Tecno Pop 5 LTE: ಅತಿ ಕಡಿಮೆ ಬೆಲೆಯ ಟೆಕ್ನೋ ಪಾಪ್‌ 5 LTE ಫೋನ್ ಮೊದಲ ಸೇಲ್: ಇದರ ಬೆಲೆ ಕೇವಲ 6,299 ರೂ.

ಅಮೆಜಾನ್‌ ಇಂಡಿಯಾ ಮೂಲಕ ಇಂದಿನಿಂದ ಪ್ರಾರಂಭವಾಗಿರುವ ಅಮೆಜಾನ್‌ (Amazon) ವಿಶೇಷ ಸೇಲ್‌ನಲ್ಲಿ ಟೆಕ್ನೋ ಪಾಪ್‌ 5 LTE ಫೋನ್ ಸೇಲ್ ಕಾಣುತ್ತಿದೆ.

Tecno Pop 5 LTE: ಅತಿ ಕಡಿಮೆ ಬೆಲೆಯ ಟೆಕ್ನೋ ಪಾಪ್‌ 5 LTE ಫೋನ್ ಮೊದಲ ಸೇಲ್: ಇದರ ಬೆಲೆ ಕೇವಲ 6,299 ರೂ.
Tecno Pop 5 LTE
Edited By:

Updated on: Jan 16, 2022 | 2:27 PM

ಭಾರತದ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಟೆಕ್ನೋ ಕಂಪನಿ ಅಗ್ಗದ ಬೆಲೆಗೆ ಹೊಸ ಹೊಸ ಟೆಕ್ನೋ ಪಾಪ್‌ 5 ಎಲ್​ಟಿಇ (Tecno Pop 5 LTE) ಫೋನನ್ನು ಲಾಂಚ್ ಮಾಡಿತ್ತು. ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌, 5,000mAh ಸಾಮರ್ಥ್ಯದ ಬ್ಯಾಟರಿ, ಡಾಟ್‌ ನಾಚ್‌ ವಿನ್ಯಾಸದ ಡಿಸ್ ಪ್ಲೇ ಸೇರಿದಂತೆ ಆಕರ್ಷಕವಾಗಿರುವ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯವಿದೆ. ಅಮೆಜಾನ್‌ ಇಂಡಿಯಾ ಮೂಲಕ ಇಂದಿನಿಂದ ಪ್ರಾರಂಭವಾಗಿರುವ ಅಮೆಜಾನ್‌ (Amazon) ವಿಶೇಷ ಸೇಲ್‌ನಲ್ಲಿ ಸೇಲ್ ಕಾಣುತ್ತಿದೆ. ಈ ಸ್ಮಾರ್ಟ್‌ಫೋನ್ ಡೀಪ್‌ ಸೀ ಲ್ಯೂಸ್ಟರ್, ಐಸ್‌ ಬ್ಲೂ ಮತ್ತು Turquoise Cyan ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಟೆಕ್ನೋ ಪಾಪ್ 5 LTE ಸ್ಮಾರ್ಟ್‌ಫೋನ್‌ 720×1,560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ HD+ IPS LCD ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಡಾಟ್ ನಾಚ್ ಡಿಸ್‌ಪ್ಲೇ ಆಗಿದ್ದು, 480 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಹೊಂದಿದೆ. ಮಿಡಿಯಾ ಟೆಕ್ ಆಕ್ಟಾ-ಕೋರ್ 12nm ಹೀಲಿಯೊ A25 ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 Go-ಆಧಾರಿತ HiOS 7.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ f/2.2 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ f/2.4 ಲೆನ್ಸ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ f/2.0 ಲೆನ್ಸ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಮೈಕ್ರೋ ಸ್ಲಿಟ್ ಫ್ಲ್ಯಾಶ್‌ಲೈಟ್ ಹೊಂದಿದೆ.

ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v4.2, GPS, FM ರೇಡಿಯೋ, 3.5mm ಹೆಡ್‌ಫೋನ್ ಜ್ಯಾಕ್, ಮೈಕ್ರೋ-USB ಪೋರ್ಟ್, Wi-Fi 802.11 b/g/n, GPRS, 4G LTE ಯನ್ನು ಬೆಂಬಲಿಸಲಿದೆ. ಈ ಫೋನ್‌ ಹಿಂದಿ, ಬೆಂಗಾಲಿ, ಉರ್ದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 14 ಭಾರತೀಯ ಭಾಷೆಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ ಕಿಡ್ಸ್ ಮೋಡ್, ಸಾಮಾಜಿಕ, ಟರ್ಬೊ, ಡಾರ್ಕ್ ಥೀಮ್‌ಗಳು, ಪೇರೆಂಟ್‌ ಕಂಟ್ರೋಲ್‌, ಡಿಜಿಟಲ್ ಯೋಗಕ್ಷೇಮ, ಗೆಸ್ಚರ್ ಕಾಲ್ ಪಿಕ್ಕರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ಬೆಲೆ 6,299 ರೂ. ಆಗಿದೆ.

Amazon Great Republic Day Sale: ನಾಳೆಯಿಂದ ಅಮೇಜಾನ್​ನಲ್ಲಿ ಶುರುವಾಗಲಿದೆ ಹೊಸ ಮೇಳ: ಈ ಆಫರ್ ಮಿಸ್ ಮಾಡ್ಲೇ ಬೇಡಿ