ಭಾರತಕ್ಕೆ ಬರುತ್ತಿದೆ ಟೆಕ್ನೋ ಪೋವಾ 5 ಸರಣಿ: ಈ ಫೋನಿನ ಬ್ಯಾಕ್ ಪ್ಯಾನಲ್ ಹೇಗಿದೆ ನೋಡಿ

|

Updated on: Aug 05, 2023 | 2:14 PM

Tecno Pova 5 Series: ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಭಾರತದಲ್ಲಿ ಆಗಸ್ಟ್ 11 ರಂದು ಕಂಪನಿಯ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಸರಣಿಯ ಕುರಿತು ಟೀಸರ್ ವಿಡಿಯೋವನ್ನು ಟೆಕ್ನೋ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಭಾರತಕ್ಕೆ ಬರುತ್ತಿದೆ ಟೆಕ್ನೋ ಪೋವಾ 5 ಸರಣಿ: ಈ ಫೋನಿನ ಬ್ಯಾಕ್ ಪ್ಯಾನಲ್ ಹೇಗಿದೆ ನೋಡಿ
Tecno Pova 5g and Pova 5 Pro
Follow us on

ಪ್ರಸಿದ್ಧ ಟೆಕ್ನೋ (Tecno) ಕಂಪನಿ ಮುಂದಿನ ವಾರ ಭಾರತದಲ್ಲಿ ತನ್ನ ಹೊಸ ಟೆಕ್ನೋ ಪೋವಾ 5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಅಧಿಕೃತವಾಗಿ ಟೆಕ್ನೋ ಪೋವಾ 5 ಸರಣಿಯ (Tecno Pova 5 Series) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದು ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಫೋನನ್ನು ಒಳಗೊಂಡಿದೆ. ಭಾರತದಲ್ಲಿ ಅಮೆಜಾನ್ (Amazon) ಮೂಲಕ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ. ಟೆಕ್ನೋ ಪೋವಾ 5 ಪ್ರೊ ಫೋನಿನ ಹಿಂಭಾಗದಲ್ಲಿ ಆರ್ಕ್ ಇಂಟರ್ಫೇಸ್ ಎಲ್ಇಡಿ ಇರುವ ನಿರೀಕ್ಷೆಯಿದೆ, ಇದು ನಥಿಂಗ್ ಫೋನ್ 2 ನಿಂದ ಪ್ರೇರಿತವಾಗಿದಂತೆ ಗೋಚರಿಸುತ್ತದೆ.

ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಭಾರತದಲ್ಲಿ ಆಗಸ್ಟ್ 11 ರಂದು ಕಂಪನಿಯ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಸರಣಿಯ ಕುರಿತು ಟೀಸರ್ ವಿಡಿಯೋವನ್ನು ಟೆಕ್ನೋ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಟೆಕ್ನೋ ಪೋವಾ 5 ಸರಣಿಗಾಗಿ Amazon ತನ್ನ ಪೇಜ್​ನಲ್ಲಿ ಹೊಸ ಪುಟವನ್ನು ಲೈವ್ ಮಾಡಿದೆ.

ಭಾರತದಲ್ಲೀಗ ಅತಿ ಕಡಿಮೆ ಬೆಲೆಯ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ

ಇದನ್ನೂ ಓದಿ
ಅತಿ ಕಡಿಮೆ ಬೆಲೆಯ ಜಿಯೋಬುಕ್ ಲ್ಯಾಪ್​ಟಾಪ್ ಇಂದಿನಿಂದ ಖರೀದಿಗೆ ಲಭ್ಯ: ಏನೆಲ್ಲ ಫೀಚರ್ಸ್ ಇದೆ ನೋಡಿ
Realme 11 5G: ರಿಯಲ್​ಮಿ ಪರಿಚಯಿಸಿದೆ ಮತ್ತೊಂದು ಸೂಪರ್ ಸ್ಟೈಲಿಶ್ ಕ್ಯಾಮೆರಾ ಫೋನ್
Infinix GT 10 Pro: 8GB RAM + 256GB ಸ್ಟೋರೇಜ್ ಆವೃತ್ತಿಗೆ ₹19,999 ಇನ್ಫಿನಿಕ್ಸ್ ಫೋನ್
ಹೊಸ ವೇರಿಯೆಂಟ್​ನಲ್ಲಿ ಸ್ವದೇಶಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್‌ 5G ಬಿಡುಗಡೆ: ಬೆಲೆ ಕೇವಲ …

ಟೆಕ್ನೋದ ಈ ಹೊಸ ಫೋನಿನ ಹಿಂಭಾಗದಲ್ಲಿ ಆರ್ಕ್ ಇಂಟರ್ಫೇಸ್ LED ಅನ್ನು ಅಳವಡಿಸಲಾಗಿದೆ. ಆದಾಗ್ಯೂ, ಎರಡೂ ಸ್ಮಾರ್ಟ್‌ಫೋನ್‌ಗಳು ಈ ವೈಶಿಷ್ಟ್ಯವನ್ನು ಪಡೆದಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಎಲ್ಇಡಿ ಇಂಟರ್ಫೇಸ್ ಕರೆಗಳು, ನೋಟಿಫಿಕೇಷನ್, ಬ್ಯಾಟರಿ ಚಾರ್ಜಿಂಗ್ ಮತ್ತು ಮ್ಯೂಸಿಕ್​ಗೆ ಸಿಂಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಲೈಟ್ ಒಟ್ಟು ಸಾಫ್ಟ್, ರೇಸಿಂಗ್, ಡ್ರೀಮಿ, ಬ್ರೀತ್ ಮತ್ತು ಪಾರ್ಟಿ ಎಂಬ ಐದು ಬಣ್ಣಗಳಿಂದ ಕೂಡಿದೆಯಂತೆ.

ಟೆಕ್ನೋ ಪೋವಾ 5 ಪ್ರೊ ಇತ್ತೀಚೆಗೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ-HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ನಿಂದ ಕಾರ್ಯನಿರ್ವಹಿಸುತ್ತಿದ್ದು, Android 13-ಆಧಾರಿತ HiOS 13 ಔಟ್-ಆಫ್-ಬಾಕ್ಸ್ ಅನ್ನು ರನ್ ಮಾಡಲಾಗುತ್ತದೆ. ಕ್ಯಾಮೆರಾ ವಿಚಾರದಲ್ಲಿ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇದಲ್ಲದೆ, ಟೆಕ್ನೋ ಪೋವಾ 5 ಪ್ರೊ 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಹ್ಯಾಂಡ್ಸೆಟ್ ಡಾರ್ಕ್ ಇಲ್ಯೂಷನ್ ಮತ್ತು ಸಿಲ್ವರ್ ಫ್ಯಾಂಟಸಿ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಸೇಲ್ ಆಗುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Sat, 5 August 23