ಇಂದು ಮಾರುಕಟ್ಟೆಯಲ್ಲಿ ವಾರಕ್ಕೆ ಕನಿಷ್ಠ ಎಂದರೂ ಮೂರರಿಂದ ನಾಲ್ಕು ಸ್ಮಾರ್ಟ್‌ಫೋನ್‌ಗಳು (Smartphones) ಬಿಡುಗಡೆ ಆಗುತ್ತದೆ. ಇವುಗಳು ಕಡಿಮೆ ಬೆಲೆಗೆ ಲಭ್ಯವಿರುವುದರಿಂದ ಭರ್ಜರಿ ಸೇಲ್ ಕೂಡ ಆಗುತ್ತದೆ. ಆದರೆ, ಹೆಚ್ಚಿನವರು ಸ್ಮಾರ್ಟ್‌ಫೋನ್ ಖರೀದಿಸಲು ಹೋದಾಗ, ಮೊದಲು ಪರಿಶೀಲಿಸುವುದು ಅದರ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು RAM. ಆದಾಗ್ಯೂ, ಈ ವೈಶಿಷ್ಟ್ಯಗಳ ಹೊರತಾಗಿ, ಸ್ಮಾರ್ಟ್‌ಫೋನ್‌ನಲ್ಲಿ ನೀವು ಖಂಡಿತವಾಗಿಯೂ ಗಮನಿಸಬೇಕಾದ ಕೆಲವು ವಿಷಯಗಳಿವೆ ಎಂದು ತಿಳಿದಿದೆಯೇ?. ನೀವು ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಶೀಲಿಸದೆ ಖರೀದಿಸಿದರೆ ಅದು ವ್ಯರ್ಥ ಎಂದೇ ಹೇಳಬಹುದು.
ಇಂದು ನಾವು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಪರಿಶೀಲಿಸಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ.
ಯಾವುದೇ ಮೊಬೈಲ್ ಫೋನ್ ಅನ್ನು SAR (Specific Absorption Rate) ಅಂದರೆ ಫೋನ್‌ನಿಂದ ಹೊರಬರುವ ವಿಕಿರಣದ ಮೂಲಕ ಅಳೆಯಲಾಗುತ್ತದೆ. ಯಾವ ಫೋನ್‌ನ SAR ಮೌಲ್ಯ ಹೆಚ್ಚಾಗಿರುತ್ತದೆ, ಅದು ಹೆಚ್ಚು ಅಪಾಯಕಾರಿ. ಭಾರತದಲ್ಲಿ ಮಾರಾಟವಾಗುವ ಫೋನ್‌ಗಳಿಗೆ SAR ಮೌಲ್ಯವನ್ನು ಪ್ರತಿ ಕಿಲೋಗ್ರಾಂಗೆ ಗರಿಷ್ಠ 1.6 ವ್ಯಾಟ್‌ಗಳಿಗೆ ನಿಗದಿಪಡಿಸಲಾಗಿದೆ.
ಬಜೆಟ್ ಬೆಲೆ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ವಿವೋ Y78t ಸ್ಮಾರ್ಟ್‌ಫೋನ್
ನಿಮ್ಮ ಫೋನ್‌ನಲ್ಲಿ *#07# ಅನ್ನು ಡಯಲ್ ಮಾಡುವ ಮೂಲಕ ಈ ಮೊಬೈಲ್ನ SAR ಮೌಲ್ಯವನ್ನು ತಿಳಿಯಬಹುದು. ನಿಮ್ಮ ಫೋನ್‌ನ SAR ಮೌಲ್ಯವು ನಿಗದಿತ ದರಕ್ಕಿಂತ ಹೆಚ್ಚಿದ್ದರೆ ಅದು ಅಪಾಯಕಾರಿಯಾಗಬಹುದು.
ಹೆಚ್ಚಿನ ಜನರಿಗೆ ಸ್ಮಾರ್ಟ್‌ಫೋನ್‌ನ ರಿಫ್ರೆಶ್ ದರದ ಬಗ್ಗೆ ತಿಳಿದಿರುವುದಿಲ್ಲ. ಸ್ಮಾರ್ಟ್‌ಫೋನ್ ಖರೀದಿಸುವ ಮೊದಲು ರಿಫ್ರೆಶ್ ದರವನ್ನು ಪರಿಶೀಲಿಸುವವರ ಸಂಖ್ಯೆ ತೀರಾ ಕಡಿಮೆ. ಆದರೆ ನೀವು ಇದನ್ನು ಪರಿಶೀಲಿಸದೆಯೇ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ. ಇದರ ಹಿಂದೆ ದೊಡ್ಡ ಕಾರಣವಿದೆ. ರಿಫ್ರೆಶ್ ದರವು ಸ್ಮಾರ್ಟ್‌ಫೋನ್‌ನ ಡಿಸ್ ಪ್ಲೇ ವೇಗವನ್ನು ಪ್ರತಿಬಿಂಬಿಸುತ್ತದೆ.
ರಿಫ್ರೆಶ್ ದರವು ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಎಷ್ಟು ಮೃದುವಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ನೀವು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಿದಾಗ, ಅದರ ರಿಫ್ರೆಶ್ ದರವು 60 ರಿಂದ 90 Hz ವರೆಗೆ ಇರುತ್ತದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಈ ರಿಫ್ರೆಶ್ ದರವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.
ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದಾಗ, ಅದರ ರಿಫ್ರೆಶ್ ದರವು 90 ರಿಂದ 120 Hzನಡುವೆ ಇರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಇದಕ್ಕಿಂತ ಹೆಚ್ಚಿನ ರಿಫ್ರೆಶ್ ದರದ ಸ್ಮಾರ್ಟ್‌ಫೋನ್‌ಗಳು ಸಹ ಬಂದಿವೆ. ಆದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈಗ ರಿಲೀಸ್ ಆಗುತ್ತಿರುವುದು 120 Hz ನಲ್ಲಿ. ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಿದ್ದರೆ ಮತ್ತು ಅದರ ರಿಫ್ರೆಶ್ ದರವು 60 Hz ಆಗಿದ್ದರೆ, ನಿಮ್ಮ ಹಣವು ವ್ಯರ್ಥವಾಗುತ್ತದೆ. ಆದ್ದರಿಂದ ಕನಿಷ್ಠ 90 Hz ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಿ.
ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದರೆ, ಕನಿಷ್ಠ 60 ರಿಂದ 80 ವ್ಯಾಟ್‌ಗಳ ಚಾರ್ಜಿಂಗ್ ಬೆಂಬಲ ಇರಬೇಕು. ಇದಕ್ಕಿಂತ ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಬಯಸಿದರೆ, ಅದನ್ನು ಚಾರ್ಜ್ ಮಾಡಲು 1 ಗಂಟೆಯಿಂದ ಒಂದೂವರೆ ಗಂಟೆ ತೆಗೆದುಕೊಳ್ಳಬಹುದು. 60 ರಿಂದ 80 ವ್ಯಾಟ್‌ಗಳ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅರ್ಧ ಗಂಟೆಯಿಂದ ಕಾಲು ಗಂಟೆಯವರೆಗೆ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ