ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ಮಾರ್ಟ್ಫೋನ್ಗಳಿಗೆ (Smartphones) ಹೆಚ್ಚು ಅಡಿಕ್ಟ್ ಆಗಿದ್ದಾರೆ. ದಿನದ ಹೆಚ್ಚಿನ ಸಮಯ ಫೋನನ್ನು ಉಪಯೋಗಿಸುತ್ತಲೇ ಇರುತ್ತಾರೆ. ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಸಂಸ್ಥೆ ಮತ್ತು ಮೊಬೈಲ್ ಕಂಪನಿಗಳು ಕೆಲವು ಹೊಸ ನವೀಕರಣಗಳು ಅಥವಾ ವೈಶಿಷ್ಟ್ಯಗಳು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇದರಲ್ಲಿ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಫೀಚರ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್ನಲ್ಲಿ ಕೇಳಿಸುತ್ತದೆ.
ಈ ವೈಶಿಷ್ಟ್ಯವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಗೊತ್ತಿಲ್ಲದವರು ತಮ್ಮ ಹೆಸರಿನ ಕಾಲರ್ ಟ್ಯೂನ್ ಹೊಂದಿಸುವ ಸುಲಭ ಪ್ರಕ್ರಿಯೆಯನ್ನು ಇಲ್ಲಿ ಓದಬಹುದು.
ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಹೊಂದಿಸಲು ನೀವು ಹೆಚ್ಚು ಕಷ್ಟಪಡಬೇಕಿಲ್ಲ. ಇದಕ್ಕಾಗಿ ನೀವು ಕೇವಲ ಜಿಯೋ ಬಳಕೆದಾರರಾಗಿರಬೇಕು ಮತ್ತು ನಿಮ್ಮ ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿರುವುದು ಅವಶ್ಯಕ.
84 ದಿನಗಳ ವ್ಯಾಲಿಡಿಟಿ, ಅನ್ಲಿಮಿಟೆಡ್ ಡೇಟಾ, OTT ಕೂಡ ಫ್ರೀ: ಇದು ರಿಲಯನ್ಸ್ ಜಿಯೋದ ಬಂಪರ್ ಪ್ಲಾನ್
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ