ಚೀನೀ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಟೆಕ್ನೋ ತನ್ನ ಮೊದಲ ಫ್ಲಿಪ್ ಸ್ಮಾರ್ಟ್‌ಫೋನ್, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ (Tecno Phantom V Flip) ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಆಕರ್ಷಕ ಫೋನ್ ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ನಡೆಯಲಿರುವ ಫ್ಲಿಪ್ ಇನ್ ಸ್ಟೈಲ್ ಟೆಕ್ನೋ ಫ್ಲ್ಯಾಗ್‌ಶಿಪ್ ಪ್ರಾಡಕ್ಟ್ ಲಾಂಚ್ 2023 ಈವೆಂಟ್‌ನಲ್ಲಿ ಅನಾವರಣಗೊಳ್ಳಲಿದೆ. ಈ ಬಗ್ಗೆ ಸ್ವತಃ ಕಂಪನಿ ಖಚಿತಪಡಿಸಿದೆ. ಅಧಿಕೃತ ಬಿಡುಗಡೆ ಆಗುವುದಕ್ಕೂ ಮುನ್ನ ಈ ಫೋನಿನ ಕೆಲವು ವಿವರಗಳು ಸೋರಿಕೆ ಆಗಿದೆ.
Alibaba.com ಎಂಬ ಚೀನೀ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಫೋನಿನ ಕವರ್ ಮಾರಾಟ ಕಾಣುತ್ತಿದೆ. ಈ ಕವರ್ ಮೂಲಕ ಫೋನ್‌ನ ವಿನ್ಯಾಸ ತಿಳಿದುಬಂದಿದೆ. ಈ ಹಿಂದೆ ಬಿಡುಗಡೆ ಆದ ಫ್ಲಿಪ್ ಫೋನ್‌ಗಳಿಗಿಂತ ಭಿನ್ನವಾಗಿ, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಹೊರಗಿನ ಕವರ್‌ನಲ್ಲಿ ರೌಂಡ್ ಡಿಸ್ ಪ್ಲೇಯನ್ನು ಹೊಂದಿರುವಂತೆ ಕಾಣಿಸುತ್ತಿದೆ.
ಸಖತ್ ಸೈಲಿಶ್ ಆಗಿರುವ ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್
ವೃತ್ತಾಕಾರದ ಡಿಸ್ ಪ್ಲೇ ಜೊತೆಗೆ ಸುತ್ತಲೂ ಎರಡು ಹಿಂಬದಿಯ ಕ್ಯಾಮೆರಾಗಳು ಮತ್ತು LED ಫ್ಲ್ಯಾಶ್ ಅನ್ನು ನೀಡಲಾಗಿದೆ. ಫ್ಲಿಪ್ ತೆರೆದರೆ, ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ ಪ್ಲೇ ಇದೆ. ಈ ಫೋನ್ ಗೂಗಲ್ ಪ್ಲೇ ಕನ್ಸೋಲ್ ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆ AD11 ನೊಂದಿಗೆ ಕಾಣಿಸಿಕೊಂಡಿದೆ. ಈ ಪಟ್ಟಿಯ ಪ್ರಕಾರ, ಇದು 8GB RAM ಅನ್ನು ಹೊಂದಿರಬಹುದು ಮತ್ತು ಆಂಡ್ರಾಯ್ಡ್ 13 ನೊಂದಿಗೆ ಬರಬಹುದು ಎನ್ನಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ARM Mali G77 GPU ನೊಂದಿಗೆ ಸೇರಿಸಲಾಗಿದೆ.
ಡಿಸ್ ಪ್ಲೇ ವಿಷಯಕ್ಕೆ ಬಂದರೆ, 1,080 x 2,640 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 480ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಪೂರ್ಣ-HD+ ಡಿಸ್ ಪ್ಲೇಯನ್ನು ನಿರೀಕ್ಷಿಸಲಾಗಿದೆ. ಇದರ ಹಿಂಭಾಗದಲ್ಲಿ 64-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. 4,000mAh ಬ್ಯಾಟರಿ ಇರುವ ಸಾಧ್ಯತೆಯಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ