Tech Tips: ನೀವು ಹೋಗುತ್ತಿರುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2025 | 10:48 AM

ಭಾರತೀಯ ರೈಲ್ವೇ ಯಾವಾಗಲೂ ತನ್ನ ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮ ಫೋನ್ ಬಳಸುವುದು ಮಾಮೂಲಿ. ಆದರೆ ಅನೇಕ ಬಾರಿ ಅಜಾಗರೂಕತೆಯಿಂದ ಪ್ರಯಾಣಿಸುವಾಗ ರೈಲಿನಿಂದ ಮೊಬೈಲ್, ಪರ್ಸ್ ಅಥವಾ ವಾಚ್‌ನಂತಹ ಬೆಲೆಬಾಳುವ ವಸ್ತುಗಳು ಬೀಳುತ್ತವೆ. ಅಂತಹ ಸಂದರ್ಭಗಳಲ್ಲಿ ಜನರು ತುಂಬಾ ಚಿಂತಿತರಾಗುತ್ತಾರೆ. ಆಗ ಏನು ಮಾಡಬೇಕು?.

Tech Tips: ನೀವು ಹೋಗುತ್ತಿರುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೆಯು ಆರಾಮದಾಯಕ ಮತ್ತು ದೂರದ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಜನರು ದೂರದೂರಿಗೆ ಪ್ರಯಾಣಿಸುವಾಗ ರೈಲಿನಲ್ಲಿ ಹೋಗಲು ಬಯಸುತ್ತಾರೆ. ಸುಮಾರು ಗಂಟೆಗಳ ಕಾಲ ಟ್ರೈನ್​ನಲ್ಲಿ ಇರಬೇಕಾಗಿರುವುದರಿಂದ ಜನರು ತಮ್ಮ ಸಮಯವನ್ನು ಕಳೆಯಲು ಮೊಬೈಲ್ ಬಳಸುತ್ತಾ ಇರುತ್ತಾರೆ. ಆದರೆ ಚಲಿಸುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಗತಿ?.

ಅನೇಕ ಬಾರಿ ಅಜಾಗರೂಕತೆಯಿಂದ ಪ್ರಯಾಣಿಸುವಾಗ ರೈಲಿನಿಂದ ಮೊಬೈಲ್, ಪರ್ಸ್ ಅಥವಾ ವಾಚ್‌ನಂತಹ ಬೆಲೆಬಾಳುವ ವಸ್ತುಗಳು ಬೀಳುತ್ತವೆ. ಅಂತಹ ಸಂದರ್ಭಗಳಲ್ಲಿ ಜನರು ತುಂಬಾ ಚಿಂತಿತರಾಗುತ್ತಾರೆ. ಸಾಮಾನ್ಯ ಜನರು ನನ್ನ ಮೊಬೈಲ್ ಕಳೆದುಹೋಯಿತು ಎಂದು ಮೌನವಾಗಿ ಕುಳಿತು ಬಿಡುತ್ತಾರೆ. ಕೆಲವು ಜನರು ರೈಲಿನ ಚೈನ್ ಅನ್ನು ಎಳೆಯುತ್ತಾರೆ. ಆದರೆ ಈ ವಿಧಾನವು ಸರಿಯಾಗಿದೆಯೇ?. ನಿಮ್ಮ ಫೋನ್ ಅನ್ನು ಮರಳಿ ಪಡೆಯಲು ನೀವು ಏನು ಮಾಡಬೇಕು?.

ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ:

ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್‌ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.

ಹೀಗೆ ಮಾಡಿದರೆ ರೈಲ್ವೆ ಪೊಲೀಸರಿಗೆ ನಿಮ್ಮ ಫೋನ್ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆಯ ನಂತರ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು.

ಈ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಂಪರ್ಕಿಸಬಹುದು:

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದೆ. ನೀವು ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಸಬಹುದು. ಅದೇ ರೀತಿ, GRP ಯ ಸಹಾಯವಾಣಿ ಸಂಖ್ಯೆ 1512 ಆಗಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು. ರೈಲ್ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಆಧಾರ್, ಪಾನ್ ಕಾರ್ಡ್ ಡೌನ್​ಲೋಡ್ ಮಾಡೋದು ಹೇಗೆ?

ಅಲಾರಾಂ ಚೈನ್ ಅನ್ನು ಎಳೆಯುವುದು ಸರಿಯೇ ಅಥವಾ ತಪ್ಪೇ?:

ನಿಯಮದ ಪ್ರಕಾರ ರೈಲಿನಲ್ಲಿ ಚೈನ್ ಎಳೆಯುವುದು ಅಪರಾಧ. ಆದರೆ ಕೆಲವು ಸಂದರ್ಭಗಳಲ್ಲಿ ನೀವು ಚೈನ್ ಎಳೆಯುವುದನ್ನು ಮಾಡಬಹುದು. ನಿಮ್ಮೊಂದಿಗೆ ಪ್ರಯಾಣಿಸುವ ಮಗು ಅಥವಾ ವಯಸ್ಸಾದ ವ್ಯಕ್ತಿಯು ರೈಲು ನಿಲ್ದಾಣದಲ್ಲಿ ಬಾಕಿಯಾದರೆ, ನೀವು ಚೈನ್ ಎಳೆಯಬಹುದು. ಅದೇ ಸಮಯದಲ್ಲಿ, ಅಂಗವಿಕಲ ವ್ಯಕ್ತಿಯನ್ನು ನಿಲ್ದಾಣದಲ್ಲಿ ಬಿಟ್ಟು ರೈಲು ಹೊರಟರೆ, ಅಂತಹ ಪರಿಸ್ಥಿತಿಯಲ್ಲಿ ಚೈನ್ ಎಳೆಯುವಿಕೆಯನ್ನು ಸಹ ಮಾಡಬಹುದು. ಇದೆಲ್ಲದರ ಹೊರತಾಗಿ, ರೈಲಿನಲ್ಲಿ ಬೆಂಕಿ, ದರೋಡೆ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ನೀವು ಚೈನ್ ಎಳೆಯಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ