗೆ ಕರೆ ಹೋಗುತ್ತದೆ. ಇದಕ್ಕಾಗಿ ಕನಿಷ್ಠ ಒಂದು ಕಾಂಟೆಕ್ಟ್ ಅನ್ನು ಸೇರಿಸುವುದು ಅವಶ್ಯಕ.
ಈ ಆಯ್ಕೆಯ ಮೂಲಕ ನೀವು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಅವುಗಳನ್ನು ಸಕ್ರಿಯಗೊಳಿಸಬಹುದು. ಪವರ್ ಬಟನ್ ಅಥವಾ ವಾಲ್ಯೂಮ್ ಬಟನ್ ಒತ್ತಿದಾಗ ಮೊದಲು ಅಲಾರಾಂ ಸೌಂಡ್ ಬರುತ್ತದೆ ಮತ್ತು ನಂತರ ನೀವು ಆಯ್ಕೆ ಮಾಡಿದ ಸಂಖ್ಯೆಗೆ ತುರ್ತು ಕರೆ ಹೋಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ