Tecno Pop 5X: ಶಾಕಿಂಗ್: ಆಂಡ್ರಾಯ್ಡ್‌ 10 OS ಬೆಂಬಲವಿರುವ ಹೊಸ ​ಫೋನ್ ಬಿಡುಗಡೆ ಮಾಡಿದ ಟೆಕ್ನೋ ಕಂಪನಿ

ಪಾಪ್‌ ಸರಣಿಯಲ್ಲಿ ಹೊಸ ಟೆಕ್ನೋ ಪಾಪ್‌ 5X ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ ಈ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

Tecno Pop 5X: ಶಾಕಿಂಗ್: ಆಂಡ್ರಾಯ್ಡ್‌ 10 OS ಬೆಂಬಲವಿರುವ ಹೊಸ ​ಫೋನ್ ಬಿಡುಗಡೆ ಮಾಡಿದ ಟೆಕ್ನೋ ಕಂಪನಿ
Tecno Pop 5X
Updated By: Vinay Bhat

Updated on: Jan 27, 2022 | 2:52 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚೆಗಷ್ಟೆ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿ ಸದ್ದು ಮಾಡಿತ್ತು. ಇದೀಗ ತನ್ನ ಪಾಪ್‌ ಸರಣಿಯಲ್ಲಿ ಹೊಸ ಟೆಕ್ನೋ ಪಾಪ್‌ 5X ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ ಈ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಆಂಡ್ರಾಯ್ಡ್ 11, 12 ಓಎಸ್ ಇರುವಾಗ ಇದು ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಬಿಡುಗಡೆ ಆಗಿರುವುದು ಅಚ್ಚರಿ ಮೂಡಿಸಿದೆ. ಸದ್ಯಕ್ಕೆ ಈ ಫೋನ್ ಮೆಕ್ಸಿಕೋದಲ್ಲಿ ಅನಾವರಣ ಮಾಡಿದೆ.

ಏನು ವಿಶೇಷತೆ?:

ಟೆಕ್ನೋ ಪಾಪ್‌ 5X ಸ್ಮಾರ್ಟ್‌ಫೋನ್‌ 720 x 1,560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ + ವಾಟರ್‌ ಡ್ರಾಪ್ ನಾಚ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 720×1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. 1.4GHz ಕ್ವಾಡ್ ಕೋರ್ SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲವನ್ನು ಒಳಗೊಂಡಿದೆ.

ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಇತರೆ ಎರಡು QVGA ರೆಸಲ್ಯೂಶನ್ ಕ್ಯಾಮೆರಾಗಳನ್ನು ಹೊಂದಿದೆ. ಅದಲ್ಲದೇ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 32GB ಅಂತರ್ಗತ ಸಂಗ್ರಹಣೆಯೊಂದಿಗೆ ಬರುತ್ತದೆ. ಮೈಕ್ರೊ ಎಸ್‌ಡಿ ಕಾರ್ಡ್‌ ಸ್ಲಾಟ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

4,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಒಳಗೊಂಡಿದ್ದು, AI-ಆಧಾರಿತ ವಿದ್ಯುತ್ ನಿರ್ವಹಣೆಯು 10 ಪ್ರತಿಶತದಷ್ಟು ಸುಧಾರಿತ ಬ್ಯಾಟರಿ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿಯು ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಜಿಪಿಎಸ್‌ ಮತ್ತು ಎಫ್‌ಎಮ್‌ ಆಯ್ಕೆಗಳು ಸೇರಿವೆ. ಈ ಫೋನ್ ಭಾರತದಲ್ಲೂ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ, ಈವರೆಗೆ ಯಾವುದೇ ಅಧಿಕೃತ ಮಾಹಿತಿ ಕಂಪನಿ ಹೊರಹಾಕಿಲ್ಲ.

ಇತ್ತೀಚೆಗಷ್ಟೆ ಟೆಕ್ನೋ ಕಂಪನಿ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಇದು ಬಜೆಟ್ ಬೆಲೆಯ ಫೋನ್ ಆಗಿದ್ದರೂ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಆಕ್ಟಾ-ಕೋರ್ ಮೀಡಿಯಾಟೆಕ್‌ ಪ್ರೊಸೆಸರ್‌, ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಸೇರಿದಂತೆ ಅತ್ಯುತ್ತಮ ಬಲಿಷ್ಠವಾದ ಬ್ಯಾಟರಿಯನ್ನು ಹೊಂದಿದೆ. ತನ್ನ ಏಕೈಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 12,999 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಗೀಕ್ ಬ್ಲೂ, ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಪವರ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ.

Sundar Pichai: ಚಿತ್ರ ನಿರ್ಮಾಪಕರಿಂದ ದೂರು: ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್‌ಐಆರ್ ದಾಖಲು