ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಬಳಕೆ ಅನಿವಾರ್ಯವಾಗಿದೆ. ಸಿಮ್ ಕಾರ್ಡ್‌ನಿಂದ ಹಿಡಿದು ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಮುಖ್ಯ. ಎಲ್ಲಿಗೆ ಹೋದರೂ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್‌ನ ಅಗತ್ಯ ಹೆಚ್ಚಾದಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.
ಬಳಕೆದಾರರು ನೇರವಾಗಿ ಆಧಾರ್ ಅನ್ನು ಪ್ರವೇಶಿಸಲು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ. ಈ ಕ್ರಮದಲ್ಲಿ ಎಂ ಆಧಾರ್ ಎಂಬ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಈ ಅಪ್ಲಿಕೇಶನ್‌ನ ಉಪಯೋಗವೇನು? ಇದರಲ್ಲಿ ಆಧಾರ್ ಕಾರ್ಡ್ ನಮೂದಿಸುವುದು ಹೇಗೆ.? ಈ ರೀತಿಯ ಸಂಪೂರ್ಣ ವಿವರಗಳು ಇಲ್ಲಿದೆ.
ಮೋಟೋರೊಲಾದಿಂದ ಭಾರತದಲ್ಲಿ 2024ರ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
* ಮೊದಲು ಗೂಗಲ್ ಪ್ಲೇಸ್ಟೋರ್ ನಿಂದ mAadhaar ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ತೆರೆದ ನಂತರ, ‘ರಿಜಿಸ್ಟರ್ ಆಧಾರ್’ ಕ್ಲಿಕ್ ಮಾಡಿ.
* ಅದರ ನಂತರ ಪ್ರೊಫೈಲ್ ಅನ್ನು ಪ್ರವೇಶಿಸಲು ನಾಲ್ಕು ಅಂಕಿಯ ಪಿನ್ ಅಥವಾ ಪಾಸ್‌ವರ್ಡ್ ಅನ್ನು ರಚಿಸಬೇಕು.
* ಇದಕ್ಕಾಗಿ ನೀವು ಮೊದಲು ಆಧಾರ್ ಸಂಖ್ಯೆಯ ವಿವರಗಳನ್ನು ನಮೂದಿಸಬೇಕು. ನಂತರ, ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿದರೆ, OTP ನೋಂದಾಯಿತ ಸಂಖ್ಯೆಗೆ ಹೋಗುತ್ತದೆ.
* ಮೊಬೈಲ್ ಫೋನ್‌ನಲ್ಲಿ OTP ಬಂದ ತಕ್ಷಣ, ಅದು ಸ್ವಯಂಚಾಲಿತವಾಗಿ ತುಂಬುತ್ತದೆ. ನೋಂದಣಿ ಪೂರ್ಣಗೊಂಡ ತಕ್ಷಣ, ಆಯಾ ಬಳಕೆದಾರರ ವಿವರಗಳನ್ನು ಡಿಸ್ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ.
* ಮೆನುವಿನಲ್ಲಿ ಕೆಳಗೆ ಕಾಣಿಸುವ ‘My Aadhaar’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಪಿನ್ ಅಥವಾ ಪಾಸ್‌ವರ್ಡ್ ನಮೂದಿಸಿ. ಡ್ಯಾಶ್‌ಬೋರ್ಡ್ ತೆರೆಯುತ್ತದೆ. ಇದರಲ್ಲಿ ನಿಮಗೆ ಅಗತ್ಯವಿರುವ ಸೇವೆಗಳನ್ನು ನೀವು ಬಳಸಬಹುದು.
* ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನೀವು ಆಫ್‌ಲೈನ್ ಮೋಡ್‌ನಲ್ಲಿ ವೀಕ್ಷಿಸಬಹುದು. ಒಂದೇ ಫೋನ್‌ನಲ್ಲಿ ಐದು ಕುಟುಂಬದ ಸದಸ್ಯರ ಆಧಾರ್ ವಿವರಗಳನ್ನು ಸಂಗ್ರಹಿಸಬಹುದು.
* ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಅನ್ನು ನವೀಕರಿಸಬಹುದು.
* ವರ್ಚುವಲ್ ಐಡಿ ರಚಿಸಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನೇರವಾಗಿ ಫೋನ್‌ನಲ್ಲಿ ಲಾಕ್ ಮಾಡಬಹುದು ಮತ್ತು ಅನ್‌ಲಾಕ್ ಮಾಡಬಹುದು. ಬಯೋಮೆಟ್ರಿಕ್ ಲಾಕ್ ಮಾಡಬಹುದು. ಇವುಗಳೊಂದಿಗೆ ಬ್ಯಾಂಕ್, ಆಧಾರ್ ಲಿಂಕ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ನೀವು ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ