AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಬೇರೆಯವರು ನಿಮಗೆ ಕಾಲ್ ಮಾಡುವಾಗ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಬರಬೇಕಾ?: ಇಲ್ಲಿದೆ ಟ್ರಿಕ್

Name caller tune: ನೀವು ನಿಮ್ಮ ಫೋನಿನ ಕಾಲರ್ ಟ್ಯೂನ್ ಅನ್ನು ಬದಲಾಯಿಸಲು ಬಯಸಿದರೆ ಈ ಸ್ಟೋರಿ ನಿಮಗಾಗಿ. ನಿಮ್ಮ ಹೆಸರನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಬಹುದು. ಈ ವೈಶಿಷ್ಟ್ಯವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಗೊತ್ತಿಲ್ಲದವರು ತಮ್ಮ ಹೆಸರಿನ ಕಾಲರ್ ಟ್ಯೂನ್ ಹೊಂದಿಸುವ ಸುಲಭ ಪ್ರಕ್ರಿಯೆಯನ್ನು ಇಲ್ಲಿ ಓದಬಹುದು.

Tech Tips: ಬೇರೆಯವರು ನಿಮಗೆ ಕಾಲ್ ಮಾಡುವಾಗ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಬರಬೇಕಾ?: ಇಲ್ಲಿದೆ ಟ್ರಿಕ್
Caller Tune
Vinay Bhat
|

Updated on: Mar 01, 2024 | 12:39 PM

Share

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ಮಾರ್ಟ್​ಫೋನ್‌ಗಳಿಗೆ (Smartphones) ಹೆಚ್ಚು ಅಡಿಕ್ಟ್ ಆಗಿದ್ದಾರೆ. ದಿನದ ಹೆಚ್ಚಿನ ಸಮಯ ಫೋನನ್ನು ಉಪಯೋಗಿಸುತ್ತಲೇ ಇರುತ್ತಾರೆ. ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಸಂಸ್ಥೆ ಮತ್ತು ಮೊಬೈಲ್ ಕಂಪನಿಗಳು ಕೆಲವು ಹೊಸ ನವೀಕರಣಗಳು ಅಥವಾ ವೈಶಿಷ್ಟ್ಯಗಳು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇದರಲ್ಲಿ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಫೀಚರ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್​ನಲ್ಲಿ ಕೇಳಿಸುತ್ತದೆ.

ಈ ವೈಶಿಷ್ಟ್ಯವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಗೊತ್ತಿಲ್ಲದವರು ತಮ್ಮ ಹೆಸರಿನ ಕಾಲರ್ ಟ್ಯೂನ್ ಹೊಂದಿಸುವ ಸುಲಭ ಪ್ರಕ್ರಿಯೆಯನ್ನು ಇಲ್ಲಿ ಓದಬಹುದು.

ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಹೊಂದಿಸಲು ನೀವು ಹೆಚ್ಚು ಕಷ್ಟಪಡಬೇಕಿಲ್ಲ. ಇದಕ್ಕಾಗಿ ನೀವು ಕೇವಲ ಜಿಯೋ ಬಳಕೆದಾರರಾಗಿರಬೇಕು ಮತ್ತು ನಿಮ್ಮ ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿರುವುದು ಅವಶ್ಯಕ.

84 ದಿನಗಳ ವ್ಯಾಲಿಡಿಟಿ, ಅನ್ಲಿಮಿಟೆಡ್ ಡೇಟಾ, OTT ಕೂಡ ಫ್ರೀ: ಇದು ರಿಲಯನ್ಸ್ ಜಿಯೋದ ಬಂಪರ್ ಪ್ಲಾನ್

ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಈ ರೀತಿ ಆಯ್ಕೆ ಮಾಡಿ:

  • MyJio ಅಪ್ಲಿಕೇಶನ್‌ ಅನ್ನು ತೆರೆದು ಮೆನೂ ಆಯ್ಕೆಯಲ್ಲಿ ತೋರಿಸಿರುವ JioTunes ಮೇಲೆ ಕ್ಲಿಕ್ ಮಾಡಿ.
  • ನಂತರ, ಜಿಯೋ ಟ್ಯೂನ್ಸ್​ನ ಪೇಜ್ ನಿಮ್ಮ ಮುಂದೆ ತೆರೆಯುತ್ತದೆ, ಇಲ್ಲಿ ನೇಮ್ ಜಿಯೋ ಟ್ಯೂನ್ಸ್, ಆರ್ಟಿಸ್ಟ್ ಜಿಯೋ ಟ್ಯೂನ್ಸ್ ಮತ್ತು ಟಾಪ್ ಜಿಯೋ ಟ್ಯೂನ್ಸ್ ಎಂದ ಮೂರು ಆಯ್ಕೆ ಕಾಣಿಸುತ್ತದೆ.
  • ಇಲ್ಲಿ ನೀವು ನೇಮ್ JioTune ಪುಟ ತೆರೆದ ನಂತರ, ನಿಮ್ಮ ಹೆಸರನ್ನು ಬರೆದು ಸರ್ಚ್ ಕೊಡಬೇಕು. ಆಗ ನಿಮ್ಮ ಹೆಸರಿರುವ ಅನೇಕ ಪಟ್ಟಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಹೆಸರಿನ ಜಿಯೋ ಟ್ಯೂನ್ ಬರುತ್ತದೆ.
  • ವಿಭಿನ್ನ ಧ್ವನಿಗಳು ಮತ್ತು ಭಾಷೆಗಳಲ್ಲಿ ನಿಮ್ಮ ಹೆಸರನ್ನು ಟ್ಯೂನ್ ಮಾಡಲು ಇಲ್ಲಿ ನೀವು ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ಆಯ್ಕೆಯ ಟ್ಯೂನ್ ಅನ್ನು ಸೆಲೆಕ್ಟ್ ಮಾಡಿ ಮತ್ತು ಸೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆಯಿತು.
  • ಈ ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಯಾರಾದರೂ ನಿಮ್ಮ ಫೋನ್‌ಗೆ ಕರೆ ಮಾಡಿದಾಗ, ಅವರು ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಕೇಳುತ್ತಾರೆ.
  • ಇದು ಬೇಡ ಎಂದಾದಲ್ಲಿ ಡಿ-ಆ್ಯಕ್ಟಿವೆಟ್ ಮಾಡುವ ಆಯ್ಕೆ ಕೂಡ ಅಲ್ಲೇ ನೀಡಲಾಗಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ